ಬೆಂಗಳೂರು: ಇಲ್ಲಿನ ಡೈರಿ ಸರ್ಕಲ್ ಸಮೀಪದ ಮಹಾಲಿಂಗೇಶ್ ಬಡಾವಣೆಯಲ್ಲಿ ಗುರುವಾರ (ಆ.24) ಬೆಳಗ್ಗೆ 9 ಗಂಟೆ ಸುಮಾರಿಗೆ ಗ್ಯಾಸ್ ಸಿಲಿಂಡರ್ (Bengaluru Cylinder Blast) ಸ್ಫೋಟಗೊಂಡಿದೆ. ಸಿಲಿಂಡರ್ ಪಕ್ಕದಲ್ಲೇ ಮಲಗಿದ್ದ ರವಿ (45) ಎಂಬಾತ ಮೃತಪಟ್ಟಿದ್ದಾನೆ. ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಮೊದಲ ಮಹಡಿಯಲ್ಲಿರುವ ಪೋಲಮ್ಮಸ್ ಮೆಸ್ ಹೋಟೆಲ್‌ನಲ್ಲಿದ್ದ ಕಮರ್ಷಿಯಲ್ ಸಿಲಿಂಡರ್ ಸ್ಫೋಟಗೊಂಡಿದೆ. ಗುರುವಾರ ಬೆಳಗ್ಗೆ ಎಂದಿನಂತೆ ಅಡುಗೆ ಭಟ್ಟರು ಟಿಫನ್‌ಗೆ ತಯಾರಿ ಮಾಡುತ್ತಿದ್ದರು. ಈ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ. ಮೊದಲ ಮಹಡಿಯಲ್ಲಿ ಅಡುಗೆ ಮಾಡುತ್ತಿದ್ದ ನಾಗರಾಜ್ ಹಾಗೂ ರೋಮಯ್ಯ ಚೋರ್ಲಾ ಗಂಭೀರ ಗಾಯಗೊಂಡಿದ್ದಾರೆ. ಮೂಲತಃ ಇವರು ಅಸ್ಸಾಂ ಮೂಲದವರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Murder Case : ಪತ್ನಿಯ ಕೊಂದು ಹೂತುಹಾಕಿದನೇ ಸಂಶಯಪಿಶಾಚಿ ಗಂಡ? ; 20 ದಿನಗಳ ಬಳಿಕ ಶವ ಮೇಲೆತ್ತಿ ಪರೀಕ್ಷೆ
ಇತ್ತ ಸಿಲಿಂಡರ್ ಜಾಗದಲ್ಲಿ ಮಲಗಿದ್ದ ರವಿ ದಾರುಣವಾಗಿ ಮೃತಪಟ್ಟಿದ್ದಾರೆ. ಮೆಸ್ ನಡೆಸುತ್ತಿದ್ದ ಕಾರಣಕ್ಕೆ ಕಟ್ಟಡದ ಕೆಳ ಮಹಡಿಯಲ್ಲಿ ಸಿಲಿಂಡರ್‌ಗಳನ್ನು ಇಡಲಾಗಿತ್ತು. ಒಳ ಭಾಗದಲ್ಲಿ ಒಟ್ಟು 10 ಕಮರ್ಷಿಯಲ್ ಸಿಲಿಂಡರ್‌ಗಳನ್ನ ಇಡಲಾಗಿತ್ತು. ಸ್ಫೋಟಗೊಂಡ ಸಿಲಿಂಡರ್ ಪಕ್ಕದಲ್ಲೆ 10 ಸಿಲಿಂಡರ್‌ಗಳು ಇದ್ದವು. ಒಂದು ವೇಳೆ ಆ ಸಿಲಿಂಡರ್ ಸ್ಫೋಟಗೊಂಡಿದರೆ ದೊಡ್ಡ ಅನಾಹುತವೇ ಆಗುತ್ತಿತ್ತು. ಅದೃಷ್ಟವಶಾತ್ ಉಳಿದ ಸಿಲಿಂಡರ್ ಯಾವುದೇ ಹಾನಿಯಾಗಿಲ್ಲ. ಇದರಿಂದಾಗಿ ನಡೆಯಬಹುದಾದ ದುರಂತವೊಂದು ತಪ್ಪಿದೆ.
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದು, ಬೆಂಕಿ ನಂದಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರವಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಿಲಿಂಡರ್ ಸ್ಫೋಟ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತ ಜನರು ಜಮಾಯಿಸಿದ್ದಾರೆ.
ಗ್ಯಾಸ್ ಲೀಕೆಜ್‌ನಿಂದ ದುರಂತ
ಘಟನೆ ಸಂಬಂಧ ಮಾಹಿತಿ ನೀಡಿದ ಡಿಸಿಪಿ ಸಿ.ಕೆ ಬಾಬ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲಮ್ಮಾಸ್ ಮೆಸ್‌ನಲ್ಲಿ ಸಿಲಿಂಡರ್ ಸ್ಫೋಟವಾಗಿದೆ. ಮೆಸ್ ಮೊದಲ ಮಹಡಿ ಹಾಗೂ ಅದರ ಮೇಲೆ ಅಡುಗೆ ಮನೆ ಇದೆ. ಕೆಳ ಭಾಗದಲ್ಲಿ ಕೆಲಸ ಮಾಡುವ ಕಾರ್ಮಿಕರು ಇರುತ್ತಾರೆ. ಪಕ್ಕದಲ್ಲೇ ಸಿಲಿಂಡರ್ ಇಡಲಾಗಿತ್ತು. ಸಿಲಿಂಡರ್ ಪೈಪ್ ಮೂಲಕ ಗ್ಯಾಸ್ ಲೀಕೆಜ್ ಆಗಿ ಸ್ಫೋಟಗೊಂಡಿದೆ. ಸ್ಫೋಟದಿಂದ ಅಡುಗೆ ಕೆಲಸ ಮಾಡುವವರು ಮಲಗಿದ್ದ ರೂಂ ಶಟರ್ ಡ್ಯಾಮೇಜ್ ಆಗಿದೆ. ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದರೆ, ಇಬ್ಬರಿಗೆ ಸುಟ್ಟು ಗಾಯಗಳಾಗಿದೆ. ಯಾರ ಲೋಪವಿದೆ? ಇಷ್ಟೊಂದು ಸಿಲಿಂಡರ್ ಸಂಗ್ರಹ ಮಾಡಬಹುದಾ? ಎಂಬುದರ ಕುರಿತಾಗಿ ಸದ್ಯ ತನಿಖೆ ಮುಂದುವರೆದಿದೆ ಎಂದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ