Site icon Vistara News

Bharat Jodo Yatra | ಗಣಿನಾಡಿನಲ್ಲಿ ಎರಡು ದಿನ ರಾಹುಲ್ ಗಾಂಧಿ ವಾಸ್ತವ್ಯ: ಡಿ.ಕೆ.ಶಿವಕುಮಾರ್

Congress planning to take chilume voter data case to national level

ಬಳ್ಳಾರಿ: ಕಾಂಗ್ರೆಸ್‌ನಿಂದ ಹಮ್ಮಿಕೊಂಡಿರುವ ಭಾರತ್‌ ಜೋಡೋ ಯಾತ್ರೆ(Bharat Jodo Yatra) ಭಾಗವಾಗಿ ಜಿಲ್ಲೆಯಲ್ಲಿ ಎರಡು ದಿನ ರಾಹುಲ್ ಗಾಂಧಿ ಅವರು ವಾಸ್ತವ್ಯ ಹೂಡಲಿದ್ದಾರೆ. ಅವರಿಗೆ ಯಾರ ಮನೆಯಲ್ಲೂ ವಸತಿ ವ್ಯವಸ್ಥೆ ಮಾಡಲ್ಲ, ವಾಸ್ತವ್ಯಕ್ಕೆ ಪ್ರತ್ಯೇಕ ವಾಹನದ ವ್ಯವಸ್ಥೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.‌

ನಗರದಲ್ಲಿ ಅ.೧೯ರಂದು ಭಾರತ್ ಜೋಡೋ ಯಾತ್ರೆ ಬೃಹತ್ ಸಮಾವೇಶ‌ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸಮಾವೇಶದ ನಡೆಯುವ ಸ್ಥಳವನ್ನು ಮಂಗಳವಾರ ಪರಿಶೀಲಿಸಿ ಮಾತನಾಡಿದ ಅವರು, ಸೆ.30ರಂದು ರಾಜ್ಯಕ್ಕೆ ಭಾರತ್‌ ಜೋಡೋ ಯಾತ್ರೆ ಪ್ರವೇಶಿಸಲಿದೆ. ಯಾತ್ರೆ ಸಾಗುವ ಮಾರ್ಗದಲ್ಲಿ ಬಳ್ಳಾರಿಯಲ್ಲಿ ಮಾತ್ರ ಅ.19ರಂದು ಬೃಹತ್ ಸಮಾವೇಶ ಹಮ್ಮಿಕೊಂಡಿದ್ದೇವೆ. ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಜನರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆಯಿಂದ ಸಾರ್ವಜನಿಕ ಸಭೆ ಆರಂಭವಾಗಲಿದೆ. ಕಾರ್ಯಕರ್ತರ ವಾಹನಗಳ ನಿಲುಗಡೆಗೆ ಅಗತ್ಯ ವ್ಯವಸ್ಥೆ ಮಾಡುತ್ತೇವೆ ಎಂದರು.‌

ಇದನ್ನೂ ಓದಿ | ಕಾಲು ಜಾರಿ ಟೀಪಾಯಿ ಮೇಲೆ ಕುಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಎಐಸಿಸಿ ಚುನಾವಣೆ ನಡೆದರೆ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಮತದಾನ ಮಾಡಲಿದ್ದಾರೆ. ಅ.17ರಂದು ಮತದಾನ ಮಾಡಬೇಕಾಗುತ್ತದೆ. ಇದರಿಂದ ಯಾತ್ರೆಯಲ್ಲಿ ಒಂದು ದಿನ ಹಿಂದೆ ಮುಂದೆ ಆಗಬಹುದು. ಸಮಾವೇಶದಲ್ಲಿ ಎಷ್ಟು ಜನರು ಭಾಗಿ ಆಗುತ್ತಾರೆಂದು ನಿಮ್ಮ ಕ್ಯಾಮೆರಾ, ನಿಮ್ಮ ಕಣ್ಣು ಸಮಾವೇಶಕ್ಕೆ ಸಾಕ್ಷಿಯಾಗಲಿವೆ ಎಂದರು.

ಕಾಂಗ್ರೆಸ್‌ನ ಮೂರ್ನಾಲ್ಕು ಶಾಸಕರು ಬಿಜೆಪಿಗೆ ಬರುತ್ತಾರೆ ಎಂಬ ಶಾಸಕ ಸೋಮಶೇಖರರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ಮೊದಲು ಬೇರೆ ಪಕ್ಷದ ಶಾಸಕರೇ ಕಾಂಗ್ರೆಸ್‌ಗೆ ಬಂದಿದ್ದರು. ಬಿಜೆಪಿಯವರು ಮೊದಲು ಮೂಹೂರ್ತ ಫಿಕ್ಸ್ ಮಾಡಲಿ ಎಂದು ಹೇಳಿದರು.

ಬಳ್ಳಾರಿ ಸಮಾವೇಶ ಸ್ಥಳ ಪರಿಶೀಲನೆ ವೇಳೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, KPCC ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಲೀಂ ಅಹಮ್ಮದ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿ ಸುಧೀರ್ ಬಾಬು, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಶಾಸಕ ನಾಗೇಂದ್ರ, ಮಾಜಿ ಸಚಿವ ದಿವಾಕರಬಾಬು, ಅಲ್ಲಂ ವೀರಭದ್ರಪ್ಪ, ಅನಿಲ್ ಲಾಡ್, ಮೇಯರ್ ರಾಜೇಶ್ವರಿ ಮತ್ತಿತರು ಇದ್ದರು.

ಇದನ್ನೂ ಓದಿ | ಎಲೆಕ್ಷನ್‌ ಹವಾ | ಮಂಗಳೂರು | ʼಖಾದರ್‌ʼ ಖಾನ್‌ದಾನ್‌ ಎದುರು ಬಿಜೆಪಿ ಭವಿಷ್ಯ ಮಂಕಾಗಿದೆ, ಪ್ರಯತ್ನ ಜಾರಿಯಲ್ಲಿದೆ

Exit mobile version