Site icon Vistara News

Sindhuri Vs Roopa : ನಾನು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದೇನೆ ಅಂತೀರಾ? ಬಿಡಲ್ಲ, ಕೇಸು ಹಾಕ್ತೇನೆ ಎಂದ ರೂಪಾ

D roopa Rohini sindhuri sindhuri-vs-roopa-both all india cadre officers tranferred along with munish moudgil

#image_title

ಬೆಂಗಳೂರು: ಐಪಿಎಸ್‌ ಅಧಿಕಾರಿ ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ (Sindhuri Vs Roopa) ನಡುವಿನ ಜಟಾಪಟಿ ಜೋರಾಗಿಯೇ ಮುಂದುವರಿದಿದೆ. ಡಿ. ರೂಪಾ ಅವರು ಬೆಳಗ್ಗಿನಿಂದ ಮಾಡುತ್ತಿರುವ ಆರೋಪಗಳಿಗೆ ರೋಹಿಣಿ ಅವರು ಮಧ್ಯಾಹ್ನದ ಹೊತ್ತಿಗೆ ಪ್ರತಿಕ್ರಿಯಿಸಿದರು. ಅದಾದ ಬಳಿಕ ಅವರೊಂದು ಇವರೊಂದು ಹೇಳಿಕೆ ನೀಡುತ್ತಿರುವುದು ಮುಂದುವರಿದಿದೆ. ಇದೀಗ ʻಡಿ. ರೂಪಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದೇನೆʼ ಎಂಬ ರೋಹಿಣಿ ಸಿಂಧೂರಿ ಹೇಳಿಕೆಗೆ ರೂಪಾ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.

ಡಿ. ರೂಪಾ ಹೇಳಿದ್ದೇನು?

ʻʻಮಾನಸಿಕ ಸ್ಥಿಮಿತ ಯಾರು ಕಳೆದುಕೊಂಡಿರುವುದು? ನಿಮ್ಮ ಬಣ್ಣ ಬಯಲಾಯಿತು ಎಂದು ಹತಾಶೆಯ ಮಾತೇ? ನೀವು ಒಂದು ಕಡೆ ಹೇಳಿದ್ದೀರಿ, ಡಿಕೆ ರವಿಗೆ mental illness ಇದ್ದದ್ದರಿಂದ ಸತ್ತದ್ದು ಅಂತ. ಈಗ ನಾನು ನಿಮ್ಮನ್ನು ಎಕ್‌ಪೋಸ್‌ ಮಾಡಿದೆ ಎಂಬ ಕಾರಣಕ್ಕೆ ನನಗೇ ಮಾನಸಿಕ ಸ್ಥಿಮಿತತೆ ಇಲ್ಲ ಅಂತೀರಾ?ʼʼ ಎಂದು ಕೇಳಿರುವ ಡಿ. ರೂಪಾ, ನನ್ನಲ್ಲಿ ಕ್ಷಮೆ ಕೇಳದೆ ಇದ್ದರೆ ಇದೆ ನೀವು ಹೇಳಿದ ಮಾತಿಗೆ ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆʼʼ ಎಂದು ಎಚ್ಚರಿಸಿದ್ದಾರೆ.

ʻʻನೀವು ಭ್ರಷ್ಟಾಚಾರ ಮಾಡಿದ ಚಾಟ್‌ಗಳೂ ನನ್ನ ಬಳಿ ಇವೆ. ಅಲ್ಲದೆ, ನೀವು ಸೇವಾ ನಿಯಮ ಉಲ್ಲಂಘಿಸಿದ ಬಗ್ಗೆ ಕಾನೂನು ಕ್ರಮ ಆಗಲೇಬೇಕು. ನಿಮ್ಮ ಮೋಜಿನ ಸ್ವಿಮ್ಮಿಂಗ್ ಪೂಲ್ ಡಿಸಿ ಮನೆಯಲ್ಲಿ ಸಾರ್ವಜನಿಕ ಹಣದಿಂದ ಕಟ್ಟಿದ್ದು , ಅದೂ ಕೋವಿಡ್‌ ಕಾಲದಲ್ಲಿ. ಹಾಗೂ ಹೆರಿಟೇಜ್ ಕಟ್ಟಡ ಕಾಯ್ದೆ ಉಲ್ಲಂಘನೆ ಇವುಗಳ ಬಗ್ಗೆ ಶಿಸ್ತು ಕ್ರಮ ಆಗಬೇಕು. ಇದನ್ನು ನಾನೂ ಫಾಲೋ ಅಪ್ ಮಾಡ್ತೇನೆ. ನೆನಪಿಡಿʼʼ ಎಂದು ಗುಡುಗಿದ್ದಾರೆ ರೂಪಾ.

ಕಾನೂನು ಸಚಿವರು ಕ್ಲಾಸ್‌ ತೆಗೆದುಕೊಂಡರೇ?

ಸಿಂಧೂರಿ ಅವರೇ, ನಿಮ್ಮ ಈ ಚಾಟ್ಸ್, ಪಿಕ್ಸ್ ನೋಡಿ (ಅಂದರೆ ನಾನು ಈಗಾಗಲೇ ಇಲ್ಲಿ ಹಾಕಿದ ಪಿಕ್ಸ್) ನೋಡಿ ಈ ರಾಜ್ಯದ ಕಾನೂನು ಮಂತ್ರಿಯವರು, ನಾಲ್ಕು ದಿನಗಳ ಹಿಂದೆಯೇ ನಿಮಗೆ ಏನು class ತಗೊಂಡು ಏನು ಬುದ್ಧಿವಾದ ಹೇಳಿದರು ಶಕ್ತಿ ಸೌಧ ವಿಧಾನ ಸೌಧದಲ್ಲಿ ಅದನ್ನೂ ಜನತೆಗೆ ತಿಳಿಸಿ ಎಂದು ಡಿ. ರೂಪಾ ಹೇಳಿದ್ದಾರೆ. ಹಾಗಿದ್ದರೆ ಕಾನೂನು ಸಚಿವರು ರೋಹಿಣಿ ಸಿಂಧೂರಿ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದರೇ ಎಂಬ ಪ್ರಶ್ನೆ ಎದುರಾಗಿದೆ.

Exit mobile version