Site icon Vistara News

ರೋಹಿತ್‌ ಚಕ್ರತೀರ್ಥಗೆ ನಾಗರಿಕ ಸನ್ಮಾನ ನಾಳೆ; ಮುತ್ತಿಗೆ ಹಾಕಲು ಸಂಘಟನೆಗಳ ತೀರ್ಮಾನ

rohith chakratirtha

ಮಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾಗಿದ್ದ ಲೇಖಕ ರೋಹಿತ್‌ ಚಕ್ರತೀರ್ಥ ಅವರ ಪರ-ವಿರೋಧದ ಬಣವೇ ಸೃಷ್ಟಿಯಾಗಿದೆ. ರೋಹಿತ್‌ ಚಕ್ರತೀರ್ಥ ಅವರ ಸಮಿತಿಯನ್ನು ವಿಸರ್ಜನೆ ಮಾಡಿದರೂ ಅವರ ಮೇಲಿನ ಆಕ್ರೋಶ ಕಡಿಮೆ ಆಗಿಲ್ಲ. ಶನಿವಾರ ಮಂಗಳೂರಿನಲ್ಲಿ ರೋಹಿತ್ ಚಕ್ರತೀರ್ಥ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ. ಚಿಂತನಗಂಗಾ ಸಂಘಟನೆ ವತಿಯಿಂದ ನಾಗರಿಕ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು ಇದಕ್ಕೆ ವಿರೋಧ ವ್ಯಕ್ತವಾಗಿದೆ.

ನಾಗರಿಕ ಸನ್ಮಾನ ಕೈ ಬಿಡಲು ಒತ್ತಾಯಿಸಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ನಿರ್ಧಾರ ಮಾಡಲಾಗಿದ್ದು, ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಹೆಸರಿನಲ್ಲಿ ಎಡಪಂಥೀಯ ಸಂಘಟನೆಗಳಿಂದ ಪ್ರತಿಭಟನೆಗೆ ಕರೆ ನೀಡಲಾಗಿದೆ. ಶನಿವಾರ ಸಂಜೆ 4.30 ಕ್ಕೆ ಸಿಟಿ ಸೆಂಟರ್ ಮಾಲ್‌ನಿಂದ ಪ್ರತಿಭಟನಾ ಮೆರವಣಿಗೆ ಶುರುವಾಗಲಿದ್ದು, ಡೊಂಗರಕೇರಿ ಕೆನರಾ ಹೈಸ್ಕೂಲ್‌ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುತ್ತಿಗೆ ‌ಹಾಕುವ ಯೋಜನೆಯಿದೆ.

ಇದನ್ನೂ ಓದಿ | ಪಠ್ಯದಲ್ಲಿ ಕೋಮುವಾದದ ಅಫೀಮು ಸೇರಿಸುತ್ತಿದ್ದಾರೆ: ಮಾಜಿ ಸಚಿವ ಮಹದೇವಪ್ಪ

ಸಮಾನ ಮನಸ್ಕ ಸಂಘಟನೆಗಳು, ನಾಗರಿಕರು ಸೇರಿ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದು, ನಾಳಿನ ಪ್ರತಿಭಟನೆಯ ನೇತೃತ್ವವನ್ನು ಡಿವೈಎಫ್ಐ ರಾಜ್ಯಾಧ್ಯಕ್ಷ  ಮುನೀರ್ ಕಾಟಿಪಳ್ಳ ವಹಿಸಿಕೊಂಡಿದ್ದಾರೆ. ಮಂಗಳೂರು ವಿವಿ ಕುಲಪತಿ ಡಾ.ಸುಬ್ರಹ್ಮಣ್ಯ ಯಡಿಪಡಿತ್ತಾಯ ಅಧ್ಯಕ್ಷತೆಯಲ್ಲಿ ನಾಗರಿಕ ಸನ್ಮಾನ ನಡೆಯುತ್ತಿದ್ದು, ಅವರ ಉಪಸ್ಥಿತಿ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | ಅವಮಾನ ಮಾಡಿದವರಿಗೆ ನಾಗರಿಕ ಸನ್ಮಾನ ಯಾಕೆ? ರೋಹಿತ್‌ ಚಕ್ರತೀರ್ಥ ವಿರುದ್ದ ಜಾಲತಾಣದಲ್ಲಿ ಕಿಡಿ

Exit mobile version