ಮಂಗಳೂರು: ಬೆಂಗಳೂರಿಗೆ ಶನಿವಾರ (ಡಿ.23) ರಾತ್ರಿ 8.15ಕ್ಕೆ ಮಂಗಳೂರಿನಿಂದ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ (Air India flight) ಕೊನೇ ಕ್ಷಣದಲ್ಲಿ ರದ್ದು ಮಾಡಲಾಗಿದೆ. ಇದರಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಂಜಾರಿನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾತ್ರಿ 8.15ಕ್ಕೆ ಏರ್ ಇಂಡಿಯಾ ವಿಮಾನ ಬೆಂಗಳೂರಿಗೆ ಹೊರಡಬೇಕಿತ್ತು. ಆದರೆ, ವಿಮಾನ ಬಾರದ ಕಾರಣದಿಂದ ಆಕ್ರೋಶಗೊಂಡಿದ್ದರು.
ಇದನ್ನೂ ಓದಿ: JDS Politics : ಜೆಡಿಎಸ್‌ನಿಂದ ಇಬ್ರಾಹಿಂ ಉಚ್ಚಾಟನೆ: ದೇವೇಗೌಡ, ಎಚ್‌ಡಿಕೆಗೆ ಕೋರ್ಟ್ ಸಮನ್ಸ್
ಅಮೆರಿಕಕ್ಕೆ ಪ್ರಯಾಣ ಬೆಳೆಸಬೇಕಿದ್ದವರು, ಪರೀಕ್ಷೆ ಬರೆಯಲು ಹೊರಟವರು ಹಾಗೂ ಕ್ರಿಸ್ಮಸ್ ಹಬ್ಬಕ್ಕೆ ತೆರಳುತ್ತಿದ್ದ ಪ್ರಯಾಣಿಕರು ವಿಮಾನ ಬಾರದ ಕಾರಣ ಮಂಗಳೂರು ವಿಮಾನ ನಿಲ್ದಾಣದಲ್ಲೇ ಬಾಕಿ ಆಗಿದ್ದರು.
ಏಕಾಏಕಿ ವಿಮಾನ ಇಲ್ಲವೆಂದಾಗ ಆಕ್ರೋಶ
ಪ್ರಯಾಣಿಕರೆಲ್ಲರೂ ಇನ್ನೇನು ವಿಮಾನ ಹತ್ತಬೇಕೆನ್ನುವ ಹೊತ್ತಿಗೆ ವಿಮಾನವೇ ಇಲ್ಲ ಎಂದು ತಿಳಿದು ಕಂಗಾಲಾಗಿ ಹೋಗಿದ್ದರು. ನಾವು ತುರ್ತಾಗಿ ಹೋಗಲೇಬೇಕು, ಪರ್ಯಾಯ ವ್ಯವಸ್ಥೆ ಮಾಡಿ ಎಂದು ವಿಮಾನ ಸಿಬ್ಬಂದಿ ಮೇಲೆ ದುಂಬಾಲು ಬಿದ್ದಿದ್ದರು. ಸಿಬ್ಬಂದಿ ಪ್ರಯಾಣಿಕರನ್ನು ಸಮಾಧಾನ ಮಾಡಲೆತ್ನಿಸಿದರೂ ಯಾರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೆ, ಏರ್ ಇಂಡಿಯಾ ಸಿಬ್ಬಂದಿ ವಿಮಾನವು ತೊಂದರೆಗೀಡಾಗಿದ್ದು ತಾಂತ್ರಿಕ ಅಡಚಣೆಯಿಂದ ಬೆಂಗಳೂರಿನಲ್ಲಿಯೇ ಉಳಿದಿದೆ ಎನ್ನಲಾಗಿದೆ.
ಇದನ್ನೂ ಓದಿ: BY Vijayendra: ಇನ್ನು ಮೂರ್ನಾಲ್ಕು ದಿನ ಕಾದು ನೋಡಿ, ಬೇರೆ ಬೇರೆ ಪಟ್ಟಿ ರಿಲೀಸ್ ಆಗುತ್ತೆ: ವಿಜಯೇಂದ್ರ
ಬೆಳಗಿನ ಜಾವ 2.15ಕ್ಕೆ ಬೇರೆ ವಿಮಾನ
ಪರ್ಯಾಯ ವ್ಯವಸ್ಥೆ ಮಾಡಿದ್ದು ಬೆಳಗಿನ ಜಾವ 2.15ಕ್ಕೆ ಬೇರೊಂದು ವಿಮಾನದಲ್ಲಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದೇವೆ ಎಂದಿದ್ದಾರೆ. ರಾತ್ರಿ 8.15ಕ್ಕೆ ಹೊರಡಬೇಕಿದ್ದ ವಿಮಾನಕ್ಕಾಗಿ ಬಂದಿದ್ದ ಪ್ರಯಾಣಿಕರು ಬದಲಿ ವ್ಯವಸ್ಥೆಗಾಗಿ ವಿಮಾನ ನಿಲ್ದಾಣದಲ್ಲಿಯೇ ನಡುರಾತ್ರಿಯವರೆಗೆ ಕಾದು ಕುಳಿತು ಬಳಿಕ ಪ್ರಯಾಣಿಸಿದ್ದಾರೆ.