Site icon Vistara News

Attack on Road : ಅಂಗಡಿಯಿಂದ ಹೊರಗೆ ಎಳೆದು ಗೂಂಡಾಗಿರಿ; ಬಜರಂಗ ದಳ ಮುಖಂಡನ ಕೃತ್ಯ

Bajarang dal leader

ಮಂಗಳೂರು: ಬಜರಂಗದಳ ಮುಖಂಡ ಮತ್ತು ತಂಡ ನಡುಬೀದಿಯಲ್ಲಿ ಗೂಂಡಾಗಿರಿ ನಡೆಸಿದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ದ.ಕ. ಜಿಲ್ಲೆಯ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಜರಂಗದಳ ಮುಖಂಡ, ರೌಡಿಶೀಟರ್ ಭರತ್ ಕುಮ್ಡೇಲು ಮತ್ತು ತಂಡದಿಂದ ಈ ಹಲ್ಲೆ ನಡೆದಿದೆ.

ಉಪ್ಪಿನಂಗಡಿಯ ಪೇಟೆಯಲ್ಲಿ ಹರೀಶ ನಾಯ್ಕ, ಸುದರ್ಶನ್ ಕುಮಾರ್, ರಮಾನಂದ ಎಂಬವರ ಮೇಲೆ ಈ ತಂಡ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಜಾಗದ ವಿಚಾರದಲ್ಲಿ ತಕರಾರು ಇದ್ದ ಹಿನ್ನೆಲೆಯಲ್ಲಿ ಭರತ್‌ ಮತ್ತು ತಂಡ ಅಂಗಡಿಗೆ ನುಗ್ಗಿ ನಾಲ್ವರ ಮೇಲೆ ಹಲ್ಲೆ ನಡೆಸಿದೆ.

ಅಂಗಡಿಯಿಂದ ಹೊರಗೆಳೆದು ನಡುರಸ್ತೆಯಲ್ಲಿ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈಗ ವೈರಲ್‌ ಆಗಿದೆ.

ಬಜರಂಗ ದಳಕ್ಕೆ ಸೇರಿದ ಜಗಜೀವನ್ ರೈ, ಭವಿಷ್, ಸಂದೀಪ್ ಎಂಬವರು ಭರತ್ ಕುಮ್ಡೇಲು ಜೊತೆ ಸೇರಿ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಎಸ್ಸಿ- ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಭರತ್ ಕುಮ್ಡೇಲು ಕಲ್ಲಡ್ಕದ ಬಜರಂಗದಳ ಮುಖಂಡನಾಗಿದ್ದು ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದಾನೆ. ಈತ 2017ರಲ್ಲಿ ನಡೆದ ಎಸ್‌ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ.

ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ: ಸ್ಥಳದಲ್ಲಿಯೇ ಒಬ್ಬ ಸಾವು

ಗಂಗಾವತಿ: ತನ್ನ ವಿರುದ್ಧ ಪತ್ನಿಗೆ ಸಲ್ಲದ ಚಾಡಿ ಹೇಳುತ್ತಿದ್ದಾನೆ ಎಂದು ಕುಪಿತಗೊಂಡ ಯುವಕನೊಬ್ಬ ಮತ್ತೊಬ್ಬನಿಗೆ ಚಾಕು ಇರಿದು ಕೊಲೆ ಮಾಡಿದ ಘಟನೆ ನಗರದ ಎಚ್ ಆರ್ ಎಸ್ ಕಾಲೋನಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಘಟನೆಯಲ್ಲಿ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯನ್ನು ಮೌಲಾಹುಸೇನ್ (36) ಎಂದು ಗುರುತಿಸಲಾಗಿದೆ. ಚಾಕು ಇರಿದ ವ್ಯಕ್ತಿಯನ್ನು ಅದೇ ಏರಿಯಾದ ನೂರ್ ಅಹ್ಮದ್ ಎಂದು ಗುರುತಿಸಲಾಗಿದೆ. ಇಬ್ಬರೂ ಚಿಕನ್ ವ್ಯಾಪಾರಿಗಳಾಗಿದ್ದು, ಘಟನೆಗೆ ಮೂಲ ಕಾರಣ ಗೊತ್ತಾಗಿಲ್ಲ. ಆದರೆ ತನ್ನ ಪತ್ನಿಗೆ ಮೌಲಾ ಹುಸೇನ್ ಚಾಡಿ ಹೇಳುತ್ತಿದ್ಸಾನೆ ಎಂಬ ಕಾರಣಕ್ಕೆ ನೂರ್ ಅಹ್ಮದ್ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಗಾಯಕ್ಕೀಡಾದ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ : Attempt to murder : ಮೊಬೈಲ್ ಫ್ಲಾಶ್‌ ಮಾಡಲ್ಲ ಎಂದವನಿಗೆ ಲಾಂಗ್‌ನಿಂದ ಹೊಡೆದು ಅಟ್ಟಾಡಿಸಿದ ಕಳ್ಳಿ!

ಕೊಲೆ ಮಾಡಿದ ಬಳಿಕ ನೂರ್ ಅಹ್ಮದ್ ತನ್ನ ಮೊಬೈಲ್ ಸ್ಟೇಟಸ್ ನಲ್ಲಿ ಈ ಬಗ್ಗೆ ಬರೆದುಕೊಂಡು ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.. ವಿಚಿತ್ರ ಎಂದರೆ ಕೊಲೆಯಾದವ ಮತ್ತು ಕೊಲೆ ಮಾಡಿದವ ಇಬ್ಬರೂ ಒಂದೇ ಕುಟುಂಬದ ಸಹೋದರಿಯರನ್ನು ವಿವಾಹವಾಗಿದ್ದಾರೆ ಎಂದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡ ನಗರ ಪೊಲೀಸರು ಆರೋಪಿಯನ್ನಜ ವಶಕ್ಕೆ ತನಿಖೆ ಕೈಗೊಂಡಿದ್ದಾರೆ.

Exit mobile version