Site icon Vistara News

Boat Capsize : ಸಮುದ್ರದಲ್ಲಿ ಮುಳುಗಿದ ಲಕ್ಷದ್ವೀಪ ಸರಕು ಹಡಗು; ಜೀವ ಕೈಲಿ ಹಿಡಿದಿದ್ದ ಸಿಬ್ಬಂದಿ ಕೊನೆಗೂ ರಕ್ಷಣೆ

Boat Capsize Mangalore

ಮಂಗಳೂರು: ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಸರಕು ಹೊತ್ತು (Mangalore to Lakshadweep Cargo Boat) ಹೊರಟಿದ್ದ ಮಂಜಿ ಬೋಟ್ ಒಂದು ಸಮುದ್ರ ಮಧ್ಯೆ ನೀರಿನಲ್ಲಿ ಮುಳುಗಿ ಅನಾಹುತ ಸಂಭವಿಸಿದೆ (Boat Capsizes in Sea). ಅದರಲ್ಲಿದ್ದ ಎಂಟು ಮಂದಿ ಸಿಬ್ಬಂದಿ ಕ್ಷಣ ಕ್ಷಣಕ್ಕೂ ಅಪಾಯದ ಸುಳಿಯಲ್ಲಿ ಸಿಲುಕಿದ್ದರು. ಕೆಲವರು ಅದರಲ್ಲಿ ರಕ್ಷಣಾ ಬೋಟ್‌ಗಳನ್ನು ಹಿಡಿದು ಸಮುದ್ರಕ್ಕೆ ಜಿಗಿದರೆ ಉಳಿದವರನ್ನು ಮೀನುಗಾರರು ರಕ್ಷಿಸಿದ್ದಾರೆ. ಸುಮಾರು ಮೂರು ದಿನ ಜೀವ ಕೈಯಲ್ಲಿ ಹಿಡಿದು ಸಿಬ್ಬಂದಿ ಬದುಕಿದ್ದಾರೆ (Boat workers Rescued). ಯಾವ ಕ್ಷಣ ಏನು ಬೇಕಾದರೂ ಆಗಬಹುದು ಎಂಬ ಆತಂಕದಲ್ಲಿ ಅನ್ನಾಹಾರವಿಲ್ಲದೆ ಬಳಲಿದ್ದಾರೆ.

ಲಕ್ಷ ದ್ವೀಪಕ್ಕೆ ಮಂಗಳೂರಿನಿಂದ ಆಹಾರ ವಸ್ತು, ಜಲ್ಲಿ, ಸಿಮೆಂಟ್‌ ಮತ್ತಿತರ ಸರಕುಗಳನ್ನು ದೊಡ್ಡ ದೋಣಿ (ಮಂಜಿ) ಮೂಲಕ ಒಯ್ಯಲಾಗುತ್ತದೆ. ಇದರ ಭಾಗವಾಗಿ ಮಾ.12ರಂದು ಮಂಗಳೂರಿನಿಂದ ಜಲ್ಲಿ, ಸಿಮೆಂಟ್ ಇನ್ನಿತರ ಸಾಮಗ್ರಿ ಹೊತ್ತು ಒಂದು ಮಂಜಿ ಹೊರಟಿತ್ತು.

ಆಳ ಸಮುದ್ರದಲ್ಲಿ ಮುಳುಗುತ್ತಿರುವ ಹಡಗು

ಸರಕು ತಂಬಿದ ಮಂಜಿ ಸಮುದ್ರದ ಮಧ್ಯೆ ಸಾಗುತ್ತಿದ್ದಂತೆಯೇ ತಾಂತ್ರಿಕ ತೊಂದರೆಗೀಡಾಗಿ ಅಲ್ಲೇ ಮುಳುಗಲು ಆರಂಭವಾಯಿತು. ಈ ನಡುವೆ ಅದನ್ನು ಉಳಿಸಿಕೊಳ್ಳುವ ಯಾವ ಪ್ರಯತ್ನವೂ ಸಫಲವಾಗಲಿಲ್ಲ. ಬೋಟು ಕ್ಷಣ ಕ್ಷಣವೂ ಮುಳುಗುತ್ತಿತ್ತು.

ಈ ನಡುವೆ, ಮಂಜಿಯ ಕ್ಯಾಪ್ಟನ್ ಮತ್ತು ಕೆಲವು ಸಿಬ್ಬಂದಿ ಸಣ್ಣ ಬೋಟಿನಲ್ಲಿ ಸಮುದ್ರಕ್ಕೆ ಹಾರಿ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಇನ್ನೂ ಕೆಲವು ಸಿಬ್ಬಂದಿಗೆ ಬೇರೆ ದಾರಿಯೇ ಇರಲಿಲ್ಲ. ಅವರು ಆಳ ಸಮುದ್ರದಲ್ಲಿ ಮುಳುಗುತ್ತಿರುವ ಮಂಜಿಯಲ್ಲಿ ನಿಂತು ಜೀವ ರಕ್ಷಣೆಗಾಗಿ ಕೈಬೀಸುತ್ತಿದ್ದರು.

ಈ ನಡುವೆ, ದೋಣಿಯೊಂದು ಈ ರೀತಿ ಅಪಾಯದಲ್ಲಿ ಸಿಲುಕಿರುವುದು ಲಕ್ಷದ್ವೀಪ ಬಳಿಯ ಕಲ್ಪೇನಿ ದ್ವೀಪದ ಬಳಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರಿಗೆ ಕಂಡಿತು. ಅವರು ತಕ್ಷಣವೇ ರಕ್ಷಣೆಗೆ ಧಾವಿಸಿದರು. ಮಂಜಿಯಲ್ಲಿದ್ದ ಎಂಟು ಮಂದಿ ಸಿಬ್ಬಂದಿಯನ್ನು ತಮ್ಮ ಬೋಟಿಗೆ ಹತ್ತಿಸಿಕೊಂಡು ಕಲ್ಪೇನಿ ದ್ವೀಪಕ್ಕೆ ಆಗಮಿಸಿದರು. ಅಲ್ಲಿ ಎಂಟೂ ಮಂದಿಯನ್ನ ಉಪಚರಿಸಿದರು.

Boat Capsize Mangalore1

ಈ ನಡುವೆ, ಮಂಗಳೂರಿನಿಂದ ಹೊರಟ ಬೋಟ್‌ ನಾಪತ್ತೆಯಾದ ಬಗ್ಗೆ ಕರಾವಳಿ ಕೋಸ್ಟ್‌ ಗಾರ್ಡ್‌ಗೆ ಮಾಹಿತಿ ನೀಡಲಾಗಿತ್ತು. ಅವರು ಮೂರು ದಿನಗಳ ಕಾಲ ಆಳ ಸಮುದ್ರದಲ್ಲಿ ಹುಡುಕಿದರೂ ಸಿಕ್ಕಿರಲಿಲ್ಲ. ಇದೀಗ ಅವರ ಸಿಬ್ಬಂದಿಯ ರಕ್ಷಣೆ ಆಗಿರುವುದನ್ನು ತಿಳಿದ ಕೋಸ್ಟ್‌ ಗಾರ್ಡ್‌ ಟೀಮ್‌ ಸ್ಪೀಡ್ ಬೋಟ್ ಮೂಲಕ ಹೋಗಿ ಅವರನ್ನು ಕೇರಳದ ಕೊಚ್ಚಿಗೆ ಕರೆತಂದಿದೆ.

ಇದನ್ನೂ ಓದಿ : boat capsizes: ದೋಣಿ ಮಗುಚಿ 13 ಶಾಲಾ ಮಕ್ಕಳು, ಇಬ್ಬರು ಶಿಕ್ಷಕರ ದುರ್ಮರಣ

ಸಮುದ್ರ ಮಧ್ಯದಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಮಂಜಿ ಸಿಬ್ಬಂದಿಗಳನ್ನು ರಕ್ಷಿಸಿದ ಮೀನುಗಾರರ ಮಾನವೀಯತೆ, ಸಮಯಪ್ರಜ್ಞೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಇದೇ ವೇಳೆ ಇನ್ನು ಮುಂದೆ ಸರಕು ಸಾಗಣೆ ಬೋಟುಗಳ ವಿಚಾರದಲ್ಲಿ ಹೆಚ್ಚಿನ ಮುತುವರ್ತಿ ವಹಿಸುವಂತೆ ಸೂಚಿಸಲಾಗಿದೆ. ತಾಂತ್ರಿಕ ಸಮಸ್ಯೆಗಳಿದ್ದರೆ ಪರಿಹರಿಸಿಕೊಂಡೇ ಬೋಟು ಇಳಿಸಬೇಕು ಎಂದು ಸೂಚಿಸಲಾಗಿದೆ.

Exit mobile version