ಮಂಗಳೂರು: ನಿಂತಲ್ಲಿ ನಿಲ್ಲದೆ, ಅತ್ತಿಂದಿತ್ತ ಓಡಾಡುತ್ತಾ, ಕ್ಷಣಕೊಂದು ತುಂಟಾಟ ಮಾಡುವ ಮಕ್ಕಳನ್ನು ಕಂಡಾಗ ಸಂತೋಷವಾಗುತ್ತದೆ. ಆದರೆ ಅದೇ ಮಕ್ಕಳ ತುಂಟಾಟವು ಒಮ್ಮೊಮ್ಮೆ ಪೋಷಕರಿಗೆ ಸಂಕಷ್ಟಕ್ಕೆ ಕಾರಣವಾಗುತ್ತದೆ. ಮಕ್ಕಳ ಮೇಲೆ ಎಷ್ಟೇ ನಿಗಾವಿಟ್ಟು ಜಾಗ್ರತೆ ವಹಿಸಿದರೂ ಸಾಲದು. ಕ್ಷಣ ಮಾತ್ರದಲ್ಲಿ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ. ಸದ್ಯ ಅಪಾರ್ಟ್‌ಮೆಂಟ್ ರೂಂವೊಂದರಲ್ಲಿ ಸಿಲುಕಿದ್ದ ಮಗುವನ್ನು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ (Child rescue) ರಕ್ಷಿಸಿದ್ದಾರೆ.
ಮಂಗಳೂರಿನ ಕೊಡಿಯಾಲ್ ಗುತ್ತಿನ ಅಪಾಟ್೯ಮೆಂಟ್‌ನಲ್ಲಿ ಮಗುವೊಂದು ಆಟವಾಡುತ್ತಾ ಮನೆಯೊಳಗಿದ್ದ ರೂಮಿಗೆ ಹೋಗಿದೆ. ಈ ವೇಳೆ ಅಚಾನಕ್ ಆಗಿ ರೂಮಿನ ಡೋರ್ ಲಾಕ್ ಮಾಡಿಕೊಂಡಿದೆ. ವಾಪಸ್ ಡೋರ್ ಅನ್ ಲಾಕ್ ಮಾಡಲು ಆಗದೆ ಮಗು ಅಳಲು ಶುರು ಮಾಡಿತ್ತು. ಮಗು ಅಳುವಿನ ಸದ್ದು ಕೇಳಿ ಬಂದಿದ್ದ ಪೋಷಕರು ರೂಮಿನ ಬಾಗಿಲು ತೆರೆಯಲು ಮುಂದಾಗಿದ್ದಾರೆ. ಆದರೆ ರೂಮಿನೊಳಗೆ ಮಗು ಡೋರ್ ಲಾಕ್ ಮಾಡಿಕೊಂಡಿತ್ತು.
ರೂಮಿನ ಡೋರ್ ಲಾಕ್ ತೆರೆಯಲು ಎಷ್ಟೇ ಪ್ರಯತ್ನಿಸಿದರೂ ಆಗದಿದ್ದಾಗ ಗಾಬರಿಗೊಂಡ ಮನೆ ಮಂದಿ ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಪಾಂಡೇಶ್ವರ ಅಗ್ನಿಶಾಮಕ ತಂಡದವರು ಹಗ್ಗದ ಸಹಾಯದಿಂದ 4ನೇ ಮಹಡಿಗೆ ಇಳಿದು, ಕೋಣೆಯೊಳಗೆ ಸಿಲುಕಿದ್ದ ಮಗುವನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: KC Cariappa Love Case: ಡಗ್ಸ್ ಸೇವನೆ ಆರೋಪ; ಕ್ರಿಕೆಟಿಗ ಕೆಸಿ ಕಾರಿಯಪ್ಪಗೆ ʻNadaʼ ಸಂಕಷ್ಟ
ಅಜ್ಜಿಯ ನೋಡಲು ಹೊರಟ 6 ವರ್ಷದ ಬಾಲಕ ಬೇರೊಂದು ವಿಮಾನ ಹತ್ತಿದ; ಮುಂದೇನಾಯ್ತು?
ವಾಷಿಂಗ್ಟನ್: ಸಾಮಾನ್ಯವಾಗಿ ವಿಮಾನ ಪ್ರಯಾಣದ (Air Travel) ವೇಳೆ ಒಂದು ವಿಮಾನದ ಬದಲು, ಬೇರೊಂದು ವಿಮಾನ ಹತ್ತುವುದು ವಿರಳದಲ್ಲಿ ಅತಿ ವಿರಳ. ಆಯಾ ಟರ್ಮಿನಲ್, ಗೇಟ್‌ಗಳ ವಿಂಗಡಣೆ, ಪ್ರತಿಯೊಬ್ಬ ಪ್ರಯಾಣಿಕರ ತಪಾಸಣೆ ಮಾಡುವುದರಿಂದ ಬೇರೆ ವಿಮಾನ ಹತ್ತುವ ಸಾಧ್ಯತೆ ತುಂಬ ಕಡಿಮೆ. ಆದರೆ, ಅಮೆರಿಕದಲ್ಲಿ ವಿಮಾನಯಾನ ಸಂಸ್ಥೆಯ (Airlines) ಸಿಬ್ಬಂದಿಯೇ ಆರು ವರ್ಷದ ಬಾಲಕನನ್ನು ಬೇರೊಂದು ವಿಮಾನವನ್ನು ಹತ್ತಿಸಿದ ಅಚಾತುರ್ಯ ನಡೆದಿದೆ.
ಹೌದು, ಪ್ರೀತಿಯ ಅಜ್ಜಿಯನ್ನು ನೋಡಲು ವಿಮಾನ ಹತ್ತಿದ ಬಾಲಕನು ವಿಮಾನಯಾನ ಸಂಸ್ಥೆ ಸಿಬ್ಬಂದಿಯ ಅಚಾತುರ್ಯದಿಂದಾಗಿ ಸಂಕಷ್ಟ ಅನುಭವಿಸಿದ್ದಾನೆ. ಅತ್ತ, ಮೊಮ್ಮಗನ ಆಗಮನಕ್ಕಾಗಿ ಕಾಯುತ್ತಿದ್ದ ಅಜ್ಜಿಯು ಆತ ಬಾರದ್ದನ್ನು ಕಂಡು ಆತಂಕಗೊಂಡಿದ್ದಾರೆ. ಅಮೆರಿಕದ ಫಿಲಾಡೆಲ್ಫಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫೋರ್ಟ್ ಮೇಯರ್ಸ್‌ನಲ್ಲಿರುವ ಸೌತ್‌ವೆಸ್ಟ್ ಫ್ಲೊರಿಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಲಕ ಸಂಚರಿಸಬೇಕಿತ್ತು. ಆದರೆ, ಸ್ಪಿರಿಟ್ ಏರ್‌ಲೈನ್ಸ್ ಸಿಬ್ಬಂದಿಯು ಬಾಲಕನನ್ನು ಒರಾಲ್ಡೋಗೆ ತೆರಳುತ್ತಿದ್ದ ವಿಮಾನದಲ್ಲಿ ಹತ್ತಿಸಿದ್ದು ಅಚಾತುರ್ಯಕ್ಕೆ ಕಾರಣವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಿರಿಟ್ ಏರ್‌ಲೈನ್ಸ್ ಸಂಸ್ಥೆಯು ಕ್ಷಮೆಯಾಚಿಸಿದೆ. “ಬಾಲಕ ಹಾಗೂ ಆತನ ಅಜ್ಜಿಗೆ ಉಂಟಾದ ತೊಂದರೆಗೆ ಸ್ಪಿರಿಟ್ ಏರ್‌ಲೈನ್ಸ್ ಕ್ಷಮೆಯಾಚಿಸುತ್ತದೆ. ಸಿಬ್ಬಂದಿಯ ತಪ್ಪಿನಿಂದಾಗಿ ಬಾಲಕನು ಬೇರೊಂದು ವಿಮಾನ ಹತ್ತುವಂತಾಗಿದೆ. ಪ್ರಮಾದ ಗೊತ್ತಾದ ಕೂಡಲೇ ವಿಮಾನದ ಸಿಬ್ಬಂದಿಯು ಬಾಲಕನಿಗೆ ರಕ್ಷಣೆ ನೀಡಿದೆ. ಆತನನ್ನು ಸಮಾಧಾನಪಡಿಸಲಾಗಿದೆ. ಹಾಗೆಯೇ, ಆತನ ಕುಟುಂಬಸ್ಥರನ್ನು ಸಂಪರ್ಕಿಸಿ ನಡೆದಿರುವ ಘಟನೆಯ ಕುರಿತು ಮಾಹಿತಿ ನೀಡಲಾಗಿದೆ. ಸುರಕ್ಷಿತವಾಗಿ ಆತನನ್ನು ಅಜ್ಜಿಯ ಬಳಿ ಕಳುಹಿಸಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ತಿಳಿಸಿದೆ. ಹಾಗೆಯೇ, ಪ್ರಕರಣವನ್ನು ತನಿಖೆಗೆ ಆದೇಶಿಸಿದೆ.
ಇದನ್ನೂ ಓದಿ: Viral Story: ಒಂದೇ ದಿನ ಎರಡು ಪ್ರತ್ಯೇಕ ವಿಮಾನ ಅಪಘಾತ; ಬದುಕುಳಿದ ಯುವಜೋಡಿ!
“ನನ್ನ ಮೊಮ್ಮಗ ಬರುತ್ತಾನೆ ಎಂದು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದೆ. ಗಂಟೆಗಟ್ಟಲೆ ಕಾದು ಕುಳಿತರೂ ನನ್ನ ಮೊಮ್ಮಗ ಬರಲಿಲ್ಲ. ಕೂಡಲೇ ಈ ಕುರಿತು ವಿಮಾನಯಾನ ಸಿಬ್ಬಂದಿಗೆ ಕೇಳಿದೆ. ಅವರು ಸರಿಯಾಗಿ ಮಾಹಿತಿ ನೀಡಲಿಲ್ಲ. ನಾನು ವಿಮಾನದೊಳಗೆ ಓಡಿ ಹೋಗಿ ಪರಿಶೀಲನೆ ನಡೆಸಿದೆ. ಅಲ್ಲೂ ನನ್ನ ಮೊಮ್ಮಗ ಇರಲಿಲ್ಲ. ಕೆಲ ಹೊತ್ತನ ಬಳಿಕ ನನ್ನ ಮೊಮ್ಮಗ ಬೇರೊಂದು ವಿಮಾನ ಹತ್ತಿರುವ, ಸುರಕ್ಷಿತವಾಗಿ ಲ್ಯಾಂಡ್ ಆಗಿರುವ ಕುರಿತು ಮಾಹಿತಿ ನೀಡಲಾಗಿತ್ತು. ಕೆಲ ಗಂಟೆಗಳ ನಂತರ ಆತನನ್ನು ಫೋರ್ಟ್ ಮೈಯರ್ಸ್ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಯಿತು” ಎಂದು ಆರು ವರ್ಷದ ಬಾಲಕನ ಅಜ್ಜಿ ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ