ಮಂಗಳೂರು : ಕರಾವಳಿಯಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಕರಾವಳಿಗೆ ರೈಲಿನಲ್ಲಿ ಸಂಚಾರ ಮಾಡುವವರಿಗೆ ಸಿಹಿಸುದ್ದಿಯೊಂದು ಹೊರಬಂದಿದೆ. ನೈರುತ್ಯ ರೈಲ್ವೆಯು, ಕಾರವಾರ-ಬೆಂಗಳೂರು ಎಕ್ಸ್ ಪ್ರೆಸ್ ರೈಲಿನ ಪ್ರಯಾಣದ ಸಮಯವನ್ನು 45 ನಿಮಿಷಗಳಷ್ಟು ಕಡಿತಗೊಳಿಸುವುದಾಗಿ ತಿಳಿಸಿದೆ. ಕಾರವಾರದಿಂದ ಬೆಂಗಳೂರಿಗೆ ಹೋಗುವ ಪಂಚಗಂಗಾ ಎಕ್ಸ್ ಪ್ರೆಸ್ ಯಾನ ಸಮಯ 45 ನಿಮಿಷ ಕಡಿಮೆಯಾಗಿದ್ದರೆ, ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್ ಪ್ರಯಾಣದ ಸಮಯವನ್ನು ಸಹ 20 ನಿಮಿಷ ಕಡಿತಗೊಳಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ. ಜೂನ್ 1ರಿಂದ ಹೊಸ ವೇಳಾ ಪಟ್ಟಿ ಜಾರಿಗೆ ಬರಲಿದೆ.
ವೇಗ ಸಿಕ್ಕಿದ್ದು ಹೇಗೆ?
ಹಾಸನ-ಶ್ರವಣಬೆಳಗೊಳ ನಡುವೆ ಇತ್ತೀಚೆಗೆ ನಡೆಸಿದ ರೈಲು ಹಳಿ ನವೀಕರಣದಿಂದ ಪ್ರಯಾಣದ ಸಮಯ ಕಡಿತ ಸಾಧ್ಯವಾಗಿದೆ. ಇದರ ಪರಿಣಾಮವಾಗಿ ಹಾಸನ-ಬೆಂಗಳೂರು ವಿಭಾಗದಲ್ಲಿ ರೈಲುಗಳ ವೇಗ ಹೆಚ್ಚಾಗಿದೆ.
ಹೊಸ ವೇಳಾಪಟ್ಟಿ ಹೇಗಿದೆ?
ಕಾರವಾರ-ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ಈ ಹಿಂದೆ ಕೆಎಸ್‌ಆರ್ ಬೆಂಗಳೂರು ಸಿಟಿ ರೈಲು ನಿಲ್ದಾಣಕ್ಕೆ ಬೆಳಗ್ಗೆ 8 ಗಂಟೆಗೆ ತಲುಪುತ್ತಿತ್ತು. ಜೂನ್ 1 ರ ನಂತರ ಇದು 7:15 ಗಂಟೆಗೆ ನಿಲ್ದಾಣವನ್ನು ತಲುಪುತ್ತದೆ.
ಕಣ್ಣೂರು-ಬೆಂಗಳೂರು ರಾತ್ರಿ ಪ್ರಯಾಣದ ಎಕ್ಸ್‌ಪ್ರೆಸ್ ರೈಲು ಇದುವರೆಗೆ ಬೆಳಗ್ಗೆ 6.50 ಕ್ಕೆ ಬೆಂಗಳೂರು ತಲುಪುತ್ತಿದ್ದರೆ ಮುಂದೆ ಪ್ರತಿದಿನ ಬೆಳಗ್ಗೆ 6:30 ಗಂಟೆಗೆ ನಗರವನ್ನು ತಲುಪುತ್ತದೆ.
ಜಿಮ್‌ನಲ್ಲಿ ಮಹಿಳೆ ಮೃತಪಟ್ಟಿದ್ದು ಹೃದಯಾಘಾತದಿಂದಲ್ಲ..! ಹಾಗಾದ್ರೆ ಅಸಲಿ ಕಾರಣವೇನು..?
ಆದರೂ ಮಂಗಳೂರು ಮತ್ತು ಕಾರವಾರದಲ್ಲಿ ಎರಡೂ ರೈಲುಗಳ ಆಗಮನದ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ನಿಂದ ರಾತ್ರಿ 8.10 ಕ್ಕೆ ಹೊರಟರೆ, ಪಂಚಗಂಗಾ ಎಕ್ಸ್‌ಪ್ರೆಸ್ ಕಾರವಾರದಿಂದ ಸಂಜೆ 6 ಗಂಟೆಗೆ ಹೊರಡುತ್ತದೆ. ಜೂನ್ 1 ರಿಂದ ಮಂಗಳೂರು-ಬೆಂಗಳೂರು ನಡುವಿನ ಪ್ರಯಾಣ 10:20 ಗಂಟೆಗಳು ಮತ್ತು ಕಾರವಾರದಿಂದ ಬೆಂಗಳೂರಿಗೆ 13:15 ಗಂಟೆಗಳು ತೆಗೆದುಕೊಳ್ಳುತ್ತದೆ.
ಕಾರ್ಯಾಚರಣೆ ಮತ್ತು ನಿರ್ವಹಣೆ ಕಾರಣಗಳಿಂದಾಗಿ ಸುಮಾರು 240 ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೇ ಇತ್ತೀಚಿಗೆ ಪ್ರಕಟಿಸಿತ್ತು. ರೈಲ್ವೆಯ ಅಧಿಸೂಚನೆಯ ಪ್ರಕಾರ, ಹೊರಡಬೇಕಿದ್ದ 164 ಪ್ರಯಾಣಿಕ ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿತ್ತು. ಇನ್ನುಳಿದ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿತ್ತು. ಅಲ್ಲದೇ ಇನ್ನೂ 650ಕ್ಕೂ ರೈಲುಗಳು ರದ್ದಾಗಲಿವೆ ಎಂದು ತಿಳಿದುಬಂದಿತ್ತು.
ಇದನ್ನೂ ಓದಿ | ಕಾಡಿನಿಂದ ನಡುರಸ್ತೆಗೆ ಬಂದ ಗಜರಾಜ