ಪ್ರಯಾಣಿಕ ಮಹಿಳೆ ಟಿಕೇಟ್ ತೋರಿಸುವುದು ತಡವಾಗಿದ್ದಕ್ಕೆ ಟಿಟಿ ಆಕೆಯನ್ನು ದಬಾಯಿಸಿ ಮೈಕೈ ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ಕಣ್ಣೀರು ಹಾಕಿದ್ದಾರೆ. ಫ್ಲಾಟ್ಫಾರಂನಲ್ಲೇ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ರಾಜ್ಯದಲ್ಲೇ ಪ್ರಸಿದ್ಧ ಪುಣ್ಯಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸಂದರ್ಶನಕ್ಕೆ ತೆರಳುವವರಿಗೆ ಲೋಕಮಾನ್ಯ ತಿಲಕ್ – ಕೊಚುವೆಲಿ – ಮುಂಬೈ ಲೋಕಮಾನ್ಯ ತಿಲಕ್ ಗರೀಬ್ ರಥ ರೈಲು ವಾರದ ನಾಲ್ಕು ದಿನ ಬೈಂದೂರು ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ.
ರೈಲ್ವೆ ಇಲಾಖೆ 2022ರ ಮೊದಲ 10 ತಿಂಗಳುಗಳಲ್ಲಿ ಸರಕು ಸಾಗಣೆಯಿಂದ 1.30 ಲಕ್ಷ ಕೋಟಿ ರೂ. ಆದಾಯವನ್ನು ಗಳಿಸಿರುವುದು ಗಮನಾರ್ಹ. 2021ರ ಇದೇ ಅವಧಿಗೆ ಹೋಲಿಸಿದರೆ (Railways income) ಏರಿಕೆ ದಾಖಲಾಗಿದೆ.
ಈ ಬಾರಿಯ ಬಜೆಟ್ನಲ್ಲಿ (Union Budget 2023) ರೈಲ್ವೆ ಇಲಾಖೆಗೆ ಅತಿ ಹೆಚ್ಚು ಹಣವನ್ನು ಹಂಚಿಕೆ ಮಾಡಲಾಗಿದೆ. ಹೊಸ ಮಾರ್ಗಗಳು ಸೇರಿದಂತೆ ಮೂಲಭೂತ ಸೌಕರ್ಯಗಳ ಮೇಲೆ ಹೆಚ್ಚಿನ ಹಣವನ್ನು ಖರ್ಚು ಮಾಡುವ ಉದ್ದೇಶವನ್ನು ಇಲಾಖೆ ಹೊಂದಿದೆ.
ರೈಲ್ವೆ ವಲಯದ ಮೂಲ ಸೌಕರ್ಯ ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡಿದ ನಿರ್ಮಲಾ ಸೀತಾರಾಮನ್ ಅವರು, 100 ನಿರ್ಣಾಯಕ ಸಾರಿಗೆ ಮೂಲಸೌಕರ್ಯ ಯೋಜನೆಗಳನ್ನು ಅನುಷ್ಠಾನ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ರಾಜ್ಯ ಸರ್ಕಾರದ ರೈಲ್ವೆ ಇಲಾಖೆಗೆ ಸೇರಿದ 29 ಎಕರೆ ಭೂಮಿಯನ್ನು ಅತಿಕ್ರಮಣ ಮಾಡಿದವರನ್ನು ಅಲ್ಲಿಂದ ತೆರವುಗೊಳಿಸಬೇಕು. ಆ ಭೂಮಿಯನ್ನು ವಾಪಸ್ ಇಲಾಖೆಗೆ ಬಿಟ್ಟುಕೊಡಬೇಕು ಎಂದು ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆಯಾಗಿತ್ತು.
ಭಾರತೀಯ ರೈಲ್ವೆಯನ್ನು ಆಧುನೀಕರಣಗೊಳಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದರು.
ಲಿಫ್ಟ್ನಂತೆ ಮೇಲೇರಬಲ್ಲ ಭಾರತದ ಮೊದಲ ರೈಲ್ವೆ ಸೇತುವೆ ತಮಿಳುನಾಡಿನ ರಾಮಶ್ವರಂನ ಪಂಬಾನ್ನಲ್ಲಿ ನಿರ್ಮಾಣವಾಗಿದೆ. ಈ ಕುರಿತ ವಿಡಿಯೊವನ್ನು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ (Pamban Bridge ) ಬಿಡುಗಡೆಗೊಳಿಸಿದ್ದಾರೆ.
ವಂದೇಭಾರತ್ ಎಕ್ಸ್ಪ್ರೆಸ್ ರೈಲ್ವೆಯ ಜಾಲವನ್ನು ದೇಶಾದ್ಯಂತ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, 2023-24ರ ಬಜೆಟ್ನಲ್ಲಿ (Union Budget 2023) ಹೆಚ್ಚಿನ ಮೊತ್ತ ಮಂಜೂರಾಗುವ ಸಾಧ್ಯತೆ ಇದೆ.
ನೈರುತ್ಯ ರೈಲ್ವೆ ವಿಭಾಗದಿಂದ ವಿಜಯಪುರ-ಕೊಟ್ಟಾಯಮ್ ಮತ್ತು ಎಸ್.ಎಸ್.ಎಸ್ ಹುಬ್ಬಳ್ಳಿ-ವಿಜಯಪುರ ಸಾಪ್ತಾಹಿಕ ಕಾಯ್ದಿರಿಸದ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆ ಆರಂಭಿಸಲಾಗುತ್ತಿದೆ.