Site icon Vistara News

Collection Master : ಸಿಎಂ ಕಲೆಕ್ಷನ್‌ ಮಾಸ್ಟರ್‌ ಎಂದು ಪೋಸ್ಟ್‌ ಹಾಕಿದ ಶಾಸಕ ಹರೀಶ್‌ ಪೂಂಜಾ ವಿರುದ್ಧ FIR

Harish Poonja Collection Master

ಮಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಕಲೆಕ್ಷನ್‌ ಮಾಸ್ಟರ್‌ (Collection Master) ಎಂದು ಸಂಬೋಧಿಸಿ ಫೇಸ್‌ ಬುಕ್‌ ಪೋಸ್ಟ್‌ ಹಾಕಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ (MLA Harish Poonja) ವಿರುದ್ಧ ಎಫ್ಐಆರ್ ದಾಖಲಾಗಿದೆ.

ರಾಜ್ಯದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (Income tax Raid) ದೊಡ್ಡ ಮಟ್ಟದಲ್ಲಿ ದಾಳಿ ಮಾಡಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರ ಪುತ್ರನ ಮನೆಯಿಂದ 42 ಕೋಟಿ ರೂ. ಮತ್ತು ಒಟ್ಟಾರೆಯಾಗಿ ಬೆಂಗಳೂರಿನಲ್ಲಿ 100 ಕೋಟಿ ರೂ. ವಶಪಡಿಸಿಕೊಂಡಿದ್ದರು. ಈ ಹಣಕ್ಕೂ ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೂ ಲಿಂಕ್‌ ಕಲ್ಪಿಸಿದ ಬಿಜೆಪಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರನ್ನು ಟಾರ್ಗೆಟ್‌ ಮಾಡಿತ್ತು. ಅದರಲ್ಲೂ ಮುಖ್ಯವಾಗಿ ಸಿದ್ದರಾಮಯ್ಯ ಅವರನ್ನು ಸಿಎಂ- ಎಂದರೆ ಕಲೆಕ್ಷನ್‌ ಮಾಸ್ಟರ್‌ ಎಂದು ಸಂಬೋಧಿಸಿ ಪ್ರಚಾರ ಮಾಡಿತ್ತು.

ಸಿದ್ದರಾಮಯ್ಯ ಅವರನ್ನು ಕಲೆಕ್ಷನ್‌ ಮಾಸ್ಟರ್‌ ಎಂದು ಘೋಷಿಸಿದ ಪೋಸ್ಟರ್‌ಗಳನ್ನು ಬಿಜೆಪಿ ನಾಯಕರು ಬಿಡುಗಡೆ ಮಾಡಿದ್ದರು. ಬಿಜೆಪಿಯ ಎಲ್ಲ ಅಧಿಕೃತ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಇದನ್ನು ಪ್ರಚಾರ ಮಾಡಿತ್ತು. ಸಿದ್ದರಾಮಯ್ಯ ಅವರ ಟೇಬಲ್‌ ಮೇಲಿನ ನೇಮ್‌ ಪ್ಲೇಟ್‌ನ ಭಾವಚಿತ್ರದಲ್ಲಿ, ಮನೆಯ ನಾಮಫಲಕದ ಚಿತ್ರದಲ್ಲಿ ಚೀಫ್‌ ಮಿನಿಸ್ಟರ್‌ ಎಂದು ಇರುವಲ್ಲಿ ಕಲೆಕ್ಷನ್ ಮಾಸ್ಟರ್‌ ಎಂದು ಬರೆಯಲಾಗಿತ್ತು.

ಇಂಥಹುದೇ ಒಂದು ಪೋಸ್ಟರನ್ನು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರು ತಮ್ಮ ಫೇಸ್‌ ಬುಕ್‌ ಪೇಜ್‌ನಲ್ಲಿ ಹಂಚಿಕೊಂಡಿಕೊಂಡಿದ್ದರು. ಗೇಟ್ ಮುಂದಿನ ನಾಮಫಲಕ, ಸಿಎಂ ಕಚೇರಿ ಹಾಗೂ ಗೃಹ ಕಚೇರಿ ಕಾವೇರಿ ನಿವಾಸದ ಗೇಟ್‌ನ ನಾಮಫಲಕವನ್ನು ಎಡಿಟ್‌ ಮಾಡಿ ಭಾವಚಿತ್ರ ಪ್ರಕಟಿಸಲಾಗಿತ್ತು. ಪೋಸ್ಟ್ ನಲ್ಲಿ ಸಿಎಂ ಸಿದ್ಧರಾಮಯ್ಯ ಅವರ ಫೋಟೋ ಬಳಕೆ ಮಾಡಲಾಗಿದೆ.

ಇದನ್ನೂ ಓದಿ: Commission politics: ಕಾಂಗ್ರೆಸ್‌ಗೆ ಕಮಿಷನ್‌ ತಿರುಗುಬಾಣ; ಸಿದ್ದರಾಮಯ್ಯ ಕಲೆಕ್ಷನ್‌ ಮಾಸ್ಟರ್‌ ಎಂದ ಬಿಜೆಪಿ

ಹೀಗೆ ಸಾಮಾಜಿಕ ಜಾಲತಾಣದಲ್ಲಿ ಎಡಿಟೆಡ್ ಫೋಟೋ ವೈರಲ್ ಮಾಡಿದ್ದನ್ನು ಪ್ರಶ್ನಿಸಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ ಎಂಬವರು ದೂರು ದಾಖಲಿಸಿದ್ದರು. ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ IPC ಸಕ್ಷನ್ 1869 U/S 504, 505(2) ಅಡಿ ದೂರು ದಾಖಲಾಗಿದೆ ಇದರ ಆಧಾರದಲ್ಲ ಎಫ್‌ಐಆರ್‌ ದಾಖಲಾಗಿದೆ.

ರಾಜ್ಯದಲ್ಲಿ ಸುಳ್ಳು ಮಾಹಿತಿ ನೀಡುವುದರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರನ್ನು ಸುಳ್ಳು ಮಾಹಿತಿ ಎಂಬ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆಯೇ ಅಥವಾ ಮಾನಹಾನಿ ಮಾಡಿದ ಪ್ರಕರಣದ ಅಡಿಯಲ್ಲಿ ಕೇಸು ದಾಖಲಾಗುತ್ತದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

ಈ ಪ್ರಕರಣವನ್ನು ಬಿಜೆಪಿ ಹೇಗೆ ಸ್ವೀಕರಿಸುತ್ತದೆ ಎನ್ನುವುದು ಕೂಡಾ ಮಹತ್ವದ್ದಾಗಿದೆ. ಇದು ರಾಜ್ಯ ಮಟ್ಟದಲ್ಲಿ ಪ್ಲ್ಯಾನ್‌ ಮಾಡಿದ ಒಂದು ಪ್ರಚಾರವಾಗಿದೆ. ಇದನ್ನು ಮೂಲದಲ್ಲಿ ರೂಪಿಸಿದ್ದು ಕರ್ನಾಟಕ ಬಿಜೆಪಿ. ಹರೀಶ್‌ ಪೂಂಜಾ ಅವರು ಕೇವಲ ಹಂಚಿಕೊಂಡಿದ್ದಾರೆ. ಹಾಗಾಗಿ ಕ್ರಮವನ್ನು ಹರೀಶ್‌ ಪೂಂಜಾ ಅವರ ಮೇಲೆ ತೆಗೆದುಕೊಳ್ಳಬೇಕೇ ಎಂಬ ಅಂಶವನ್ನು ಪೊಲೀಸರು ಪರಿಗಣಿಸಲಿದ್ದಾರೆ.

Exit mobile version