Site icon Vistara News

ರಾಜ್ಯದ ಮೊದಲ ಕತ್ತೆ ಸಾಕಾಣಿಕೆ, ಸಂತಾನೋತ್ಪತ್ತಿ ಕೇಂದ್ರ ಮಂಗಳೂರಿನಲ್ಲಿ ಆರಂಭ

ಕತ್ತೆಗಳ ಸಂತಾನೋತ್ಪತ್ತಿ ಕೇಂದ್ರ

ಮಂಗಳೂರು: ರಾಜ್ಯದ ಮೊದಲ ಮತ್ತು ದೇಶದ ಎರಡನೇ ಕತ್ತೆ ಸಾಕಾಣಿಕೆ ಮತ್ತು ಕತ್ತೆಗಳ ಸಂತಾನೋತ್ಪತ್ತಿ ಕೇಂದ್ರವನ್ನು ಮಂಗಳೂರು ಸಮೀಪದ ಇರಾದಲ್ಲಿ ಸ್ಥಾಪಿಸಲಾಗಿದೆ. ರಾಮನಗರದ ವ್ಯಕ್ತಿಯೊಬ್ಬರು ದಕ್ಷಿಣದ ಕನ್ನಡ ಜಿಲ್ಲೆಯಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅವಸಾನದ ಅಂಚಿನಲ್ಲಿರುವ ಕತ್ತೆಗಳನ್ನು ರಕ್ಷಿಸಲು ಹಾಗೂ ಅವುಗಳ ಉಪಯೋಗದ ಬಗ್ಗೆ ಜನರಿಗೆ ಮನವರಿಕೆ ಮಾಡುವ ಪ್ರಯತ್ನವಾಗಿ ಈ ಕೆಲಸ ನಡೆದಿದೆ. ಈ ಕತ್ತೆ ಸಾಕಾಣಿಕೆ ಕೇಂದ್ರವನ್ನು ಮಾಜಿ ಸಚಿವ ಯು.ಟಿ. ಖಾದರ್‌ ಉದ್ಘಾಟಿಸಿದರು.

ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ರಾಮನಗರದ ಶ್ರೀನಿವಾಸ ಗೌಡ ಅವರು ಬಂಟ್ವಾಳ ತಾಲೂಕಿನ ಇರಾ ಗ್ರಾಮದಲ್ಲಿ ಸುಮಾರು 2.3 ಎಕರೆ ಜಾಗದಲ್ಲಿ ಈಗಾಗಲೆ ಕೃಷಿ ಚಟುವಟಕೆ ನಡೆಸುತ್ತಿದ್ದಾರೆ. ಕೋಳಿ ಸಾಕಾಣಿಕೆ, ಹೈನುಗಾರಿಕೆಯ ಜೊತೆಗೆ ಹಲವು ಕೃಷಿ ಕಾರ್ಯಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

ರಾಜ್ಯದಲ್ಲಿ 2012ರಲ್ಲಿ 3.6 ಲಕ್ಷದಷ್ಟಿದ್ದ ಕತ್ತೆಗಳು 2019ರಲ್ಲಿ 1.27 ಲಕ್ಷಕ್ಕೆ ಇಳಿಕೆಯಾಗಿದೆ. ಇದನ್ನು ಮನಗಂಡ ಶ್ರೀನಿವಾಸ್‌ ಗೌಡರು ಕತ್ತೆಯ ಸಾಕಾಣಿಕೆ ಮೂಲಕ ಅವುಗಳ ಸಂತಾನಾವೃದ್ಧಿಯ ಕನಸು ಕಂಡಿದ್ದಾರೆ. ಕತ್ತೆಯ ಹಾಲಿಗೆ ಉತ್ತಮ ಬೆಲೆ ಇರುವ ಹಿನ್ನೆಲೆಯಲ್ಲಿ ಕತ್ತೆ ಹಾಲು ಮಾರಾಟದ ಬಗ್ಗೆಯೂ ಚಿಂತನೆ ನಡೆಸಿದ್ದಾರೆ.

ಇದನ್ನೂ ಓದಿ: ಪ್ರಾಣಿ ದಯಾ ಮಾರ್ಗಸೂಚಿ ಪಾಲನೆಗೆ ನಿರ್ದೇಶನ ಕೋರಿ ಹೈಕೋರ್ಟ್‌ಗೆ ಅರ್ಜಿ: ಸರಕಾರಕ್ಕೆ ನೋಟಿಸ್‌

Exit mobile version