ಮಂಗಳೂರು: ಶಿವರಾತ್ರಿಯಂದೇ ಶ್ರೀಕ್ಷೇತ್ರ ಧರ್ಮಸ್ಥಳದ ಆನೆ ಶಿವೈಕ್ಯವಾಗಿದೆ. ಲತಾ ಹೆಸರಿನ ಆನೆಯು ಶಿವರಾತ್ರಿಯಂದೆ (Elephant Death) ಮೃತಪಟ್ಟಿದೆ. 60ವರ್ಷ ಪ್ರಾಯದ ಲತಾ ಕಳೆದ 50ವರ್ಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸೇವೆಯಲ್ಲಿ ನಿರತವಾಗಿತ್ತು.
ಶುಕ್ರವಾರ ಮಧ್ಯಾಹ್ನದ ವೇಳೆ ಹೃದಯಾಘಾತದಿಂದ ಮೃತಪಟ್ಟಿದೆ. ಕಳೆದ 50 ವರ್ಷಗಳಿಂದ ಧರ್ಮಸ್ಥಳದ ಜಾತ್ರಾ ಮಹೋತ್ಸವದಲ್ಲಿ ಗಾಂಭೀರ್ಯದ ಹೆಜ್ಜೆ ಹಾಕಿ ಎಲ್ಲರ ಚಿತ್ತ ಸೆಳೆಯುತ್ತಿದ್ದಳು.
ಧರ್ಮಸ್ಥಳದಲ್ಲಿ ಲಕ್ಷ್ಮಿ, ಶಿವಾನಿ ಎಂಬ ಎರಡು ಆನೆಗಳಿವೆ. ಶಿವಾನಿಗೆ ಅಜ್ಜಿಯಂತೆ, ಲಕ್ಷ್ಮೀಗೆ ಲತಾ ಆನೆಯು ತಾಯಿಯಾಗಿ ಪ್ರೀತಿಯಿಂದ ವರ್ತಿಸುತ್ತಿತ್ತು. ಶಿವಾನಿಗೆ ಲಕ್ಷ್ಮಿ ಸ್ವಂತ ತಾಯಿಯಾದರೂ, ಲತಾ ಆನೆಯೊಂದಿಗೆ ಹೆಚ್ಚು ಸಲುಗೆಯನ್ನು ಹೊಂದಿತ್ತು. ಲತಾ ಆನೆಯನ್ನು ಕಳೆದುಕೊಂಡಿರುವ ಶಿವಾನಿ ಹಾಗೂ ಲಕ್ಷ್ಮಿ ಇಬ್ಬರು ಮಂಕಾಗಿದ್ದಾರೆ.
ಲತಾ ಆನೆಯ ಅಂತ್ಯ ಸಂಸ್ಕಾರ ಇಂದು ಸಂಜೆ ವೇಳೆಗೆ ನಡೆಯುವ ಸಾಧ್ಯತೆ ಇದೆ. ಆನೆ ಸಾವಿನ ಸುದ್ದಿ ತಿಳಿದು ಸುತ್ತಮುತ್ತಲ ಭಕ್ತರು ದೇವಸ್ಥಾನದ ಬಳಿ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: Self Harming : ನೇಣು ಬಿಗಿದುಕೊಂಡು ಬಾರ್ ಕ್ಯಾಶಿಯರ್ ಆತ್ಮಹತ್ಯೆ
ಅಪಘಾತದಲ್ಲಿ ಮೃತಪಟ್ಟ ಮರಿ ಕೋತಿಯನ್ನು ತಬ್ಬಿ ಅಮ್ಮನ ರೋದನೆ
ಬೆಳಗಾವಿ: ಆ ತಾಯಿ ಕೋತಿಯು ಮರಿ ಕೋತಿಯ ಕೈ ಹಿಡಿದು ರಸ್ತೆ ದಾಟಲು ಮುಂದಾಗಿತ್ತು. ಇದೇ ವೇಳೆ ವೇಗವಾಗಿ ಬಂದ ಯಮರೂಪಿ ಕಾರೊಂದು ಮರಿ ಕೋತಿ ಹಾಗೂ ತಾಯಿ ಕೋತಿಗೆ ರಭಸವಾಗಿ ಬಡಿದಿತ್ತು. ಮರಿ ಕೋತಿ ಮೇಲೆ ಕಾರು ಹರಿದ ಪರಿಣಾಮ (Road Accident) ಅದು ಸ್ಥಳದಲ್ಲೇ ಮೃತಪಟ್ಟರೆ, ತಾಯಿ ಕೋತಿಯು ಗಾಯಗೊಂಡಿತ್ತು. ಮರಿ ಸಾವಿಗೆ ತಾಯಿ ಕೋತಿ ರೋದನೆ ಎಂತಹವರಿಗೂ ಕರುಳು ಹಿಂಡುವಂತೆ (Monkey Death) ಮಾಡಿತ್ತು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಗೇಟ್ ಬಳಿ ಈ ಅಪಘಾತ (Belgavi News) ನಡೆದಿದೆ.
ರಸ್ತೆ ಅಪಘಾತಗಳಲ್ಲಿ ಹೆಚ್ಚು ಬಲಿಯಾಗುವುದೆಂದರೆ ಅದು ಪ್ರಾಣಿಗಳು. ಪ್ರಾಣಿಗಳಿಗೆ ವಾಹನದಿಂದ ಡಿಕ್ಕಿ ಹೊಡೆಸಿ, ಅದನ್ನು ತಿರುಗಿಯೂ ನೋಡದೆ ಹೋಗುವ ಕೆಟ್ಟ ಮನಸ್ಥಿತಿಗೆ ಜನರು ತಲುಪಿಬಿಟ್ಟಿದ್ದಾರೆ. ಕಾರು ಅಪಘಾತದಿಂದ ಮೃತಪಟ್ಟ ಮರಿ ಕೋತಿಯೊಂದನ್ನು ತಾಯಿ ಕೋತಿ ತಬ್ಬಿಕೊಂಡು ಎಬ್ಬಿಸಲು ಯತ್ನಿಸಿದೆ. ರಸ್ತೆ ಬದಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮರಿಯನ್ನು ತಾಯಿಯು ತಬ್ಬಿ ಹಿಡಿದುಕೊಂಡಿತ್ತು. ಎದ್ದೇಳು ಎಂದು ಮುಖವನ್ನು ಹಿಡಿದುಕೊಳ್ಳುತ್ತಿತ್ತು.
ತಾಯಿ ಕೋತಿಯೂ ಅಪಘಾತದಲ್ಲಿ ಗಾಯಗೊಂಡು ಮುಖ ಹಾಗೂ ಕೈಯಲ್ಲಿ ರಕ್ತ ಸೋರುತ್ತಿದ್ದರೂ ಮರಿಗಾಗಿ ಹಂಬಿಸುತ್ತಿತ್ತು. ಸತ್ತು ಹೋದ ಮರಿ ಕೋತಿಯನ್ನು ಬಿಟ್ಟು ಆಗದೇ ಅಲ್ಲೇ ಕುಳಿತಿತ್ತು. ಇತ್ತ ಅಪಘಾತದಲ್ಲಿ ಗಾಯಗೊಂಡ ತಾಯಿ ಕೋತಿಗೆ ಸ್ಥಳೀಯರು ಉಪಚರಿಸಿದ್ದರು. ಕೆಲವರು ರಸ್ತೆ ಬಿಟ್ಟು ಪಕ್ಕಕ್ಕೆ ಕರೆದುಯುತ್ತಿದ್ದರೂ ಮರಿ ಕೋತಿಯ ಕಡಗೆ ಗಮನವಿಟ್ಟಿತ್ತು. ಕೋತಿಯ ಪರಿಸ್ಥಿತಿ ಕಂಡು ಮಮ್ಮಲ ಮರುಗಿದ ಜನರು, ನೀರು ಕುಡಿಸಿ ಉಪಚರಿಸಿದ್ದರು.