Site icon Vistara News

Hindu-Muslim love: ಬಜರಂಗ ದಳ ಕಾರ್ಯಕರ್ತನನ್ನೇ ವರಿಸಿದ ಮುಸ್ಲಿಂ ಯುವತಿ

Hindu muslim Love story

ಮಂಗಳೂರು: ಹಿಂದೂ ಯುವತಿಯರನ್ನು ಮುಸ್ಲಿಂ ಹುಡುಗರು ಮರುಳು ಮಾಡಿ ಮದುವೆ ಮಾಡಿಕೊಳ್ಳುವುದಕ್ಕೆ ಲವ್‌ ಜಿಹಾದ್‌ (Love Jihad) ಎಂದು ಕರೆಯುತ್ತಾರೆ. ಆದರೆ, ಇಲ್ಲಿ ರಿವರ್ಸ್‌ ಲವ್‌ ಜಿಹಾದ್‌ (Reverse Love jihad) ಆಗಿದೆ. ಹಿಂದೂ ಯುವಕನೊಬ್ಬ ಮುಸ್ಲಿಂ ಯುವತಿಯನ್ನು ಪ್ರೀತಿಸಿ (Hindu Muslim Love) ಮದುವೆಯಾಗಿದ್ದಾನೆ. ಹುಡುಗಿ ಕೂಡಾ ಆತ ಕಟ್ಟಾ ಬಜರಂಗ ದಳ ಕಾರ್ಯಕರ್ತ (Bajaranga dal activist) ಎನ್ನುವುದನ್ನು ತಿಳಿದೇ ಅವನನ್ನು ಪ್ರೀತಿಸಿ (Muslim girl marries hindu youth) ಮದುವೆಯಾಗಿದ್ದಾಳೆ.

ಹೀಗೊಂದು ಹಿಂದೂ ಹುಡುಗ-ಮುಸ್ಲಿಂ ಹುಡುಗಿ ಲವ್‌ ಸ್ಟೋರಿ ನಡೆದಿರುವುದು ಮಂಗಳೂರಿನ ಸುರತ್ಕಲ್‌ನಲ್ಲಿ. ಲವ್ ಜಿಹಾದ್ ವಿರುದ್ದ ಧ್ವನಿಯೆತ್ತಿದ ಭಜರಂಗ ದಳದ ಯುವಕನೇ ಅಂತರ್ಧರ್ಮೀಯ ವಿವಾಹವಾಗಿದ್ದಾನೆ.

ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಪ್ರಶಾಂತ್ ಭಂಡಾರಿ ಎಂಬಾತನೇ ಮುಸ್ಲಿಂ ಯುವತಿ ಜೊತೆ ವಿವಾಹ ಆಗಿರುವವನು. ನ. 30ರಂದು ಸುರತ್ಕಲ್ ನ ಆಯೇಷಾ ಎಂಬ ಯುವತಿ ಜೊತೆ ತೆರಳಿದ್ದ ಪ್ರಶಾಂತ್ ಈಗ ವಿವಾಹವಾಗಿದ್ದಾನೆ ಎಂದು ಹೇಳಲಾಗಿದ್ದು, ಆತನೇ ಮದುವೆಯ ಫೋಟೊಗಳನ್ನು ಕಳುಹಿಸಿಕೊಟ್ಟಿದ್ದಾನೆ.

ಪ್ರಶಾಂತ್‌ ಮತ್ತು ಆಯೇಷಾ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇವರ ಪ್ರೀತಿ ವಿಚಾರ ಹೆಚ್ಚಿನವರಿಗೆ ಗೊತ್ತಿತ್ತು ಎನ್ನಲಾಗಿದೆ.

ರೌಡಿ ಶೀಟರ್‌ ಆಗಿರುವ ಪ್ರಶಾಂತ್‌

ಅಂದ ಹಾಗೆ, ಪ್ರಶಾಂತ್‌ ಭಂಡಾರಿ ಸುರತ್ಕಲ್ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದಾನೆ. ಈ ಹಿಂದೆ ನಡೆದ ದೀಪಕ್ ರಾವ್ ಹತ್ಯೆ ಆರೋಪಿ ಪಿಂಕಿ ನವಾಜ್ ಎಂಬಾತನ ಹತ್ಯೆಗೆ ಉತ್ನಿಸಿದ ತಂಡದಲ್ಲಿ ಪ್ರಶಾಂತ್‌ ಇದ್ದ. ಇದೂ ಅಲ್ಲದೆ ಕೆಲವು ಪ್ರಕರಣಗಳಲ್ಲಿ ಆತನ ಹೆಸರು ಪದೇಪದೇ ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಆತನ ವಿರುದ್ಧ ರೌಡಿ ಶೀಟ್‌ ಓಪನ್‌ ಮಾಡಲಾಗಿತ್ತು.

ಪ್ರಶಾಂತ್‌ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಯುವತಿ ಕೂಡಾ ಕೆಲಸಕ್ಕೆ ಹೋಗುತ್ತಿದ್ದಳು ಎನ್ನಲಾಗಿದೆ. ಹೀಗಾಗಿ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಮುಸ್ಲಿಂ ಹುಡುಗಿಯನ್ನು ಪ್ರೀತಿಸುವ ವಿಚಾರ ಬಂದಾಗ ಪ್ರೋತ್ಸಾಹ ನೀಡುವ ತಂಡಗಳು ಕೂಡಾ ಇಲ್ಲಿವೆ. ಇವರೆಲ್ಲರ ಸಹಾಯ ಪ್ರಶಾಂತ್‌ ಮತ್ತು ಆಯೇಷಾ ಪ್ರೀತಿಗೆ ದೊರಕಿತ್ತು ಎನ್ನಲಾಗಿದೆ.

ಇದೀಗ ಪ್ರಶಾಂತ್‌ ಮತ್ತು ಆಯಿಷಾ ನಾಪತ್ತೆಯಾಗಿ ಮದುವೆ ಆಗಿದ್ದಾರೆ ಎಂಬ ಸುದ್ದಿ ದೊರೆಯುತ್ತಿದ್ದಂತೆಯೇ ಆಯೇಷಾ ಪೋಷಕರು ಸುರತ್ಕಲ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

ಈ ನಡುವೆ, ಪ್ರಶಾಂತ್‌ ಆಕೆಯನ್ನು ಅಪಹರಿಸಿಕೊಂಡು ಹೋಗಿದ್ದಲ್ಲ. ಅಯೇಷಾಳ ಒಪ್ಪಿಗೆಯನ್ನು ಪಡೆದೇ ಜತೆಗೆ ತೆರಳಿದ್ದಾನೆ ಎಂದು ಹೇಳಲಾಗಿದೆ. ಪೋಷಕರು ಕೂಡಾ ಇದನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: Love failure: ಪ್ರೀತಿಸಿ ಕೈಬಿಟ್ಟಳು; ನೊಂದು ಬೆಂಕಿ ಹಚ್ಚಿಕೊಂಡ ಪ್ರೇಮಿ!

ಪ್ರಶಾಂತ್‌ ಮತ್ತು ಆಯೆಷಾ ಎಲ್ಲಿದ್ದಾರೆ, ಮದುವೆಯಾಗಿರುವ ಅವರು ಮತ್ತೆ ಸುರತ್ಕಲ್‌ಗೆ ಬರುತ್ತಾರಾ ಎಂದು ಕಾದು ನೋಡಬೇಕಾಗಿದೆ. ಅಂತೂ ಪರಿಸರದಲ್ಲಿ ಈ ಮದುವೆ ಭಾರಿ ಕುತೂಹಲ ಕೆರಳಿಸಿದೆ.

Exit mobile version