ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟದ (ಮಂಗಳೂರು ಸ್ಫೋಟ) ರೂವಾರಿ ಶಾರಿಕ್ನ ಟಾರ್ಗೆಟ್ ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನವೇ ಆಗಿತ್ತು ಎಂದು ಎನ್ಐಎ ಅಧಿಕೃತ (Cooker blast in Mangalore) ಪ್ರಕಟಣೆ ಹೊರಡಿಸಿದೆ. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬ್ಲಾಸ್ಟ್, ಮಂಗಳೂರು ಗೋಡೆ ಬರಹದ ಮಾಸ್ಟರ್ ಮೈಂಡ್ ಆಗಿರುವ ಅರಾಫತ್ ಅಲಿ ಬಂಧನ ಬೆನ್ನಲ್ಲೇ ಅಧಿಕೃತ ಹೇಳಿಕೆ ಪ್ರಕಟಿಸಿದೆ.
ಸೆ.14ರಂದು ಶಿವಮೊಗ್ಗ ಮೂಲದ ಐಸಿಸ್ ಉಗ್ರ (ISIS Terrorist) ಆರೋಪಿ ಅರಾಫತ್ ಅಲಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ (Delhi Airport) ಎನ್ಐಎ ಅಧಿಕಾರಿಗಳ (NIA officers) ತಂಡ ಬಂಧಿಸಿತ್ತು. ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನದ ಬಳಿಕ ಕುಕ್ಕರ್ ಬಾಂಬ್ ಟಾರ್ಗೆಟ್ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: NIA Raid : ಉಗ್ರನ ಜತೆ ಯಾದಗಿರಿ ಯುವಕನ ನಂಟು; ಎನ್ಐಎ ತೀವ್ರ ವಿಚಾರಣೆ
ಏನಿದು ಘಟನೆ?
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಪ್ರೆಶರ್ ಕುಕ್ಕರ್ ಐಇಡಿ ಅಳವಡಿಸಲು ಹೋಗುತ್ತಿದ್ದಾಗ, ಆಟೋ ರಿಕ್ಷಾದಲ್ಲಿ ಆಕಸ್ಮಿಕವಾಗಿ ಸ್ಫೋಟಗೊಂಡಿತ್ತು. ಕಳೆದ ನ.19ರಂದು ರಿಕ್ಷಾದಲ್ಲಿ ಶಾರೀಕ್ ಕೊಂಡೊಯ್ಯುತ್ತಿದ್ದ ಕುಕ್ಕರ್ ಬಾಂಬ್ ಸ್ಫೋಟಿಸಿತ್ತು. ತೀರ್ಥಹಳ್ಳಿ ಮೂಲದ ಶಾರೀಕ್ನನ್ನು ಹಲವು ಸುತ್ತುಗಳ ತನಿಖೆಗೆ ಒಳಪಡಿಸಿದಾಗ ಆತ ಕುಕ್ಕರ್ ಬಾಂಬ್ ತಯಾರಿಸಿದ್ದು ಹಾಗೂ ಸ್ಫೋಟಿಸಲು ಪ್ರಯತ್ನಿಸಿದ್ದು ದೃಢಪಟ್ಟಿತ್ತು. ನಿಷೇಧಿತ ಪಿಎಫ್ಐ ಜತೆಗೂ ಆತ ಸಂಬಂಧ ಹೊಂದಿದ್ದು, ಐಸಿಸ್ ಜತೆಗೆ ಆತ ಹೊಂದಿರಬಹುದಾದ ನಂಟಿನ ಬಗ್ಗೆ ತನಿಖೆ ನಡೆಸಲಾಗುತ್ತಿತ್ತು. ಸದ್ಯ ಮಾಸ್ಟರ್ ಮೈಂಡ್ ಅರಾಫತ್ ಅಲಿ ಬಂಧನ ಬೆನ್ನಲ್ಲೇ ಮಂಗಳೂರು ಬ್ಲಾಸ್ಟ್ ಟಾರ್ಗೆಟ್ ಬಹಿರಂಗವಾಗಿದೆ.
ಉಗ್ರ ಅರಾಫತ್ ಅಲಿ ಕೀನ್ಯಾದ ನೈರೋಬಿಯಿಂದ (Nairobi in Kenya) ಬರುತ್ತಿದ್ದಾಗ ದೆಹಲಿಯಲ್ಲಿ ಆತನನ್ನು ಬಂಧನ ಮಾಡಲಾಗಿದೆ. ಈ ಮೂಲಕ ವಿದೇಶಿ ಮೂಲದ ಮಾಡ್ಯೂಲ್ಗಳ ಪಿತೂರಿಯನ್ನು ಎನ್ಐಎ ಭೇದಿಸಿದಂತಾಗಿದೆ. ಈ ಬೆಳವಣಿಗೆಯಿಂದ ಎನ್ಐಎ ಮಹತ್ವದ ಮೈಲಿಗಲ್ಲು ಸಾಧಿಸಿದಂತಾಗಿದೆ. 2020ರಿಂದ ತಲೆಮರೆಸಿಕೊಂಡಿದ್ದ ಅರಾಫತ್ ಅಲಿಯನ್ನು (Arafat Ali) ಬಂಧಿಸುವಲ್ಲಿ ಎನ್ಐಎ ಸಫಲವಾಗಿದೆ.
ಯುವಕರನ್ನು ಐಸಿಸ್ಗೆ ಸೇರಿಸುತ್ತಿದ್ದ!
ಮುಸ್ಲಿಂ ಯುವಕರನ್ನು ಐಸಿಸ್ಗೆ ಸೇರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅರಾಫತ್, ಕುಕ್ಕರ್ ಸ್ಫೋಟ ಉಗ್ರ ಮೊಹಮ್ಮದ್ ಶಾರಿಕ್ ಸಹಚರರೊಂದಿಗೆ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ