ಉಡುಪಿ: ವಿವಾಹವಾಗಿರೋದು ಪ್ರಾಯ ಪ್ರಬುದ್ಧರಾಗಿರುವ ವಧು ವರರದ್ದು. ವರನ ಎತ್ತರ ಕೇವಲ 4 ಅಡಿ, ವಧುವಿನ ಎತ್ತರವೂ ಅಷ್ಟೇ. ವಧುವಿನ ಹೆಸರು ಶ್ರೀಕೃತಿ. ಈಕೆ ಹಿರಿಯಡ್ಕದ ಎಂಬ ಗ್ರಾಮದ ನಿವಾಸಿ. ವರನ ಹೆಸರು ಹರ್ಷಿತ್ ಕುಮಾರ್.
ಕಾರ್ಕಳ ತಾಲೂಕಿನ ಜೋಡುರಸ್ತೆಯ ಕುಲಾಲ ಸಭಾಭವನದಲ್ಲಿ ಈ ಅಪರೂಪದ ಜೋಡಿಯ ಮದುವೆ ನಡೆಯಿತು. ಗುರು ಹಿರಿಯರು ನಿಶ್ಚಯಿಸಿದ ಈ ಮದುವೆಗೆ ನೆಂಟರಿಷ್ಟರು ಮತ್ತು ಸ್ನೇಹಿತರು ಆಗಮಿಸಿ ಈ ಅಪರೂಪದ ಜೋಡಿಗೆ ಶುಭ ಹಾರೈಸಿದರು.
ಇದನ್ನೂ ಓದಿ: ತನ್ನೊಂದಿಗೇ ತಾನು ಸಪ್ತಪದಿ ತುಳಿದ ಗುಜರಾತ್ ಯುವತಿ; ಭರ್ಜರಿಯಾಗೇ ನಡೀತು ವರನಿಲ್ಲದ ಮದುವೆ!