Site icon Vistara News

ಮಳೆಗಾಲದಲ್ಲಿ ಡೇಂಜರ್‌: ಮಲ್ಪೆ ಬೀಚ್‌ಗೆ ತಡೆ ಬೇಲಿ ಹಾಕಿದ ಉಡುಪಿ ಜಿಲ್ಲಾಡಳಿತ

ಮಲ್ಪೆ ಬೀಚ್‌

ಉಡುಪಿ: ಮಳೆಗಾಲದಲ್ಲಿ ಸಮುದ್ರ ತೀರದಲ್ಲಿ ಆಗುವ ಜೀವ ಹಾನಿಯನ್ನು ತಡೆಯುವ ಉದ್ದೇಶದಿಂದ ಮಲ್ಪೆ ಬೀಚ್‌ಗೆ ತಡೆ ಬೇಲಿ ಹಾಕಲಾಗಿದೆ. ಮಲ್ಪೆ ಕಡಲಿಗೆ ಇಳಿಯುವ ದ್ವಾರದ ಬಳಿ ಸುಮಾರು ಒಂದು ಕಿಲೋಮೀಟರ್ ಉದ್ದಕ್ಕೆ ಐದು ಅಡಿಯಷ್ಟು ಎತ್ತರ ಬಲೆ ಅಳವಡಿಸಲಾಗಿದೆ. ಅಪಾಯವನ್ನು ಸೂಚಿಸಲು ಕೆಂಪು ಧ್ವಜವನ್ನು ಅಲ್ಲಲ್ಲಿ ಕಟ್ಟಲಾಗಿದೆ.

ಈ ಬಾರಿ ಮುನ್ನೆಚ್ಚರಿಕೆ ಕ್ರಮವಾಗಿ ಮಳೆಗಾಲದ ಪ್ರಾರಂಭದಲ್ಲಿಯೇ ಸಮುದ್ರಕ್ಕೆ ತಡೆಬೇಲಿ ಹಾಕಲಾಗಿದೆ. ಈಗಾಗಲೆ ಸಮುದ್ರ ಪ್ರಕ್ಷುಬ್ಧ ಆಗಿರೋ ಕಾರಣದಿಂದ ಜೀವ ಹಾನಿ ಆಗುವ ಸಾಧ್ಯತೆ ಹೆಚ್ಚು, ಹೀಗಾಗಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಬೀಚ್‌ಗೆ ತಡೆಬೇಲಿ ನಿರ್ಮಿಸಲಾಗಿದೆ.

ಜೂನ್ ತಿಂಗಳಲ್ಲಿ ಕಡಲ ಅಲೆಗಳು ಜೋರಾಗಿದ್ದು ನೀರಿಗೆ ಇಳಿದ್ರೆ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತೆ. ಇತ್ತೀಚೆಗೆ ಸಮುದ್ರ ಅಲೆಗಳ ಜೊತೆಗೆ ಆಟವಾಡುತ್ತಿದ್ದ ಕೆಲ ಪ್ರವಾಸಿಗರು ಸಮುದ್ರದ ಅಲೆಗಳಿಗೆ ಕೊಚ್ಚಿಕೊಂಡು ಹೋಗಿದ್ದಾರೆ.

ಅಲ್ಲದೇ ಪ್ರವಾಸಿಗರು ಬೀಚ್‌ನಲ್ಲಿ ಇರುವ ಲೈಫ್ ಗಾರ್ಡ್‌ಗಳ ಎಚ್ಚರಿಕೆಯನ್ನು ಮೀರಿ ಅಪಾಯ ಮೈಮೇಲೆ ಎಳೆದುಕೊಳ್ಳುತ್ತಾರೆ. ಇದನ್ನು ಮನಗಂಡು ಮುಂದಿನ ಮೂರೂವರೆ ತಿಂಗಳ ವರೆಗೆ ಕಡಲಿಗೆ ಇಳಿಯೋದನ್ನು ನಿಷೇಧಿಸಿ ತಡೆಬೇಲಿ ನಿರ್ಮಾಣ ಹಾಕಲಾಗಿದೆ.

ಸದ್ಯ ಬೀಚ್ ಇಳಿಯೋದಕ್ಕೆ ಅವಕಾಶ ಇಲ್ಲ ಅನ್ನೋ ಮಾಹಿತಿ ಇಲ್ಲದೇ ದೂರದ ಊರುಗಳಿಂದ ಬರುವ ಪ್ರವಾಸಿಗರು ನಿರಾಸೆ ಆಗುತ್ತಿದ್ದಾರೆ.

ಇದನ್ನೂ ಓದಿ: ತೇಲಿ ಬಂದ ಮೈಕ್ರೋ ಪ್ಲಾಸ್ಟಿಕ್‌, ಎಣ್ಣೆ ಜಿಡ್ಡು

Exit mobile version