Site icon Vistara News

Kundapura Kannada: ಕುಂದಾಪುರ ಕನ್ನಡ ಅಕಾಡೆಮಿ ಸ್ಥಾಪಿಸಲು ಆಗ್ರಹ

#image_title

ವಿಧಾನ ಪರಿಷತ್‌: ಕರ್ನಾಟಕದಲ್ಲಿ 25 ಲಕ್ಷದಷ್ಟಿರುವ ಕುಂದಾಪುರ ಕನ್ನಡ (Kundapura Kannada) ಭಾಷಿಕರಿಗಾಗಿ ಅಕಾಡೆಮಿ ಸ್ಥಾಪನೆ ಮಾಡಬೇಕು ಎಂದು ಕಾಂಗ್ರೆಸ್‌ನ ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಒತ್ತಾಯಿಸಿದರು.

ವಿಧಾನಪರಿಷತ್‌ನಲ್ಲಿ ಈ ಕುರಿತು ವಿಷಯವನ್ನು ಮಂಜುನಾಥ ಭಂಡಾರಿ ಪ್ರಸ್ತಾಪಿಸಿದರು.

25 ಲಕ್ಷ ಕುಂದಾಪುರ ಕನ್ನಡ ಭಾಷಿಗರಿದ್ದಾರೆ. ಅವರ ಬದುಕು ಧಾರ್ಮಿಕ ವಿಧಿವಿಧಾನದಲ್ಲಿ ಕುಂದಾಪರ ಭಾಷೆ ಅಡಗಿದೆ. ಹೀಗಾಗಿ ಕುಂದಾಪುರ ಕನ್ನಡ ಅಕಾಡಮಿ ಸ್ಥಾಪಿಸಬೇಕೆಂದು ಒತ್ತಾಯಿಸುತ್ತೇನೆ ಎಂದರು.

ಇದಕ್ಕೆ ಉತ್ತರ ನೀಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಂದ ಉತ್ತರ ಕೊಡಿಸಲಾಗುತ್ತದೆ ಎಂದರು.

ಇದನ್ನೂ ಓದಿ: Vistara News Launch | ವಿದೇಶದಲ್ಲಿ ಕನ್ನಡ ಘಮ ಹಂಚಿದ ಉದ್ಯಮಿ ಎಚ್.ಎಸ್. ಶೆಟ್ಟಿ; ವಿಸ್ತಾರದ ಕಾಯಕ ಯೋಗಿ

Exit mobile version