Site icon Vistara News

Murder Case : ಪ್ರೇಯಸಿಯ ಕತ್ತು ಸೀಳಿದ ಪ್ರೇಮಿ; 4 ವರ್ಷದ ಪ್ರೀತಿ ಕೊಲೆಯಲ್ಲಿ ಅಂತ್ಯ

Padhmaraj and gowri

ಮಂಗಳೂರು: ಬೈಕ್‌ನಲ್ಲಿ ಬಂದ ಪ್ರಿಯಕರನೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆ (Murder case) ಮಾಡಿದ ಘಟನೆ ದಕ್ಷಿಣ ಕ‌ನ್ನಡ ಜಿಲ್ಲೆಯ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಸಮೀಪವೇ ನಡೆದಿದೆ. ಗೌರಿ (18) ಮೃತ ದುರ್ದೈವಿ. ಪದ್ಮರಾಜ್‌ ಎಂಬಾತ ಹತ್ಯೆಗೈದವನು.

ಆರೋಪಿ ಪದ್ಮರಾಜ್‌

ಗೌರಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದವಳು ಎಂದು ತಿಳಿದು ಬಂದಿದೆ. ಪುತ್ತೂರಿನ ವಸ್ತ್ರ ಮಳಿಗೆಯೊಂದರಲ್ಲಿ ಗೌರಿ ಕೆಲಸ ಮಾಡುತ್ತಿದ್ದಳು. ಗೌರಿ ಮತ್ತು ಪದ್ಮರಾಜ್ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪದ್ಮರಾಜ್ ಮತ್ತು ಗೌರಿ ನಡುವೆ ಹಲವು ಬಾರಿ ಯಾವುದೊ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ಗಲಾಟೆ ಪ್ರಕರಣವು ವಿಟ್ಲ ಪೊಲೀಸ್‌ ಠಾಣೆ ಮೆಟ್ಟಲೇರಿದ್ದರು.

ಗುರುವಾರವೂ ಕೂಡ ಪುತ್ತೂರು‌ ಬಸ್ ನಿಲ್ದಾಣದ ಬಳಿ ಇಬ್ಬರ ನಡುವೆ ಮತ್ತೆ ಗಲಾಟೆ ಶುರುವಾಗಿದೆ. ಹೀಗಾಗಿ ಪದ್ಮರಾಜ್‌ ವಿರುದ್ಧ ದೂರು ಕೊಡಲು ಗೌರಿ ಠಾಣೆಗೆ ತೆರಳುವಾಗ ಪುತ್ತೂರು ಮಹಿಳಾ ಠಾಣೆ ಎದುರೇ ಚೂರಿ ಇರಿದಿದ್ದಾನೆ.

ಆಸ್ಪತ್ರೆಗೆ ಭೇಟಿ ನೀಡಿರುವ ಪೊಲೀಸರು

ಬೈಕ್‌ನಲ್ಲಿ ಬಂದವನೇ ಗೌರಿಯನ್ನು ತಡೆದು ಕತ್ತು ಸೀಳಿದ್ದಾನೆ. ಮೂರರಿಂದ ನಾಲ್ಕು ಬಾರಿ ಗೌರಿ ಕುತ್ತಿಗೆ ದುಷ್ಟ ಚಾಕು ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೌರಿಯನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಯಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಅಲ್ಲಿಂದ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಗೌರಿ ಜೀವ ಬಿಟ್ಟಿದ್ದಾಳೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version