ಮಂಗಳೂರು: ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ (N Ravikumar) ಅವರು ಗುರುವಾರ ಮೀನು ಮಾರುಕಟ್ಟೆಗೆ (Fish Market) ಭೇಟಿ ನೀಡಿದರು. ಈ ವೇಳೆ ಮೀನು ಮಾರಾಟಗಾರ ಮಹಿಳೆಯರ ಸಮಸ್ಯೆಯನ್ನು ಆಲಿಸಿದರು.
ಮಂಗಳೂರು ಪ್ರವಾಸದಲ್ಲಿರುವ ಎನ್. ರವಿಕುಮಾರ್, ಸ್ಟೇಟ್ ಬ್ಯಾಂಕ್ ಹತ್ತಿರವಿರುವ ಮೀನು ಮಾರುಕಟ್ಟೆಗೆ ಭೇಟಿ ನೀಡಿದರು. ಈ ವೇಳೆ ಮೀನು ಮಾರುಕಟ್ಟೆ ಸೇರಿದಂತೆ ಮೀನುಗಾರರ ಸಮಸ್ಯೆ, ಮಾರಾಟದ ವೇಳೆ ಆಗುವ ತೊಂದರೆಗಳ ಬಗ್ಗೆ ಅಹವಾಲುಗಳನ್ನು ಆಲಿಸಿದರು.
ಬಳಿಕ ಕರ್ನಾಟಕ ಪಾಲಿಟೆಕ್ನಿಕ್‌ಗೆ (ಕೆಪಿಟಿ) ಭೇಟಿ ನೀಡಿದ ಎನ್. ರವಿಕುಮಾರ್ ಅವರು ಅಧ್ಯಾಪಕರ, ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ್ದಾರೆ. 1945ರಲ್ಲಿ ಪ್ರಾರಂಭವಾದ ಈ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜು, ಕರಾವಳಿ ಕರ್ನಾಟಕ ಮತ್ತು ನಮ್ಮ ದೇಶದ ಇತರ ಪ್ರದೇಶಗಳ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ತಾಂತ್ರಿಕ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುತ್ತಿದೆ ಎಂದು ಹೇಳಿದರು.
ಟ್ವೀಟ್ ಮಾಡಿರುವ ರವಿಕುಮಾರ್
ಈ ಬಗ್ಗೆ ಎನ್. ರವಿಕುಮಾರ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್‌ಗಳನ್ನು ಸಹ ಮಾಡಿದ್ದಾರೆ.
ಮಂಗಳೂರಿನ ಎಸ್.ಬಿ.ಐ ಹತ್ತಿರವಿರುವ ಮೀನು ಮಾರುಕಟ್ಟೆಗೆ ಭೇಟಿ ನೀಡಿದೆ. ಈ ಸಂದರ್ಭದಲ್ಲಿ ಮೀನು ಮಾರಾಟಗಾರರ ಮಹಿಳೆಯರ ಸಮಸ್ಯೆ ಆಲಿಸಲಾಯಿತು.
— N Ravi Kumar (@nrkbjp) January 4, 2024
ಮೀನು ಮಾರುಕಟ್ಟೆಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರದ ಗಮನ ಸೆಳೆದು ಸಮಸ್ಯೆ ಪರಿಹರಿಸುತ್ತೇನೆಂದು ಭರವಸೆ ನೀಡಿದೆ. pic.twitter.com/A8CfAaYlKJ
ಮಂಗಳೂರು ಪ್ರವಾಸದ ಸಂದರ್ಭದಲ್ಲಿ 1945 ರಲ್ಲೇ ಪ್ರಾರಂಭವಾದ ಪ್ರತಿಷ್ಠಿತ ಕರ್ನಾಟಕ ಪಾಲಿಟೆಕ್ನಿಕ್ ಗೆ (KPT) ಭೇಟಿ ನೀಡಿ ಅಧ್ಯಾಪಕರ, ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದೆ.
— N Ravi Kumar (@nrkbjp) January 4, 2024
ಕರಾವಳಿ ಕರ್ನಾಟಕ ಮತ್ತು ನಮ್ಮ ದೇಶದ ಇತರ ಪ್ರದೇಶಗಳ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ತಾಂತ್ರಿಕ ಶೈಕ್ಷಣಿಕ ಅಗತ್ಯಗಳನ್ನು ಈ ಸಂಸ್ಥೆ ಪೂರೈಸುತ್ತಿದೆ. pic.twitter.com/VI1rTq8Qpf