Site icon Vistara News

ಪುತ್ತೂರು | ಹಿಂದೂ ಯುವತಿಯೊಂದಿಗೆ ಮುಸ್ಲಿಂ ಯುವಕನ ವಿವಾಹ? ಲವ್‌ ಜಿಹಾದ್‌ ಆರೋಪ

crime ಉಪ್ಪಿನಂಗಡಿ ದಾಂಧಲೆ

ಪುತ್ತೂರು: ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿರುವ ಪುತ್ತೂರು ಮೂಲದ ಹಿಂದೂ ಯುವತಿಯೊಂದಿಗೆ ಬೆಂಗಳೂರಿನ ಮುಸ್ಲಿಂ ಯುವಕರೊಬ್ಬರು ಮದುವೆಯಾಗುವುದಾಗಿ ವಿವಾಹ ನೋಂದಣಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಆಕ್ಷೇಪಣಾ ಸಲ್ಲಿಸಲು ಅವಕಾಶ ನೀಡಿರುವ ನೋಟಿಸ್‌, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ನಡುವೆ ಹಿಂದೂ ಸಂಘಟನೆಗಳು ಇದೊಂದು ಲವ್ ಜಿಹಾದ್ ( love jihad) ಎಂದು ಆರೋಪಿಸಿವೆ.

ಪುತ್ತೂರು ಮೂಲದವರಾಗಿದ್ದು ಇದೀಗ ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿರುವ ಅಕ್ಷತಾ ಕೆ. ಅವರು ಬೆಂಗಳೂರಿನ ನ್ಯಾಪನಹಳ್ಳಿ ನಿವಾಸಿ ಶೇಖ್ ಮಹಮ್ಮದ್ ಸಲೀಮ್ ಅವರನ್ನು ವಿವಾಹ ಆಗುವುದಾಗಿ ಬೆಂಗಳೂರಿನ ವಿವಾಹ ನೋಂದಣಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ವಿವಾಹ ನೋಂದಣಿ ಕಚೇರಿಯಲ್ಲಿ ವಿವಾಹಕ್ಕೆ ಅವಕಾಶ ನೀಡುವ ಮೊದಲು ಯಾರಿಂದಲಾದರೂ ಆಕ್ಷೇಪಣೆ ಇದೆಯೇ ಎಂಬ ಕುರಿತು 30 ದಿನದ ನೋಟೀಸ್ ಅನ್ನು ಪ್ರಕಟಿಸಲಾಗಿದೆ. ಈ ನೋಟೀಸ್ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದು ಲವ್‌ ಜಿಹಾದ್ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿವೆ.

Exit mobile version