ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬುಧವಾರ ಸೇನಾಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ (Rajouri Encounter) ಹುತಾತ್ಮರಾದ ನಾಲ್ವರು ವೀರ ಯೋಧರಲ್ಲಿ ಮಂಗಳೂರು ಮೂಲದ ಕ್ಯಾಪ್ಟನ್ ಎಂ.ಪಿ. ಪ್ರಾಂಜಲ್ (Captain MV Pranjal) ಎಂದು ತಿಳಿದುಬಂದಿದೆ. ಈ ಘಟನೆಯಲ್ಲಿ ಇಬ್ಬರು ಕ್ಯಾಪ್ಟನ್‌ಗಳು ಮತ್ತು ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ಇಬ್ಬರಿಗೆ ಗಾಯಗಳಾಗಿವೆ. ಪೀರ್ ಪಂಜಾಲ್ ಎಂಬ ಪ್ರದೇಶದಲ್ಲಿ ಇನ್ನೂ ಎನ್‌ಕೌಂಟರ್ ಮುಂದುವರಿದಿದೆ.
ರಜೌರಿ ಜಿಲ್ಲೆಯ ಕಾಲಕೋಟೆ ಪ್ರದೇಶದ ಗುಲಾಬ್‌ಗಢ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿದ್ದಾರೆ, ದೊಡ್ಡ ಮಟ್ಟದ ದಾಳಿಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಇದಕ್ಕಾಗಿ ಭದ್ರತಾ ಪಡೆಗಳು ನವೆಂಬರ್ 19ರಿಂದಲೇ ದಾಳಿಗೆ ಸಿದ್ಧತೆ ನಡೆಸಿದ್ದವು. ದಟ್ಟ ಕಾಡಿನಲ್ಲಿ ಉಗ್ರರ ಸುಳಿವು ಪತ್ತೆ ಭಾರಿ ಕಷ್ಟವೇ ಆಗಿತ್ತು. ನಡುವೆ ನವೆಂಬರ್ 22ರಂದು ಅಡಗಿಕೊಂಡಿದ್ದ ಉಗ್ರರು ಯೋಧರ ಮೇಲೆಯೇ ದಾಳಿ ಮಾಡಿದ್ದಾರೆ. ಈ ವೇಳೆ ಇಬ್ಬರು ಕ್ಯಾಪ್ಟನ್‌ಗಳು ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಅಡಗಿಕೊಂಡಿರುವ ಉಗ್ರರಿಗಾಗಿ ಹುಡುಕಾಟ ಇನ್ನೂ ಮುಂದುವರಿದಿದೆ. ಉಗ್ರರು ಗ್ರಾಮದ ಮಕ್ಕಳು ಮತ್ತು ಮಹಿಳೆಯರ ಮೇಲೆ ದಾಳಿ ಮಾಡುವ ಸಾಧ್ಯತೆಗಳಿರುವುದರಿಂದ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.
ಮೃತಪಟ್ಟ ಕ್ಯಾಪ್ಟನ್‌ಗಳನ್ನು 63ನೇ ರಾಷ್ಟ್ರೀಯ ರೈಫಲ್ಸ್‌ಗೆ ಸೇರಿದ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಮತ್ತು 9ನೇ ಪ್ಯಾರಾ ವಿಶೇಷ ಪಡೆಗೆ ಸೇರಿದ ಶುಭಂ ಎಂದು ಗುರುತಿಸಲಾಗಿದೆ. 9ನೇ ಪ್ಯಾರಾ ವಿಶೇಷ ಪಡೆಯ ಹವಿಲ್ದಾರ್ ಮಜೀದ್ ಕೂಡಾ ಹುತಾತ್ಮರಾಗಿದ್ದಾರೆ. ಇನ್ನೊಬ್ಬ ಸೈನಿಕನ ಹೆಸರು ಸ್ಪಷ್ಟವಾಗಿಲ್ಲ. ಈ ನಡುವೆ ರಜೌರಿಯಲ್ಲಿ ಸ್ಥಳೀಯರಿಗೆ ಮನೆ ಬಿಟ್ಟು ಹೊರಗೆ ಬರದಂತೆ ಸೂಚಿಸಲಾಗಿದ್ದು, ಶಾಲೆಗಳಿಗೆ ರಜೆ ನೀಡಲಾಗಿದೆ.
ಮಂಗಳೂರಿನ ಹುಡುಗ ಎಂ.ವಿ. ಪ್ರಾಂಜಲ್
ಉಗ್ರರ ಜತೆಗಿನ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಬಡಿದಾಡಿ ಪ್ರಾಣ ತ್ಯಾಗ ಮಾಡಿದ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನ (MRPL) ನಿವೃತ್ತ ಆಡಳಿತ ನಿರ್ದೇಶಕ ವೆಂಕಟೇಶ್ ಅವರ ಏಕೈಕ ಪುತ್ರ. (MRPL) ನ ಮಾಜಿ ನಿರ್ದೇಶಕ ಎಂ.ವೆಂಕಟೇಶ್ ಅವರ ಪುತ್ರ. ಎಂಆರ್‌ಪಿಎಲ್‌ನ ಬಳಿಯೇ ಇರುವ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲೇ ಪ್ರಾಂಜಲ್ ವಿದ್ಯಾಭ್ಯಾಸ ಮಾಡಿದ್ದರು.
ಕರಾವಳಿಯವರೇ ಆದ ವೆಂಕಟೇಶ್ ಅವರು ಮೇ 31ರಂದು ಸೇವಾ ನಿವೃತ್ತರಾಗಿದ್ದರು. ಕೆಲಕಾಲ ಮೈಸೂರಲ್ಲೂ ಇದ್ದರು. ತಂದೆಯ ನಿವೃತ್ತ ಸಮಾರಂಭಕ್ಕೆ ಪ್ರಾಂಜಲ್ ಆಗಮಿಸಿದ್ದರು,. ನಿವೃತ್ತಿ ಬಳಿಕ ವೆಂಕಟೇಶ್ ಅವರು ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇದೀಗ ಅವರಿಗೆ ಮಗನ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ.
BREAKING: Terrible news from Rajouri, J&K. 2 Army officers & 2 soldiers killed in action during a terror encounter. Operation still on. pic.twitter.com/xEkT1YMIQV
— Shiv Aroor (@ShivAroor) November 22, 2023
ಇದನ್ನೂ ಓದಿ: Jammu And Kashmir: ಉಗ್ರರ ಜತೆಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾಧಿಕಾರಿ, ಇಬ್ಬರು ಯೋಧ ಹುತಾತ್ಮ