Site icon Vistara News

Surathkal Murder | ಸುರತ್ಕಲ್‌ನಲ್ಲಿ ಹತ್ಯೆ ಪ್ರಕರಣ, ಅಹಿತಕರ ಘಟನೆ ನಡೆಯದಂತೆ ಡಿ.27 ಸಂಜೆ ತನಕ ನಿಷೇಧಾಜ್ಞೆ ಜಾರಿ

shasikumar

ಮಂಗಳೂರು: ನಗರದ ಹೊರ ವಲಯದ ಸುರತ್ಕಲ್‌ನ ಕಾಟಿ ಪಳ್ಳದಲ್ಲಿ ಫ್ಯಾನ್ಸಿ ಸ್ಟೋರ್‌ ಮೂಲಕ ವ್ಯಾಪಾರ ನಡೆಸುತ್ತಿದ್ದ ಜಲೀಲ್‌ ಎಂಬುವರನ್ನು ಚಾಕಿ ಇರಿದು ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ (Surathkal Murder ) ಮುಂಜಾಗರೂಕತಾ ಕ್ರಮವಾಗಿ ಡಿಸೆಂಬರ್‌ 27 ತನಕ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗರೂಕತಾ ಕ್ರಮವಾಗಿ ಸೆಕ್ಷನ್ 144 ರ ಅನ್ವಯ ನಿಷೇಧಾಜ್ಞೆ ಜಾರಿಯಾಗಿದೆ. 27 ರ ಮುಂಜಾನೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಸುರತ್ಕಲ್, ಪಣಂಬೂರು, ಕಾವೂರು, ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಮಾತ್ರ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಮಂಗಳೂರು ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.‌ ಕೊಲೆಯ ಹಿಂದೆ ಕೋಮುದ್ವೇಷ ಸಾಧ್ಯತೆಯ ಆಯಾಮದಲ್ಲೂ ತನಿಖೆ ಮುಂದುವರಿದಿದೆ.

ಮದ್ಯ ಮಾರಾಟ ನಿಷೇಧಿಸಿ:

ಬಜಪೆ, ಕಾವೂರು, ಪಣಂಬೂರು, ಸುರತ್ಕಲ್ ಠಾಣೆಗಳಲ್ಲಿ ಡಿ. 27 ರ ಮುಂಜಾನೆ 10 ಗಂಟೆ ತನಕ ಮದ್ಯ ಮಾರಾಟ ನಿಷೇಧಿಸಲಾಗಿದೆ. ಫ್ಯಾಕ್ಟರಿ ಮತ್ತು ವಾಣಿಜ್ಯ ಸಂಕೀರ್ಣಗಳಿಗೆ ಸೂಚನೆ ನೀಡಲಾಗಿದೆ. ರಾತ್ರಿ ಪಾಳಿ ನಡೆಸದಂತೆ ಕಮಿಷನರ್ ಸೂಚಿಸಲಾಗಿದೆ. ಸಂಜೆ 6 ಗಂಟೆಗೆ ಕೆಲಸಗಾರರನ್ನು ಕಳುಹಿಸಲು ತಿಳಿಸಲಾಗಿದೆ.

ನಗರ ಪೊಲೀಸ್ ಆಯುಕ್ತ ಶಶಿ ಕುಮಾರ್ ಹೇಳಿಕೆ: ಕೊಲೆಯಾಗಿರುವ ಜಲೀಲ್‌ ಅವರು, ಫ್ಯಾನ್ಸಿ ಅಂಗಡಿ ನಡೆಸಿಕೊಂಡಿದ್ದರು. ಇಬ್ಬರು ದಷ್ಕರ್ಮಿಗಳು ಅವರಿಗೆ ಚೂರಿ ಇರಿದು ಪರಾರಿಯಾಗಿದ್ದಾರೆ

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಕೊಲೆಯ ಹಿಂದಿರುವ ಉದ್ದೇಶ ಏನೆಂಬುದು ಗೊತ್ತಿಲ್ಲ. ಸ್ಥಳಿಯರು ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿ ಹೇಳಿದ್ದಾರೆ. ಈ ಬಗ್ಗೆಯೂ ನಾವು ಪರಿಶೀಲನೆ ನಡೆಸುತ್ತೇವೆ. ತನಿಖೆ ನಡೆಸಿದ ಬಳಿಕ ಎಲ್ಲವನ್ನೂ ಹೇಳಲು ಸಾಧ್ಯ. ಘಟನೆ ನಡೆದಿರುವ ಸ್ಥಳ ಹಿಂದಿನಿಂದಲೂ ಸೂಕ್ಷ್ಮ ಪ್ರದೇಶ. ಹೀಗಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ. ಡಿಸೆಂಬರ್ ತಿಂಗಳಲ್ಲಿ ಹಲವು ಗೂಂಡಾಗಿರಿ ಪ್ರಕರಣಗಳು ನಡೆದಿದೆ. ಈ ಎಲ್ಲಾ ಪ್ರಕರಣದಲ್ಲಿ ನಾವು ಪ್ರಕರಣ ದಾಖಲಿಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಶಶಿ ಕುಮಾರ್‌ ಹೇಳಿದ್ದಾರೆ.

Exit mobile version