ದೇವನಹಳ್ಳಿ: ವಿಶ್ವವಿಖ್ಯಾತ ನಾಡಹಬ್ಬ ದಸರಾ ಅಂಗವಾಗಿ ರಾಜ್ಯಕ್ಕೆ ಬರುತ್ತಿರುವ ಪ್ರಯಾಣಿಕರನ್ನು ಸ್ವಾಗತಿಸಲು, ಖುಷಿಪಡಿಸಲು ದೇವನಹಳ್ಳಿಐ ಕೆಮಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿ ಟರ್ಮಿನಲ್‌ನಲ್ಲಿಯೇ ವಿವಿಧ ನೃತ್ಯ ಕುಣಿತ ಇತ್ಯಾದಿಗಳನ್ನು ಏರ್ಪಡಿಸಿದ್ದಾರೆ. ಸಿಬ್ಬಂದಿ ಹಾಗೂ ಪ್ರಯಾಣಿಕರು ಸಹ ಹೆಜ್ಜೆ ಹಾಕಿ ಪ್ರತಿದಿನ ಹಬ್ಬದ ಕಳೆ ತರುತ್ತಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮವನ್ನು ಮೂಡಿಸಲು ಸಿಬ್ಬಂದಿ ಮಾಡುತ್ತಿರುವ ಪ್ರಯತ್ನ ಇದಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ದೇಶ ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಮಸ್ತ್ ಮನರಂಜನೆ ನೀಡಲು ಇಲ್ಲಿನ ಸಿಬ್ಬಂದಿ ಸಹ ವಿವಿಧ ಉಡುಗೆಗಳ ತೊಟ್ಟು ಹಲವು ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಹುಲಿ ಕುಣಿತ, ಗರ್ಭಾ ನೃತ್ಯಗಳನ್ನು ಪ್ರದರ್ಶಿಸಲಾಗುತ್ತಿದೆ.
ಏರ್‌ಪೋರ್ಟ್ ಟರ್ಮಿನಲ್ ಹೊರ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ ನಡೆದಿದ್ದು, ಸಿಬ್ಬಂದಿಯ ಜತೆ ಪ್ರಯಾಣಿಕರು ಸಹ ಹೆಜ್ಜೆ ಹಾಕುತ್ತಿದ್ದಾರೆ. ಕೊರೊನಾ ನಂತರ ನಿರ್ಬಂಧಗಳನ್ನು ಸಡಿಲಿಸಿದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ದಸರಾ ಸಡಗರ ನಡೆಯುತ್ತಿದೆ.
ಇದನ್ನೂ ಓದಿ | Mysuru dasara | ದಸರಾ ಗೋಲ್ಡ್ ಕಾರ್ಡ್ ಕಾಳಸಂತೆ ದಂಧೆ, 5000 ರೂ. ಕಾರ್ಡ್ ಡಬಲ್ ರೇಟಿಗೆ ಮಾರಾಟ, ತನಿಖೆಗೆ ಆದೇಶ