Site icon Vistara News

Acid Attacks In India |‌ 3 ವರ್ಷದಲ್ಲಿ ದೇಶಾದ್ಯಂತ 650 ಆ್ಯಸಿಡ್‌ ದಾಳಿ, ಬಂಗಾಳ ಅಗ್ರ, ಕರ್ನಾಟಕದ ಸ್ಥಾನ ಎಷ್ಟು?

Acid Attack on Girl

ನವದೆಹಲಿ: ಮನುಷ್ಯ ಅನಕ್ಷರಸ್ಥನಾದಷ್ಟು, ಹೆಚ್ಚಿನ ವಿದ್ಯೆ ಕಲಿತಷ್ಟು ಆಂತರ್ಯದಲ್ಲಿರುವ ದ್ವೇಷ, ಕ್ರೌರ್ಯ, ಹಿಂಸಾ ಮನೋಭಾವ ಕುಂಠಿತವಾಗುತ್ತ ಹೋಗಬೇಕು. ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕನಾಗಬೇಕು. ಆದರೆ, ದೇಶದಲ್ಲಿ ಒಂದೆಡೆ ಸಾಕ್ಷರತೆ ಪ್ರಮಾಣ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಕ್ರೌರ್ಯ, ಹಿಂಸೆಯೂ ದುಪ್ಪಟ್ಟಾಗುತ್ತಿದೆ. ಇದಕ್ಕೆ ಉತ್ತಮ ನಿದರ್ಶನ ಎಂದರೆ, ದೇಶಾದ್ಯಂತ ಮೂರು ವರ್ಷದಲ್ಲಿ 659 ಆ್ಯಸಿಡ್‌ ದಾಳಿ ನಡೆದಿರುವುದು (Acid Attacks In India) ವರದಿಯೊಂದರಿಂದ ಬಹಿರಂಗವಾಗಿದೆ.

ದೇಶಾದ್ಯಂತ 2018ರಿಂದ 2020ರ ಅವಧಿಯ ಮೂರು ವರ್ಷದಲ್ಲಿ 659 ಆ್ಯಸಿಡ್‌ ದಾಳಿಗಳು ನಡೆದಿವೆ. ಆ್ಯಸಿಡ್‌ ದಾಳಿಗಳಲ್ಲಿ ಪಶ್ಚಿಮ ಬಂಗಾಳದ ಪ್ರಥಮ ಸ್ಥಾನ ಪಡೆದಿದ್ದು, 160 ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶ (115), ಒಡಿಶಾ (35), ಮಧ್ಯಪ್ರದೇಶ (34), ಬಿಹಾರ (30) ಇವೆ. ಹಾಗೆಯೇ, ಕರ್ನಾಟಕವು 19 ಕೇಸ್‌ಗಳೊಂದಿಗೆ 11ನೇ ಸ್ಥಾನದಲ್ಲಿದೆ.

ಕರ್ನಾಟಕದಲ್ಲಿ 2018ರಲ್ಲಿ ಏಳು, 2019ರಲ್ಲಿ ಏಳು ಹಾಗೂ 2020ರಲ್ಲಿ ಐದು ಆ್ಯಸಿಡ್‌ ದಾಳಿ ಪ್ರಕರಣಗಳು ದಾಖಲಾಗಿವೆ. ಗಮನಾರ್ಹ ಸಂಗತಿ ಎಂದರೆ, ಅರುಣಾಚಲ ಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್‌ ಹಾಗೂ ಸಿಕ್ಕಿಂನಲ್ಲಿ ಒಂದೇ ಒಂದು ಆ್ಯಸಿಡ್‌ ದಾಳಿ ಕೇಸ್‌ ದಾಖಲಾಗಿಲ್ಲ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ | Video| ವಿದ್ಯಾರ್ಥಿನಿ ಮೇಲೆ ಆ್ಯಸಿಡ್​ ದಾಳಿ; ಉರಿ ತಾಳಲಾರದೆ ನೋವಿನಿಂದ ಕಿರುಚುತ್ತ ರಸ್ತೆ ತುಂಬ ಓಡಿದ ಹುಡುಗಿ

Exit mobile version