ದಾವಣಗೆರೆ: ಜೋಕಾಲಿ ಆಡುತ್ತಿದ್ದಾಗ ಆಕಸ್ಮಿಕವಾಗಿ ಹಗ್ಗ ಕುತ್ತಿಗೆಗೆ ಬಿಗಿದು ಬಾಲಕನೊಬ್ಬ ಮೃತಪಟ್ಟಿದ್ದಾನೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗದಲ್ಲಿ ಈ ಘಟನೆ ನಡೆದಿದೆ. ನಾಲ್ಕನೇ ತರಗತಿ ವಿದ್ಯಾರ್ಥಿ ಪಿ.ಜೆ.ಕೊಟ್ರೇಶಿ ಮೃತಪಟ್ಟ ಬಾಲಕ.
ಸವಳಂಗದ ಎನ್ ಜಿ ಪ್ರವೀಣ್ ಅವರ ಮಗ ಕೊಟ್ರೇಶಿ ಶಿವಮೊಗ್ಗ ಖಾಸಗಿ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಆಡಲೆಂದು ನಡುಮನೆಯಲ್ಲಿ ಜೋಕಾಲಿಯೊಂದನ್ನು ಪೋಷಕರು ಸಿದ್ಧಪಡಿಸಿಕೊಟ್ಟಿದ್ದರು. ಅಂತೆಯೇ ಕೊಟ್ರೇಶಿ ಶಾಲೆಯಿಂದ ಮನೆಗೆ ಬಂದವನೇ ಜೋಕಾಲಿಯಲ್ಲಿ ಕುಳಿತು ಆಡುತ್ತಿದ್ದ.
ಜೋಕಾಲಿ ಆಡುತ್ತಿದಾಗ ಆಕಸ್ಮಿಕವಾಗಿ ಉರುಳಿದ್ದು, ಕುಣಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಉಸಿರಗಟ್ಟಿ ಮೃತಪಟ್ಟಿದ್ದಾನೆ. ಕೂಡಲೇ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆದಾಗಲೇ ಆತ ಉಸಿರುನಿಲ್ಲಿಸಿದ್ದ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Assault Case : ಹೊಡಿತಾನೆ ಬಡಿತಾನೆ ನನ್ನ ಗಂಡ; ಅನುಮಾನ ಪಿಶಾಚಿ ಕಾಟಕ್ಕೆ ಬೇಸತ್ತಳು ಹೆಂಡತಿ
ಸ್ಕೂಟರ್ ನಿಲ್ಲಿಸುವಾಗ ಕುಸಿದು ಬಿದ್ದು ವೃದ್ಧ ಸಾವು
ದಿಢೀರ್ ಕುಸಿದು ಬಿದ್ದು ನಿವೃತ್ತ ಎಎಸ್‌ಐ ಅಧಿಕಾರಿ ಮೃತಪಟ್ಟಿದ್ದಾರೆ. ರಾಜು (71) ಮೃತ ದುರ್ದೈವಿ. ಮೈಸೂರಿನ ವಿಜಯನಗರ ಬಡಾವಣೆ ಬಳಿ ಘಟನೆ ನಡೆದಿದೆ.
ಪಾರ್ಕಿಂಗ್‌ನಲ್ಲಿ ಸ್ಕೂಟರ್ ನಿಲ್ಲಿಸುವಾಗ ಏಕಾಏಕಿ ರಾಜು ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ರಾಜು ಅವರು ಕುಸಿದು ಬೀಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ