Site icon Vistara News

ಡಿ.4ರಂದು ಭಗವದ್ಗೀತಾ ಮಹಾಸಮರ್ಪಣಾ ಕಾರ್ಯಕ್ರಮ; ದಾವಣಗೆರೆಯಲ್ಲಿ ಪ್ರಶಿಕ್ಷಣ ವರ್ಗ ಸಂಪನ್ನ

ಭಗವದ್ಗೀತಾ

ದಾವಣಗೆರೆ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಿಂದ ಡಿ.4ರಂದು ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಭಗವದ್ಗೀತಾ ಮಹಾಸಮರ್ಪಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ದಾವಣಗೆರೆಯ ಈಶ್ವರಮ್ಮ ಶಾಲೆಯಲ್ಲಿ ಪ್ರಾಂಶುಪಾಲರು, ಶಿಕ್ಷಕರಿಗೆ ಪ್ರಶಿಕ್ಷಣ ವರ್ಗವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ 5ನೇ ಅಧ್ಯಾಯ ನಿಗದಿಪಡಿಸಲಾಗಿದೆ. ನ.28ರಂದು ದಾವಣಗೆರೆ ತಾಲೂಕು ಮಟ್ಟದ ಸ್ಪರ್ಧೆ, ನ. 30ರಂದು ಜಿಲ್ಲಾ ಮಟ್ಟದ ಸ್ಪರ್ಧೆ, ಡಿಸೆಂಬರ್ 3ರಂದು ರಾಜ್ಯ ಮಟ್ಟದ ಸ್ಪರ್ಧೆ ಆಯೋಜಿಸಿದ್ದು, ಡಿ. 4ರಂದು ಅಭಿಯಾನ ಮಹಾಸಮರ್ಪಣಾ ಕಾರ್ಯಕ್ರಮ ನಡೆಯಲಿದೆ.

ಭಗವದ್ಗೀತಾ ಅಭಿಯಾನ ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ದಾವಣಗೆರೆ ತಾಲೂಕಿನ ಎಲ್ಲ ಖಾಸಗಿ ಶಾಲೆಗಳ ಶಿಕ್ಷಕರಿಗೆ, ಮುಖ್ಯೋಪಾಧ್ಯಾಯರಿಗೆ ಪ್ರಶಿಕ್ಷಣ ವರ್ಗ ನಡೆಸಲಾಗುತ್ತಿದೆ. ಪ್ರಶಿಕ್ಷಣ ವರ್ಗದಲ್ಲಿ ಡಾ.ಎಸ್.ಆರ್.ಹೆಗಡೆ, ಕುಸುಮ ಶ್ರೇಷ್ಠಿ, ಬಿ.ಟಿ.ಅಚ್ಯುತ್, ನ್ಯಾಷನಲ್ ಸ್ಕೂಲ್‌ನ ಸಹನಾ ರವಿ ಮತ್ತಿತರರು ಇದ್ದರು.

ಇದನ್ನೂ ಓದಿ | Food Poisoning | ತೊಟ್ಟಿಲು ಶಾಸ್ತ್ರದಲ್ಲಿ ಊಟ ಸೇವಿಸಿ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥ; ಆಸ್ಪತ್ರೆಗೆ ಭೇಟಿ ನೀಡಿದ ರೇಣುಕಾಚಾರ್ಯ

Exit mobile version