ಹೊನ್ನಾಳಿ: ಪಟ್ಟಣದ ಹಿರೇಕಲ್ಮಠದ ಸಭಾಭವನದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಪಾನಮುಕ್ತ ಸದಸ್ಯರ ನವ ಜೀವನೋತ್ಸವ ಎಂಬ ವಿಶೇಷ ಕಾರ್ಯಕ್ರಮವನ್ನು (Davanagere News) ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸಂಟ್ ಪಾಯಾಸ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇದು ಒಂದು ವಿಶೇಷ ಕಾರ್ಯಕ್ರಮ. ಇಲ್ಲಿ ಪಾಲ್ಗೊಂಡವರೆಲ್ಲರೂ ಮದ್ಯವ್ಯಸನದಿಂದ ಹೊರಬಂದು ನವಜೀವನ ಸದಸ್ಯರಾಗಿ ಸುಂದರ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: Maha Shivaratri 2024: ಶಿವರಾತ್ರಿಯಂದು ಶಿವಾರಾಧನೆಗೆ ಯಾವ ಸಮಯ ಸೂಕ್ತ? ಯಾವ ನೈವೇದ್ಯ ಮಾಡಬಹುದು?
ಇದೇ ಸಂದರ್ಭದಲ್ಲಿ ನವಜೀವನ ಸದಸ್ಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಹೊಸಕೇರಿ ಸುರೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಕುಮಾರಸ್ವಾಮಿ ಬಿ.ಎಲ್., ನಾಗರಾಜ್ ಕತ್ತಿಗೆ, ಮಂಜಪ್ಪ ಸರಳಿನಮನೆ, ಅವಳದ ಲಿಂಗರಾಜ್, ಶ್ರೀನಿವಾಸ್, ನಟರಾಜ್ ಮತ್ತು ಲಕ್ಷ್ಮಣ್ ಎಂ, ಹೊನ್ನಾಳಿ, ಬಸವಪಟ್ಟಣ ಯೋಜನಾಧಿಕಾರಿಗಳು, ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು ಮತ್ತು ಇತರರು ಉಪಸ್ಥಿತರಿದ್ದರು.