Maha Shivaratri 2024: ಶಿವರಾತ್ರಿಯಂದು ಶಿವಾರಾಧನೆಗೆ ಯಾವ ಸಮಯ ಸೂಕ್ತ? ಯಾವ ನೈವೇದ್ಯ ಮಾಡಬಹುದು? - Vistara News

ಮಹಾ ಶಿವರಾತ್ರಿ

Maha Shivaratri 2024: ಶಿವರಾತ್ರಿಯಂದು ಶಿವಾರಾಧನೆಗೆ ಯಾವ ಸಮಯ ಸೂಕ್ತ? ಯಾವ ನೈವೇದ್ಯ ಮಾಡಬಹುದು?

ಶಿವರಾತ್ರಿಯ ದಿನದಂದು (Maha Shivaratri 2024) ಉಪವಾಸ ಮಾತ್ರವಲ್ಲ, ಜಾಗರಣೆಗೂ ಅಂಥದ್ದೇ ಮಹತ್ವವಿದೆ. ಇದು ಕೇವಲ ನಿದ್ದೆ ಕಳೆದು ಎಚ್ಚರ ಇರುವುದಲ್ಲ, ಮನಸ್ಸನ್ನೇ ಜಾಗೃತ ಸ್ಥಿತಿಯಲ್ಲಿ ಇರಿಸುವಂಥದ್ದು. ಮಾ.8ರಂದು ಶಿವರಾತ್ರಿ. ಈ ಹಿನ್ನೆಲೆಯಲ್ಲಿ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Maha Shivaratri 2024 Shiva worship
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಶಿವನ ಆರಾಧನೆಗೊಂದು ಹಗಲು-ರಾತ್ರಿ ಮೀಸಲಿಡುವ ಸಂದರ್ಭವಿದು. ನಿರಾಹಾರದ ಮೂಲಕ ದೇಹ-ಮನಸ್ಸುಗಳನ್ನು ಶುದ್ಧೀಕರಿಸಿ, ಜಾಗರಣೆಯ ಮೂಲಕ ಚೇತನವನ್ನು ಜಾಗೃತಗೊಳಿಸುವ ಸಂದೇಶವನ್ನು ಈ ಹಬ್ಬ ನಮಗೆಲ್ಲ ನೀಡುತ್ತದೆ. ಏನು ವೈಶಿಷ್ಟ್ಯ ಶಿವರಾತ್ರಿಯ ಆಚರಣೆಯದ್ದು (Maha Shivaratri 2024) ಎಂದು ನಾವು ಅರಿಯಲೇಬೇಕಿದೆ. ಧರ್ಮ ಯಾವುದೇ ಆದರೂ ಉಪವಾಸಕ್ಕೊಂದು ಮಹತ್ವವಿದೆ. ಲೌಕಿಕ ಸೌಖ್ಯಗಳನ್ನು ತ್ಯಜಿಸಿದಾಗಲೇ ಪರಮಾರ್ಥದ ಸಾಧನೆ ಸಿದ್ಧಿಸಲು ಸಾಧ್ಯ ಎನ್ನುವ ಭಾವ ಇಂಥ ಉಪಾಸನಾ ಮಾರ್ಗಗಳ ಹಿಂದಿರುವುದು. ಶಿವರಾತ್ರಿಯ ದಿನದಂದು ಉಪವಾಸ ಮಾತ್ರವಲ್ಲ, ಜಾಗರಣೆಗೂ ಅಂಥದ್ದೇ ಮಹತ್ವವಿದೆ. ಇದು ಕೇವಲ ನಿದ್ದೆ ಕಳೆದು ಎಚ್ಚರ ಇರುವುದಲ್ಲ, ಮನಸ್ಸನ್ನೇ ಜಾಗೃತ ಸ್ಥಿತಿಯಲ್ಲಿ ಇರಿಸುವುದು. ಹೀಗೆ ಉಪವಾಸ, ಜಾಗರಣೆಗಳೇ ಔಪಾಸಕನ ಮುಖ್ಯ ಮಾರ್ಗವಾದ ಹಬ್ಬದ ಬಗ್ಗೆ ಕುತೂಹಲಗಳಿದ್ದರೆ, ಅದು ಸಹಜ.

mahadev

ಫಾಲ್ಗುಣ ಅಮವಾಸ್ಯೆಯ ಹಿಂದಿನ ದಿನ

ಫಾಲ್ಗುಣ ಮಾಸದ ಕೃಷ್ಣಪಕ್ಷದ ಚತುರ್ದಶಿಯಂದು, ಅಂದರೆ ಫಾಲ್ಗುಣ ಅಮವಾಸ್ಯೆಯ ಹಿಂದಿನ ದಿನ ಶಿವನ ಆರಾಧನೆಗೆ ಹೆಚ್ಚಿನ ಪ್ರಾಧಾನ್ಯ ನೀಡಲಾಗುತ್ತದೆ. ಈ ಪ್ರಕಾರ, ಈ ವರ್ಷ ಮಾರ್ಚ್‌ ತಿಂಗಳ ಎಂಟನೇ ತಾರೀಕು ಶಿವರಾತ್ರಿ. 8ನೇ ತಾರೀಕಿನ ರಾತ್ರಿ 9.57ರಿಂದ 9ನೇ ತಾರೀಕಿನ ಸಂಜೆ 6.17ರವರೆಗೆ ಚತುರ್ದಶಿಯ ತಿಥಿ ಇರಲಿದ್ದು, ಶಿವಾರಾಧನೆಗೆ ಪ್ರಶಸ್ತವಾಗಿದೆ.

ಕಾರಣಗಳು ಹಲವು

ಶಿವರಾತ್ರಿಯನ್ನು ಆಚರಿಸುವುದಕ್ಕೆ ಹಲವು ಕಾರಣಗಳಿವೆ. ಜಗದೀಶ್ವರ ಮತ್ತು ಜಗನ್ಮಾತೆ ಶಿವಾಣಿ ಒಂದಾದ ದಿನವದು ಎಂದು ಗುರುತಿಸಲಾಗಿದೆ. ಜೊತೆಗೆ ಈಶ್ವರನ ತಾಂಡವಕ್ಕೂ ಈ ದಿನದೊಂದಿಗೆ ನಂಟಿದೆ. ಇದಲ್ಲದೆ, ಅಸುರ ನಿರ್ಮಿತ ತ್ರಿಪುರವನ್ನು ನಾಶಪಡಿಸಿ, ತ್ರಿಪುರಾಂತಕ ಎನಿಸಿದ್ದಕ್ಕೂ ಈ ದಿನ ಸಂಬಂಧಿಸಿದ್ದು ಎನ್ನಲಾಗುತ್ತದೆ. ಈ ಮೂಲಕ, ಅಹಂಕಾರ ಮತ್ತು ಅಜ್ಞಾನದ ಲಯಕ್ಕೂ, ತ್ರಿಮೂರ್ತಿಗಳಲ್ಲಿ ಒಬ್ಬನಾದ ಈಶ ಕಾರಣನಾದ ಕಥೆಯಿದು. ಇನ್ನು ಭಗೀರಥನ ತಪಸ್ಸಿಗೆ ಒಲಿದು ಧರೆಗಿಳಿದ ಭಾಗೀರಥಿಯನ್ನು ಶಿರದಲ್ಲಿ ಧರಿಸಿ, ಗಂಗಾಧರ ಕಥೆಗಳನ್ನೂ ಹೇಳಲಾಗುತ್ತದೆ. ಕಥೆಗಳು ಯಾವುದೇ ಇದ್ದರೂ, ಮನಸ್ಸನ್ನು ಸತ್ಸಂಗದಲ್ಲಿ ತೊಡಗಿಸಿಕೊಳ್ಳುವ ದಿನವಂತೂ ಇದು ಹೌದು.

Woman Meditating in the Workplace Sitting in Front of a Laptop Practicing Stress Relief Exercises Diabetes Control

ದೈಹಿಕ, ಮಾನಸಿಕ ಶುದ್ಧಿ

ಶಿವರಾತ್ರಿಯಂದು ದೈಹಿಕ ಮತ್ತು ಮಾನಸಿಕ ಶುದ್ಧಿಯ ಅಗತ್ಯವನ್ನು ಪ್ರಾಚೀನ ಕಾಲದಿಂದಲೂ ಹೇಳುತ್ತಾ ಬರಲಾಗಿದೆ. ಅಂದಿನ ದಿನ ಪ್ರಾತರ್ವಿಧಿಗಳನ್ನು ಮುಗಿಸಿ, ದಿನವಿಡೀ ಉಪವಾಸವಿದ್ದು, ಪೂಜೆ ಮತ್ತು ಧ್ಯಾನದಲ್ಲಿ ಇರಲಾಗುತ್ತದೆ. ದೇವಸ್ಥಾನಗಳಿಗೆ ಭೇಟಿ ನೀಡಿ, ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಈಶ್ವರನಿಗೆ ಪ್ರಿಯವಾದ ಬಿಲ್ವಾರ್ಚನೆಯಿಂದ ಹಿಡಿದು, ಪಂಚಾಮೃತದ ಅಭಿಷೇಕದವರೆಗೆ ಹಲವು ರೀತಿಯ ಅಭಿಷೇಕಗಳನ್ನು ಮಾಡಲಾಗುತ್ತದೆ. ಭಸ್ಮ, ವಿಭೂತಿ, ಭೂಪ, ಬಿಳಿಯ ಹೂಗಳಿಂದಲೂ ಪರಮೇಶ್ವರನನ್ನು ಪೂಜಿಸಲಾಗುತ್ತದೆ.

ಪೂಜೆಯ ವಿಧಾನಗಳು ಭಿನ್ನ

ಭಾರತದಲ್ಲೇ ಪ್ರಾಂತೀಯವಾಗಿ ಈಶ್ವರನ ಪೂಜೆಯ ವಿಧಾನಗಳು ಭಿನ್ನವಾಗಿವೆ. ಆದರೆ ಹೆಚ್ಚಿನ ಕಡೆಗಳಲ್ಲಿ ಉಪವಾಸ ಮತ್ತು ರಾತ್ರಿಯ ಜಾಗರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಇಡೀ ದಿನದ ನಿರಾಹಾರದ ನಂತರ ಚತುರ್ದಶಿಯ ತಿಥಿಯಲ್ಲಿ ಶಿವನನ್ನು ಪೂಜಿಸಿ, ಪ್ರಸಾದ ಸೇವಿಸಲಾಗುತ್ತದೆ. ನಂತರ ರಾತ್ರಿಡೀ ಭಜನೆ ಮಾಡುವ ಕ್ರಮವಿದೆ.

Maha Shivaratri food

ಹಲವು ರೀತಿಯ ನೈವೇದ್ಯ

ಈಶ್ವರನ ಪೂಜೆಯ ಭಾಗವಾಗಿ ಹಲವು ರೀತಿಯ ನೈವೇದ್ಯಗಳನ್ನೂ ತಯಾರಿಸಲಾಗುತ್ತದೆ. ಅದರಲ್ಲಿ ಕರ್ನಾಟಕದಲ್ಲಿ ಪ್ರಧಾನವಾಗಿ ತಯಾರಿಸಲಾಗುವುದು ತಂಬಿಟ್ಟು. ಕೆಲವೆಡೆ ತಂಬಿಟ್ಟಿನ ಆರತಿಯನ್ನೂ ಮಾಡಲಾಗುತ್ತದೆ. ಅಕ್ಕಿ ಹಿಟ್ಟು, ಶೇಂಗಾ, ಬೆಲ್ಲ, ಕೊಬ್ಬರಿ, ಏಲಕ್ಕಿ ಮತ್ತು ತುಪ್ಪದ ಈ ಸಿಹಿ ಆರೋಗ್ಯಕ್ಕೂ ಹಿತವಾಗುವಂಥದ್ದು. ಇದಲ್ಲದೆ ಗೋಧಿ ಉಂಡೆ, ಸಿಹಿ ಅವಲಕ್ಕಿ, ಅಕ್ಕಿ ಪಾಯಸ, ಪಂಚಾಮೃತಗಳ ನೈವೇದ್ಯವನ್ನೂ ಮಾಡಲಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ತುಮಕೂರು

Tumkur News: ಶಿರಾದಲ್ಲಿ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ

Tumkur News: ಶಿರಾ ನಗರ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಮಹಾಶಿವರಾತ್ರಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

VISTARANEWS.COM


on

Mahashivaratri celebration in Shira

ಶಿರಾ: ನಗರ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಮಹಾಶಿವರಾತ್ರಿಯನ್ನು (Mahashivaratri) ಶ್ರದ್ಧಾ ಭಕ್ತಿಯಿಂದ (Tumkur News) ಆಚರಿಸಲಾಯಿತು.

ಮಹಾಶಿವರಾತ್ರಿ ಅಂಗವಾಗಿ ಶಿವ ದೇವಸ್ಥಾನಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ವಿಶೇಷ ದೀಪೋತ್ಸವ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ಬೆಳಗ್ಗೆಯಿಂದಲೇ ಭಕ್ತಾದಿಗಳು ಶಿವ ದೇವಸ್ಥಾನಗಳಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು. ನಗರದ ಶ್ರೀ ಕೊಳದಪ್ಲೇಶ್ವರ ದೇವಸ್ಥಾನ ಸೇರಿದಂತೆ ಶಿವ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ಇದನ್ನೂ ಓದಿ: IND vs ENG: ಅಂತಿಮ ಟೆಸ್ಟ್​ ಗೆದ್ದು ಇತಿಹಾಸ ನಿರ್ಮಿಸಿದ ಭಾರತ; ನೂತನ ದಾಖಲೆ ಸೃಷ್ಟಿ

ಶಿರಾದ ಶ್ರೀ ಶಂಕರ ಸಹಸ್ರ ಲಿಂಗಾರ್ಚನೆ ಸಮಿತಿಯ ವತಿಯಿಂದ ಮಹಾಶಿವರಾತ್ರಿಯ ಅಂಗವಾಗಿ ನಗರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಹಸ್ರ ಲಿಂಗಾರ್ಚನೆ ಕಾರ್ಯಕ್ರಮ ಜರುಗಿತು.

ತಾಲೂಕಿನ ಪೂಜಾರಮದ್ದನಹಳ್ಳಿಯ ಸಿದ್ಧಾರೂಢ ಶಿವಾನಂದ ಮಂದಿರದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಪಂಚವೃಕ್ಷದಡಿ ಶ್ರೀ ಪಂಚಮುಖಿ ಲಿಂಗ ಸನ್ನಿಧಿಯಲ್ಲಿ ಶಿವಪಂಚಾಕ್ಷರಿ ಜಪ, ಯಜ್ಞ ಕಾರ್ಯಕ್ರಮ ಹಾಗೂ ಭಕ್ತರಿಂದ ಜಲಾಭಿಷೇಕ ನಡೆಯಿತು.

ಇದನ್ನೂ ಒದಿ: Vinay Rajkumar: ವಿನಯ್‌ ರಾಜ್‌ಕುಮಾರ್ ನಟನೆಯ ʻಗ್ರಾಮಾಯಣʼ ಸೆಟ್‌ಗೆ ಭೇಟಿ ಕೊಟ್ಟ ಶಿವಣ್ಣ-ಗೀತಾ!

ಇನ್ನು ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಹಾಶಿವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಯಿತು.

Continue Reading

ದಾವಣಗೆರೆ

Davanagere News: ಹೊನ್ನಾಳಿಯಲ್ಲಿ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ

Davanagere News: ಹೊನ್ನಾಳಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ಶಿವ ದೇವಾಲಯಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಸಹಸ್ರನಾಮ ಅರ್ಚನೆ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.

VISTARANEWS.COM


on

Mahashivaratri celebration in Honnali

ಹೊನ್ನಾಳಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಹಾಶಿವರಾತ್ರಿ (Mahashivaratri) ಅಂಗವಾಗಿ ಶುಕ್ರವಾರ ಶಿವ ದೇವಾಲಯಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಸಹಸ್ರನಾಮ ಅರ್ಚನೆ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು (Davanagere News) ನೆರವೇರಿದವು.

ಪಟ್ಟಣದ ಶ್ರೀ ನೀಲಕಂಠೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಕಳೆದ ಒಂದು ವಾರದಿಂದ ವಿಶೇಷ ಪೂಜೆ, ಮಧ್ಯಾಹ್ನ ಮಹಾ ಮಂಗಳಾರತಿ, ಸಂಜೆ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ನೀಲಕಂಠೇಶ್ವರನ ದರ್ಶನ ಪಡೆದು ಪುನೀತರಾದರು ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಿತು. ವಿಶೇಷವಾಗಿ ಶಿವನಿಗೆ ಬಿಲ್ವ ಪತ್ರೆ, ಹೂವುಗಳನ್ನು ಅರ್ಪಿಸಿ, ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಇದನ್ನೂ ಓದಿ: IND vs ENG: ಅಂತಿಮ ಟೆಸ್ಟ್​ ಗೆದ್ದು ಇತಿಹಾಸ ನಿರ್ಮಿಸಿದ ಭಾರತ; ನೂತನ ದಾಖಲೆ ಸೃಷ್ಟಿ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಪಟ್ಟಣದ ನೀಲಕಂಠೇಶ್ವರ ದೇವರ ಸನ್ನಿಧಿಯಲ್ಲಿ ಸಹಸ್ರಲಿಂಗ ಲಿಂಗ ದೀಪೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ: Vinay Rajkumar: ವಿನಯ್‌ ರಾಜ್‌ಕುಮಾರ್ ನಟನೆಯ ʻಗ್ರಾಮಾಯಣʼ ಸೆಟ್‌ಗೆ ಭೇಟಿ ಕೊಟ್ಟ ಶಿವಣ್ಣ-ಗೀತಾ!

ಮಹಾಶಿವರಾತ್ರಿ ಅಂಗವಾಗಿ ಶಿವದೇವಾಲಯಗಳಿಗೆ ಭಕ್ತರ ದಂಡೆ ಹರಿದು ಬಂದಿತ್ತು. ಪಟ್ಟಣದ ಶ್ರೀ ಚನ್ನಪ್ಪ ಸ್ವಾಮಿ ಹಿರೇಕಲ್ ಮಠದಲ್ಲಿರುವ ಶಿವನ ದೇವಾಲಯದಲ್ಲಿ ನೂರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಗೆಡ್ಡೆ ರಾಮೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.

Continue Reading

ಶಿವಮೊಗ್ಗ

Shivamogga News: ಸೊರಬದಲ್ಲಿ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ

Shivamogga News: ಸೊರಬ ಪಟ್ಟಣ ಸೇರಿ ತಾಲೂಕಿನಾದ್ಯಂತ ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ಶಿವ ದೇವಾಲಯಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಸಹಸ್ರನಾಮ ಅರ್ಚನೆ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.

VISTARANEWS.COM


on

Mahashivaratri celebration in soraba

ಸೊರಬ: ಪಟ್ಟಣ ಸೇರಿ ತಾಲೂಕಿನಾದ್ಯಂತ ಮಹಾಶಿವರಾತ್ರಿ (Mahashivaratri) ಅಂಗವಾಗಿ ಶುಕ್ರವಾರ ಶಿವ ದೇವಾಲಯಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ಸಹಸ್ರನಾಮ ಅರ್ಚನೆ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು (Shivamogga News) ನೆರವೇರಿದವು.

ಪಟ್ಟಣದ ದಂಡಾವತಿ ನದಿ ದಂಡೆಯಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಕಳೆದ ಒಂದು ವಾರದಿಂದ ಶಿವಪಂಚಾಕ್ಷರಿ ಜಪ ನಡೆಯುತ್ತಿದ್ದು, ಇಂದು ಶಿವಪಂಚಾಕ್ಷರಿ ಹವನ ಮತ್ತು ಚಂದ್ರಮೌಳೇಶ್ವರ ಸ್ವಾಮಿಗೆ ಸುಮಾರು 14 ಜನ ಪುರೋಹಿತರಿಂದ ಶತರುದ್ರಾಭಿಷೇಕ ಹಾಗೂ ವಿಶೇಷ ಪೂಜೆ, ಮಧ್ಯಾಹ್ನ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಿತು.

ಪಟ್ಟಣದ ಶ್ರೀ ರಂಗನಾಥ ದೇವಸ್ಥಾನ ಸಮೀಪದ ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಉಮಾಮಹೇಶ್ವರ ಭಾವೆ ಫೌಂಡೇಷನ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಶ್ರೀ ದೇವರಿಗೆ ವಿಶೇಷ ಪೂಜೆ, ರುದ್ರಾಭಿಷೇಕ ನಂತರ ಪ್ರಸಾದ ವಿತರಣೆ ನಡೆಯಿತು. ವಿಶೇಷವಾಗಿ ಶಿವನಿಗೆ ಬಿಲ್ವ ಪತ್ರೆ, ಕುಂಸಲ ಹೂವು,ಮುತ್ತುಗದ ಹೂವು, ಪಾರಿಜಾತ ಹೂವು, ಎಕ್ಕದ ಹೂವು, ಗಂಟೆ ಹೂವು, ಕಣಗಾಲ ಹೂವುಗಳನ್ನು ಅರ್ಪಿಸಿ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಇದನ್ನೂ ಓದಿ: Karnataka Weather : ಇಂದಿನಿಂದ ಮಾರ್ಚ್‌ 14ರವರೆಗೆ ರಾಜ್ಯಾದ್ಯಂತ ಒಣಹವೆ ಸಾಧ್ಯತೆ

ಐತಿಹಾಸಿಕ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೂ ಸಹ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ಜತೆಗೆ ದೇವಸ್ಥಾನದ ಆವರಣದಲ್ಲಿರುವ ಶ್ರೀ ಕಾಲಭೈರವ, ಪರಶುರಾಮ, ತ್ರಿಶೂಲದ ಭೈರಪ್ಪ ಸೇರಿದಂತೆ ಪರಿವಾರ ದೇವರುಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಶಿವರಾತ್ರಿಯ ಅಂಗಾವಾಗಿ ಪ್ರತಿ ವರ್ಷದಂತೆ ಶ್ರೀ ರಂಗನಾಥ ದೇವಾಲಯದಲ್ಲಿ ಧಾರ್ಮಿಕ, ರಾಷ್ಟ್ರೀಯ ಹಾಗೂ ಸಾಹಿತ್ಯಿಕ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು.

ಇದನ್ನೂ ಓದಿ: Ind vs Eng : ಗಿಲ್, ರೋಹಿತ್​ ಶತಕ, ಭಾರತಕ್ಕೆ 255 ರನ್​ ಮುನ್ನಡೆ

ಮಹಾಶಿವರಾತ್ರಿ ಅಂಗವಾಗಿ ಶಿವದೇವಾಲಯಗಳಿಗೆ ಭಕ್ತರ ದಂಡೆ ಹರಿದು ಬಂದಿತ್ತು. ನದಿ ದಂಡೆಯ ಶ್ರೀಚಂದ್ರ ಮೌಳೇಶ್ವರ ದೇವಾಲಯದಲ್ಲಿ ನೂರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಬಸ್ ನಿಲ್ದಾಣ ಸಮೀಪದ ಶ್ರೀ ಕಲ್ಲೇಶ್ವರ ದೇವಸ್ಥಾನ, ಜಡೆ ಸಂಸ್ಥಾನ ಮಠ ಹಾಗೂ ಹಿರೇಮಠ, ಗೊಗ್ಗೆಹಳ್ಳಿ ಮಠ, ಬಂಕಸಾಣದ ಶ್ರೀ ಹೊಳೆಲಿಂಗೇಶ್ವರ, ಕರಡಿಗೇರಿ ಶ್ರೀ ರಾಮೇಶ್ವರ, ಉರುಗನಹಳ್ಳಿಯ ಶ್ರೀ ಕಾಳಿಂಗೇಶ್ವರ, ಕುಪ್ಪಗಡ್ಡೆ ರಾಮೇಶ್ವರ, ಆನವಟ್ಟಿ ಸಮೀಪದ ಕೋಟಿಪುರದ ಕದಂಬರ ಕಾಲದ ಶ್ರೀ ಕೈಠಭೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಶಿವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.

Continue Reading

ಮಹಾ ಶಿವರಾತ್ರಿ

Maha Shivaratri 2024: ಮಹೇಶ್ವರನ ಕುರಿತು ಎಷ್ಟೊಂದು ಕುತೂಹಲಕರ ಸಂಗತಿಗಳು!

Maha Shivaratri 2024 : ಯಾವುದೇ ಆಚರಣೆಗೂ ಸುತ್ತಮುತ್ತೆಲ್ಲ ಒಂದಿಷ್ಟು ಕಥೆಗಳು, ಪ್ರತೀತಿಗಳು ಹರಡಿರುತ್ತವೆ. ಸ್ಮಶಾನವಾಸಿ ಎನಿಸಿಕೊಂಡು, ಭೂತಗಣಗಳ ನಾಥ ಎನಿಸಿಕೊಳ್ಳುತ್ತಾ, ತಂಪಾದ ಹಿಮಾಲಯದಲ್ಲಿ ಉಮೆಯೊಂದಿಗೆ ಸಂಸಾರ ಮಾಡಿ, ಕೈಲಾಸನಾಥ ಎಂದೂ ಕರೆಸಿಕೊಳ್ಳುವ ಮಹಾದೇವನ ಬಗ್ಗೆಯೂ ಇಂಥದ್ದೇ ಕಥೆಗಳು ಹರಡಿಕೊಂಡಿದೆ

VISTARANEWS.COM


on

Maheshwar

ಅಲಕಾ ಕೆ

ಭಕ್ತರ ಕರೆಗೆ ಓಗೊಳ್ಳದ ದೇವರಿಲ್ಲ. ಆದರೆ ಕರೆಯುವ (Maha Shivaratri 2024) ಭಕ್ತರು ಮೌನಿಗಳಾದರೆ ಅದರಲ್ಲಿ ದೇವರ ಪಾತ್ರವಿಲ್ಲ. ಹೀಗೆ ಮಹಾದೇವನನ್ನು ಕರೆಯುವವರು, ಜಪಿಸುವವರು, ಭಜಿಸುವವರು ಅವನ ಹಲವು ರೂಪಗಳನ್ನು, ಸಾಧ್ಯತೆಗಳನ್ನು ಕಲ್ಪಿಸಿಕೊಂಡಿದ್ದಾರೆ. ಹೆಸರು ಯಾವುದೇ ಹೇಳಿದರೂ, ಉಸಿರಿನಲ್ಲಿ ದೇವನಿದ್ದರೆ ಆತನ ಕಿವಿಗಾ ಕರೆ ದೂರವಲ್ಲ. ಹೀಗೆ ಕರೆಯುವ ಮುನ್ನ, ಆ ಮಹಾದೇವನ ಬಗೆಗೊಂದಿಷ್ಟು ಭಾವಗಳು ಈ ರೀತಿಯಲ್ಲಿ ಹರಡಿಕೊಂಡಿವೆ.
ಯಾವುದೇ ಆಚರಣೆಗೂ ಸುತ್ತಮುತ್ತೆಲ್ಲ ಒಂದಿಷ್ಟು ಕಥೆಗಳು, ಪ್ರತೀತಿಗಳು ಹರಡಿರುತ್ತವೆ. ಸ್ಮಶಾನವಾಸಿ ಎನಿಸಿಕೊಂಡು, ಭೂತಗಣಗಳ ನಾಥ ಎನಿಸಿಕೊಳ್ಳುತ್ತಾ, ತಂಪಾದ ಹಿಮಾಲಯದಲ್ಲಿ ಉಮೆಯೊಂದಿಗೆ ಸಂಸಾರ ಮಾಡಿ, ಕೈಲಾಸನಾಥ ಎಂದೂ ಕರೆಸಿಕೊಳ್ಳುವ ಮಹಾದೇವನ ಬಗ್ಗೆಯೂ ಇಂಥದ್ದೇ ಕಥೆಗಳು ಹರಡಿಕೊಂಡಿದೆ. ದೇವರಾದರೂ ಸಂಸಾರಿಯಾಗಿ, ಸಂಸಾರಿಯಾದರೂ ವಿರಾಗಿಯಾಗಿ, ಭಕ್ತರಲ್ಲಿ ಅನುರಕ್ತನೂ ಆಗಿರುವ ಆತ ಲೋಕಕ್ಕೆ ನೀಡುವ ಸಂದೇಶವೇನು? ಶಿವಾರಾಧನೆಯ ಈ ಪರ್ವಕಾಲದಲ್ಲಿ ಮಹೇಶ್ವರನ ಬಗೆಗಿನ ಒಂದಿಷ್ಟು ಕುತೂಹಲಗಳನ್ನಿಲ್ಲಿ ತಣಿಸಿಕೊಳ್ಳೋಣ.

ಪರಿವರ್ತನೆ

ಈಗಿರುವ ಸಂವತ್ಸರ ಹೊರಳಿ ಮುಂಬರುವ ಹೊಸ ಸಂವತ್ಸರಕ್ಕೆ ದಾರಿ ಮಾಡುವ ಕೊಂಚ ಮೊದಲು, ಅಂದರೆ ಫಾಲ್ಗುಣ ಮಾಸದ ಅಮವಾಸ್ಯೆಯ ಮುನ್ನಾದಿನದ ಚತುರ್ದಶಿಯ ತಿಥಿಗೆ ಶಿವರಾತ್ರಿಯ ಆಚರಣೆ ನಡೆಯುತ್ತದೆ. ಹಾಗಾಗಿ ಈತ ಲಯಕ್ಕೆ ಮಾತ್ರವಲ್ಲ, ಪರಿವರ್ತನೆಗೂ ದೇವ. ಆದರೆ ಲೋಕದಲ್ಲಿ ಪರಿವರ್ತನೆ ಎನ್ನುವುದು ನಿತ್ಯನೂತನ ಎಂದಾದ್ದರಿಂದ, ನಿತ್ಯವೂ ಸ್ಮರಣೆಗೆ ಬರುವವ, ಭಕ್ತರನ್ನು ಉದ್ಧರಿಸುವವ ಈ ಲೋಕನಾಥ.

ಲಯವೆಂಬ ಬಿಡುಗಡೆ

ಕಾಲವನ್ನು ಚಕ್ರವೆಂದು ಕರೆಯಲಾಗುತ್ತದೆ. ಒಳಿತು-ಕೆಡುಕು, ಸುಖ-ಶೋಕಗಳ ಕಾಲಗಳು ಮೇಲೆ-ಕೆಳಗೆ ಉರುಳುತ್ತಲೇ ಇರುತ್ತವೆ. ಹಾಗಾಗಿ ಹೊಸತು ಸೃಷ್ಟಿಯಾಗಿ, ಇರುವುದು ನಿರ್ವಹಣೆಯಾಗಿ, ಬೇಡದ್ದು ಅಳಿಯುತ್ತಲೇ ಇರಬೇಕು. ಈ ಪ್ರಕ್ರಿಯೆಯನ್ನು ಸಾಗರದ ಉಬ್ಬರ-ಇಳಿತಕ್ಕೆ ಹೋಲಿಸುವವರೂ ಇದ್ದಾರೆ. ಕಾರಣ, ಈ ಎಲ್ಲಾ ಪ್ರಕ್ರಿಯೆಗೆ ತನ್ನದೇ ಆದ ವಿಶಿಷ್ಟವಾದ ಲಯವೊಂದಿದೆ- ನೃತ್ಯವೊಂದರ ಲಯದಂತೆ. ನಟರಾಜನ ಹೆಜ್ಜೆಯ ರಿಂಗಣದಂತೆ, ಕಾಲಚಕ್ರದ ಗತಿಯೂ ಲಯಬದ್ಧವಾದುದು ಎಂಬ ಕಲ್ಪನೆಯಿದೆ. ಇದೇ ಹಿನ್ನೆಲೆಯಲ್ಲಿ ನೋಡಿದಾಗ, ಪ್ರಳಯ ಶಿವನ ತಾಂಡವಕ್ಕೆ ಬಹಳಷ್ಟು ಹೊಳಹುಗಳು ದೊರೆಯುತ್ತದೆ. ʻಲಯʼ ಎನ್ನುವ ಕ್ರಿಯೆಗೂ ವಿಶಿಷ್ಟವಾದ ಲಯವೊಂದಿರುವುದನ್ನು ಈ ತಾಂಡವದ ಮೂಲಕ ಅರಿತುಕೊಳ್ಳಬಹುದು ನಾವು.
ಆದಿಗುರು, ಆದಿಯೋಗಿ ಎನ್ನುವ ಹೆಸರುಗಳು ಮಹಾದೇವನಿಗಿವೆ. ತಪಸ್ಸು, ಧ್ಯಾನಗಳು ಆತನ ಯಾವತ್ತಿನ ಚರ್ಯೆಗಳು. ಭವಬಂಧನಗಳನ್ನು ಕಳೆಯುವುದಕ್ಕೆ ಇವೆಲ್ಲ ಮಾರ್ಗಗಳಾಗಿ ಭವಿಗಳಾದ ನಮಗೆ ಗೋಚರಿಸಿದರೆ, ನಮ್ಮಂತೆ ಹುಟ್ಟಿಲ್ಲದ ಆತ ಅಭವ. ಯೋಗ ಭಂಗಿಗಳಲ್ಲಿ, ಆದಿಯೋಗಿಯನ್ನು ಸಾಂಕೇತಿಸುವ ನಟರಾಜಾಸನಕ್ಕೆ ಅದರದ್ದೇ ಆದ ಮಹತ್ವವವಿದೆ. ಇದನ್ನು ಕ್ರಮಬದ್ಧವಾಗಿ ಮಾಡುವುದಕ್ಕೆ ದೇಹ-ಮನಸ್ಸುಗಳಲ್ಲಿ ಅತಿ ಹೆಚ್ಚಿನ ಸಮತೋಲನವನ್ನು ಈ ಆಸನ ಬೇಡುತ್ತದೆ. ಮಾತ್ರವಲ್ಲ, ಯೋಗಾಭ್ಯಾಸಿಯಲ್ಲಿನ ಋಣಾತ್ಮಕ ಶಕ್ತಿಗಳೆಲ್ಲ ಲಯವಾಗುವಂತೆಯೂ ಮಾಡಬಲ್ಲ ಭಂಗಿಯಿದು. ಹಾಗಾಗಿ ಮಹಾಶಿವರಾತ್ರಿಯಲ್ಲಿ ಪರಶಿವನ ತಾಂಡವವನ್ನೂ ನೆನಪಿಸಿಕೊಳ್ಳಲಾಗುತ್ತದೆ. ಮಹಾದೇವನ ಸ್ಮರಣೆಯ ಮೂಲಕ ಹಳೆಯದು, ಬೇಡದ್ದೆಲ್ಲ ಲಯವಾಗಿ ಹೊಸ ಪರಿವರ್ತನೆಗೆ ನಾಂದಿಯಾಗಲಿ ಎನ್ನುವ ಮಹೋನ್ನತ ಆಶಯವನ್ನು ಅರಿಯಬೇಕಿದೆ

ನೀಲಕಂಠ

ದೇವಾಸುರರು ಸಮುದ್ರ ಮಥನವನ್ನು ಮಾಡಿದ ಕಥೆಯನ್ನು ನಾವೆಲ್ಲರೂ ಕೇಳಿದವರೇ. ಅಮೃತವನ್ನು ಬಯಸಿ ಎಲ್ಲರೂ ನಿರೀಕ್ಷೆಯಲ್ಲಿದ್ದಾಗ ಮೊದಲಿಗೆ ಹಾಲಾಹಲ ಬಂತು. ಅದಕ್ಕೊಂದು ಸರಿಯಾದ ಅಂತ್ಯ ಕಾಣಿಸದಿದ್ದರೆ ಲೋಕವನ್ನೆಲ್ಲ ಆ ವಿಷ ನಾಶ ಮಾಡುವ ಭೀತಿ ಎದುರಾಯಿತು. ದೇವತೆಗಳು ಜಗದೀಶ್ವರನ ಮೊರೆ ಹೊಕ್ಕರು. ಲೋಕವನ್ನು ಕಾಪಾಡುವ ಉದ್ದೇಶದಿಂದ ಆ ಘೋರ ವಿಷವನ್ನು ಈಶ ತನ್ನ ಕಂಠದಲ್ಲಿ ಇರಿಸಿಕೊಂಡ, ಈ ಮೂಲಕ ನೀಲಕಂಠನಾದ. ಇದೇ ಹಿನ್ನೆಲೆಯಲ್ಲಿ, ಲೋಕದ ಕಷ್ಟಗಳನ್ನೆಲ್ಲ ಕಳೆಯಬಲ್ಲ ಆತನ ಮಹಿಮೆಯನ್ನು ಶಿವರಾತ್ರಿಯಲ್ಲಿ ಕೊಂಡಾಡಲಾಗುತ್ತದೆ.

ಶಿವ-ಶಕ್ತಿಯ ಸಂಯೋಗ

ಒಂದಾನೊಂದು ಕಾಲದಲ್ಲಿ ಲೋಕಕಂಟಕನಾಗಿದ್ದ ತಾರಕ ಎಂಬ ಅಸುರನ ಸಂಹಾರಕ್ಕಾಗಿ ಲೋಕವೇ ನಿರೀಕ್ಷಿಸುತ್ತಿತ್ತು. ಆದರೆ ಆತನ ಮೃತ್ಯು ಶಿವ-ಪಾರ್ವತಿಯ ಸಂತಾನದಿಂದಲೇ ಎಂಬುದು ವಿಧಿ ಲಿಖಿತವಾಗಿತ್ತು. ಆದರೆ ದಾಕ್ಷಾಯಿಣಿಯನ್ನು ಕಳೆದುಕೊಂಡ ಶೋಕದಲ್ಲಿದ್ದ ಶಿವ, ಲೋಕದ ಪರಿವೆಯಿಲ್ಲದಂತೆ ಘೋರ ತಪಸ್ಸಿನಲ್ಲಿ ತೊಡಗಿಕೊಂಡಿದ್ದ. ಹಾಗಿದ್ದ ಮೇಲೆ, ಪರ್ವತ ರಾಜನ ಮಗಳಾಗಿ ಶಿವನಿಗಾಗಿಯೇ ಹುಟ್ಟಿದ್ದ ಪಾರ್ವತಿಯನ್ನು ಆತ ವರಿಸುವುದು ಹೇಗೆ? ಶಿವನ ಮನಸ್ಸನ್ನು ಪರಿವರ್ತಿಸುವುದಕ್ಕೆ ಮನ್ಮಥ ಬಾಣಗಳನ್ನು ಹೂಡಿದ. ತನ್ನ ತಪೋಭಂಗವಾಗಿದ್ದಕ್ಕೆ ಕುಪಿತನಾದ ಶಿವ, ಮೂರನೇ ಕಣ್ಣಿನಿಂದ ಕಾಮನನ್ನು ದಹಿಸಿಬಿಟ್ಟ. ಇದ್ಯಾವುದಕ್ಕೂ ವಿಚಲಿತಳಾಗದ ಪಾರ್ವತಿ ತನ್ನ ಭಕ್ತಿಯಿಂದಲೇ ಶಿವನನ್ನು ಒಲಿಸಿಕೊಂಡಳು. ಇವರಿಬ್ಬರ ವಿವಾಹದಿಂದ ಜನಿಸಿದ ಸ್ಕಂದ ಅಥವಾ ಕಾರ್ತಿಕೇಯನಿಂದಲೇ ತಾರಕಾಸುವ ಹತನಾದ. ಆವರೆಗೆ ಖಂಡ ಶಕ್ತಿಯಾಗಿದ್ದ ಶಿವ-ಪಾರ್ವತಿಯರು, ಒಂದಾಗಿ ಅಖಂಡ ಶಕ್ತಿಯಾದ ಹಿನ್ನೆಲೆಯೂ ಶಿವರಾತ್ರಿಗಿದೆ.

Continue Reading
Advertisement
Latest4 hours ago

ರಾಜ್ಯಸಭೆ ಚುನಾವಣೆ: ಮಲ್ಲಿಕಾರ್ಜುನ ಖರ್ಗೆ ಸೇರಿ ನಾಲ್ವರು ಅಭ್ಯರ್ಥಿಗಳು ಅವಿರೋಧ ಆಯ್ಕೆ

ನರೇಂದ್ರ ಮೋದಿ
Latest8 hours ago

ಪ್ರಧಾನಿ ನರೇಂದ್ರ ಮೋದಿಗೆ ಕಿಚ್ಚನ ಸೆಲ್ಯೂಟ್‌ : 12 ವರ್ಷಗಳ ನರೇಂದ್ರ ಮೋದಿ ಐತಿಹಾಸಿಕ ಆಡಳಿತಕ್ಕೆ ಶ್ಲಾಘನೆ

ರಾಜ್ಯಸಭೆ ಟಿಕೆಟ್‌
ಪ್ರಮುಖ ಸುದ್ದಿ1 day ago

ರಾಜ್ಯಸಭೆ ಟಿಕೆಟ್‌ ವಿಚಾರಕ್ಕೆ ಹೆಚ್‌ಡಿಡಿ ಸ್ಪಷ್ಟನೆ : ಎನ್‌ಡಿಎ ಜತೆ ಬಾಂಧವ್ಯ ಮುಂದುವರಿಯಲಿದೆ

ನರೇಂದ್ರ ಮೋದಿ
Latest1 day ago

ನೆಹರೂ ದಾಖಲೆ ಮುರಿದ ನರೇಂದ್ರ ಮೋದಿ: ಭಾರತದ ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿ ಹೊಸ ಇತಿಹಾಸ

ಆರೆಂಜ್ ಅಲರ್ಟ್‌
Latest1 day ago

ಮುಂಗಾರು ಅಬ್ಬರ ಹೆಚ್ಚಳ: ಇಂದು 11 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌, 2 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಮೀನಾಕ್ಷಿ ನಟರಾಜನ್
Latest1 day ago

ರಾಜ್ಯಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ಗೆ ಬಿಗ್‌ ಶಾಕ್‌ : ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ – ʻಕೈ‌‌‌‌ʼ ಶಾಸಕರ ರೆಸಾರ್ಟ್‌ ರಾಜಕೀಯ ಕ್ಯಾನ್ಸಲ್

Latest2 days ago

‘ದೇವೇಗೌಡರ ಮೇಲಿನ ಕಾಂಗ್ರೆಸ್ ಅನುಕಂಪ ಕೇವಲ ನಾಟಕ!’: ಮೈತ್ರಿ ಬಿರುಕಿನ ಯತ್ನಕ್ಕೆ HDK ತಿರುಗೇಟು

Latest2 days ago

H-1B ವೀಸಾ ಶುಲ್ಕಕ್ಕೆ ಕೋರ್ಟ್ ಬ್ರೇಕ್: ಟ್ರಂಪ್ ಸರ್ಕಾರದ ಆದೇಶ ಅಸಿಂಧು, ಭಾರತೀಯರು ನಿರಾಳ

ಪಿಂಕ್ ಲೈನ್ ಮೆಟ್ರೋ
Latest2 days ago

ಆಗಸ್ಟ್ 15ಕ್ಕೆ ಪಿಂಕ್ ಲೈನ್ ಮೆಟ್ರೋ ಸಂಚಾರ ಆರಂಭ? ದಕ್ಷಿಣ ಬೆಂಗಳೂರಿಗೆ ಸಂಚಾರ ದಟ್ಟಣೆಯಿಂದ ಮುಕ್ತಿ ನಿರೀಕ್ಷೆ

ಮುಂದಿನ ಐದು ದಿನ ಭಾರೀ ಮಳೆ
Latest2 days ago

ಮುಂದಿನ ಐದು ದಿನ ಭಾರೀ ಮಳೆಯ ಮುನ್ಸೂಚನೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

galipata neetu
ಕಿರುತೆರೆ3 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ3 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌