Site icon Vistara News

Karnataka Election 2023: ಅಭಿವೃದ್ಧಿ ಬೇಕೆಂದರೆ ಯೋಗ್ಯ ಪ್ರತಿನಿಧಿಯ ಆಯ್ಕೆ ನಿಮ್ಮದಾಗಲಿ: ಹುಲ್ಲುಮನೆ ತಿಮ್ಮಣ್ಣ

#image_title

ಹೊನ್ನಾಳಿ: “ಅಭಿವೃದ್ಧಿ ಪರ್ವ ತಾಲೂಕಿನಲ್ಲಿ ಸಾರಾಗವಾಗಿ ನಡೆಯಬೇಕೆಂದರೆ ಯೋಗ್ಯ ಪ್ರತಿನಿಧಿಯನ್ನು ನೀವು ಆಯ್ಕೆ ಮಾಡಬೇಕು” ಎಂದು ಹೊನ್ನಾಳಿಯ ಚುನಾವಣಾ ಅಧಿಕಾರಿ ಹುಲ್ಲುಮನೆ ತಿಮ್ಮಣ್ಣ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಮತದಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬುಧವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಮೇಣದಬತ್ತಿ ಜಾಥಾಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು. “ಹಣ ಹಾಗೂ ಆಮಿಷಕ್ಕೆ ಒಳಗಾಗಬೇಡಿ. ಯೋಗ್ಯ ಜನಪ್ರತಿನಿಧಿಯನ್ನು ನಾವು ನೀವು ಆಯ್ಕೆ ಮಾಡದೆ ಇದ್ದರೆ ಮುಂದೊಂದು ದಿನ ಎಲ್ಲರೂ ಪಶ್ಚಾತಾಪ ಪಡಬೇಕಾಗುತ್ತದೆ. ಇದನ್ನು ಮನಗೊಂಡು ಎಲ್ಲರೂ ಯಾವುದೇ ಆಸೆಗಳಿಗೆ ಮಾರು ಹೋಗದೆ ಕಡ್ಡಾಯವಾಗಿ ಮತದಾನ ಮಾಡಿ” ಎಂದು ತಿಳಿಸಿದರು.

“ಪ್ರಾಮಾಣಿಕ ಅಭ್ಯರ್ಥಿಗೆ ಯಾವುದೇ ಉಡುಗೊರೆಗಳನ್ನು ತೆಗೆದುಕೊಳ್ಳದೆ ಮತ ಹಾಕಿದರೆ, ನಾಳೆ ಅವರನ್ನು ನೀವು ಪ್ರಶ್ನಿಸಬಹುದು. ತಾಲೂಕಿನಲ್ಲಿ ಆಗಬೇಕಾದ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿಸಿ ನಿಮ್ಮ ತಾಲೂಕನ್ನು ಮಾದರಿ ತಾಲೂಕನ್ನಾಗಿ ಮಾಡಬಹುದು. ಇದು ಪ್ರತಿಯೊಬ್ಬ ಮತದಾರರ ಜವಾಬ್ದಾರಿಯಾಗಿದೆ. ವಿದ್ಯಾವಂತರಿಂದ ಶೇಕಡವಾರು ಮತದಾನ ಕಡಿಮೆಯಾಗುತ್ತಿದೆ ಎನ್ನುವ ವರದಿ ನಾವು ಪತ್ರಿಕೆಯಲ್ಲಿ ನೋಡುತ್ತಿದ್ದೇವೆ. ವಿದ್ಯಾವಂತರು ಮತದಾನಕ್ಕೆಂದು ರಜೆ ಸಿಕ್ಕರೆ ಬೇರೆ ಕಡೆ ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಆದರೆ ಇದು ಬದಲಾಗಬೇಕು. ವಿಶೇಷವಾಗಿ ಯುವಕರು ಹಾಗೂ ವಿದ್ಯಾವಂತರು ಮತದಾನ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ: Honnali News: ಹೊನ್ನಾಳಿ ಗೆಲುವಿಗೆ ಶ್ರಮ ವಹಿಸಿ: ಪ್ರಣತಿ ಸಿಂದ್ಯಾ

ಈ ಬಾರಿ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಹೊನ್ನಾಳಿ ತಾಲೂಕಿನಲ್ಲಿ ಎಷ್ಟು ಜನ 80 ವರ್ಷ ಮೇಲ್ಪಟ್ಟವರು ಇದ್ದಾರೆ ಎನ್ನುವ ಮಾಹಿತಿ ಇದೆ. ನಿಮ್ಮ ನಿಮ್ಮ ಮನೆಯಲ್ಲಿ 80 ವರ್ಷ ಮೇಲ್ಪಟ್ಟವರು ಇದ್ದರೆ ಆ ಮಾಹಿತಿಯನ್ನು ಚುನಾವಣಾ ಅಧಿಕಾರಿ ಕಚೇರಿಗೆ ಕೊಡಿ” ಎಂದು ಅವರು ಹೇಳಿದರು.

Exit mobile version