ದಾವಣಗೆರೆ: ರಾಜ್ಯದಲ್ಲಿ ಎಲ್ಲೆಡೆ ಭೀಕರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ರಸ್ತೆಗಳು ಜಲಾವೃತವಾಗಿ, ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಈ ನಡುವೆ ನಗರದ ಮಂಡಕ್ಕಿ ಭಟ್ಟಿ ಲೇಔಟ್ನಲ್ಲಿರುವ ರಸ್ತೆಯಲ್ಲಿ ಅರ್ಧ ಭಾಗ ಮಳೆಯಾಗಿ(Rain News), ಇನ್ನರ್ಧ ಭಾಗದಲ್ಲಿ ಮಳೆಯಾಗದ ವಿಸ್ಮಯ ಕಂಡು ನಗರದ ಜನರು ಅಚ್ಚರಿಗೊಂಡಿದ್ದಾರೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಎಲ್ಲಿ ನೋಡಿದರೂ ನೀರು ಆವರಿಸಿಕೊಂಡಿದೆ. ಆದರೆ ನಗರದದಲ್ಲಿ ಕಂಡುಬಂದ ಪ್ರಕೃತಿ ವಿಸ್ಮಯ ನೋಡಿ ಮಕ್ಕಳು ಖುಷಿಯಿಂದ ಮಳೆ ಬರುತ್ತಿದ್ದ ಸ್ಥಳದಿಂದ ಮಳೆಯಾಗದ ಸ್ಥಳಕ್ಕೆ ಓಡುತ್ತ, ಕುಣಿದಾಡುತ್ತಿದ್ದದ್ದು ಕಂಡು ಬಂತು.
ಇದನ್ನೂ ಓದಿ | Bengaluru Rain | ಮಳೆ ನಿಂತರೂ ನಿಲ್ಲದ ರಗಳೆ; ಲಗೇಜ್ ಹಿಡಿದು ವಾಪಸ್ ಆದವರಿಗೆ ನಿರಾಸೆ