Site icon Vistara News

Road Accident: ಬೊಲೆರೊ ಟಯರ್‌ ಸ್ಫೋಟ, ವಾಹನ ಪಲ್ಟಿಯಾಗಿ ಮೂವರ ಸಾವು

Collision between KSRTC bus bike Two riders died

ದಾವಣಗೆರೆ: ಬೊಲೆರೋ ಟೆಂಪೋ ವಾಹನದ ಟಯರ್ ಸ್ಫೋಟಗೊಂಡ ಪರಿಣಾಮ ವಾಹನ ಪಲ್ಟಿಯಾಗಿ (Road Accident) ಮೂವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಆರು ಜನರಿಗೆ ಗಾಯಗಳಾಗಿವೆ.

ದಾವಣಗೆರೆ ನಗರದ ಹೊರವಲಯದ ಪಂಜಾಬಿ ಡಾಬಾ ಬಳಿ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಮೃತರು ಹಾಗೂ ‌ಗಾಯಾಳುಗಳು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯಂ‌ ತಾಲೂಕಿನ ಸಿಂಗರಾಜನಹಳ್ಳಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಇವರು ಹಾವೇರಿ ಜಿಲ್ಲೆಯ ಬ್ಯಾಡಗಿಯಿಂದ ಮೆಣಸಿಕಾಯಿ ತೆಗೆದುಕೊಂಡು ತಮ್ಮೂರಿಗೆ ವಾಪಸ್ಸಾಗುವಾಗ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಒಬ್ಬನ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಬಾಲಕ ಪಣಂಬೂರು ಬೀಚ್‌ನಲ್ಲಿ ನಾಪತ್ತೆ

ಮಂಗಳೂರು: ನಗರದ ಪಣಂಬೂರು ಬೀಚ್‌ನಲ್ಲಿ ಸ್ನಾನಕ್ಕೆ ತೆರಳಿದ್ದ ಬಾಲಕ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಭಾನುವಾರ ನಡೆದಿದೆ. ಬಾಗಲಕೋಟೆ ಮೂಲದ, ಪ್ರಸ್ತುತ ಮೀನಕಳಿಯಲ್ಲಿ (Mangalore News) ವಾಸವಾಗಿರುವ ತುಕರಾಮ (13) ನಾಪತ್ತೆಯಾದ ಬಾಲಕ.

ಸ್ಥಳೀಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ತುಕರಾಮ, ಸಂಜೆ ಗೆಳೆಯರೊಡನೆ ಈಜಾಡಲು ತೆರಳಿದ್ದ ಎನ್ನಲಾಗಿದೆ. ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಅಲೆಗಳ ರಭಸಕ್ಕೆ ಸಿಲುಕಿ ಬಾಲಕ ನಾಪತ್ತೆಯಾಗಿದ್ದಾನೆ. ಜೀವರಕ್ಷಕ ದಳ, ಸ್ಥಳೀಯರಿಂದ ಬಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಪಣಂಬೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚಾರಣಕ್ಕೆ ಹೋದ ಇಬ್ಬರು ಯುವಕರು ನಾಪತ್ತೆ

ಮಂಗಳೂರು: ಚಾರಣಕ್ಕೆ ಹೋದ ಇಬ್ಬರು ಯುವಕರು ನಾಪತ್ತೆಯಾಗಿರುವ ಘಟನೆ ಚಾರ್ಮಾಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಬೆಂಗಳೂರು ಮೂಲದ 10 ಯುವಕರ ಚಾರಣಕ್ಕೆ ತೆರಳಿತ್ತು. ಸಂಜೆ ದುರ್ಗದ ಹಳ್ಳಿಯಿಂದ ಚಾರಣಕ್ಕೆ ತೆರಳಿದ್ದಋು. ಈ ವೇಳೆ ಇಬ್ಬರು ನಾಪತ್ತೆಯಾಗಿದ್ದು, ಅರಣ್ಯ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ.

ಇದನ್ನೂ ಓದಿ: Major Accident: ಭೀಕರ ಅಪಘಾತ; ಟ್ರ್ಯಾಕ್ಟರ್-ಟ್ರಾಲಿ ಕೊಳಕ್ಕೆ ಬಿದ್ದು 15 ಮಂದಿ ಸಾವು

Exit mobile version