Site icon Vistara News

Road Accident : ಭೀಕರ ಅಪಘಾತದಲ್ಲಿ ಬಸ್‌ ಛಿದ್ರ; ಡಾ.ರಾಜಕುಮಾರ್‌ ಫೋಟೊ ಮಾತ್ರ ಭದ್ರ!

Bus Accident Dr rajkumar photo

ದಾವಣಗೆರೆ: ಸದಾಶಿವ ಆಯೋಗ ಜಾರಿಗೆ ಆಗ್ರಹಿಸಿ ಒಂದಷ್ಟು ಹೋರಾಟಗಾರರು ಬೆಳಗಾವಿ ಅಧಿವೇಶನದ ಸಮಯದಲ್ಲಿ ಪ್ರತಿಭಟಿಸಲು ಯೋಜಿಸಿದ್ದರು. ಅದರಂತೆ ತಡರಾತ್ರಿ ಖಾಸಗಿ ಬಸ್‌ ಮಾಡಿಕೊಂಡು ತೆರಳುತ್ತಿದ್ದರು. ಆದರೆ ದುರಾದೃಷ್ಟ ಎಂಬಂತೆ ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವಾಗ ಭೀಕರ ಅಪಘಾತ (Road Accident ) ಸಂಭವಿಸಿದೆ.

Road Accident in davanagere

ಲಾರಿಗೆ ಬಸ್‌ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬಸ್‌ ಮುಂಭಾಗ ಸಂಪೂರ್ಣ ನಜ್ಜು-ಗುಜ್ಜಾಗಿತ್ತು. ಈ ಅಪಘಾತದಲ್ಲಿ ಇಬ್ಬರು ಗಂಭೀರವಾಗಿದ್ದರೆ, 17 ಮಂದಿ ಗಾಯಗೊಂಡಿದ್ದರು. ಗಾಯಗೊಂಡಿದ್ದವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

Road Accident in davanagere

ಮಾದಿಗ ದಂಡೋರ ಜಾಗೃತಿ ಸಮಿತಿಯ ಬೆಂಗಳೂರು, ಚಿಕ್ಕಬಳ್ಳಾಪುರ, ಚಿಂತಾಮಣಿ ಪದಾಧಿಕಾರಿಗಳು ಸದಾಶಿವ ಆಯೋಗ ಜಾರಿಗೆ ಆಗ್ರಹಿಸಿ ಪ್ರತಿಭಟನೆ ತೆರಳುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ದಾವಣಗೆರೆ ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

Road Accident in davanagere

ಭದ್ರವಾಗಿತ್ತು ರಾಜ್‌ಕುಮಾರ್‌ ಫೋಟೊ

ಇನ್ನು ಈ ಭೀಕರ ಅಪಘಾತದಲ್ಲಿ ಬಸ್‌ ಜಖಂಗೊಂಡಿತ್ತು. ಲಾರಿಯು ಮುಖಾಮುಖಿಯಾಗಿ ಬಸ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಮುಂಭಾಗವೇ ಛಿದ್ರಛಿದ್ರಗೊಂಡಿತ್ತು. ಡ್ರೈವರ್‌ ಸೀಟ್‌ ಪೂರ್ತಿ ನಜ್ಜುಗುಜ್ಜಾಗಿತ್ತು. ಆದರೆ ಡ್ರೈವರ್‌ ಸೀಟ್‌ನಲ್ಲಿ ಅಳವಡಿಸಿದ್ದ ಡಾ. ರಾಜ್‌ಕುಮಾರ್‌ ಫೋಟೊಗೆ ಮಾತ್ರ ಯಾವುದೇ ಡ್ಯಾಮೇಜ್‌ ಆಗಿರಲಿಲ್ಲ. ಬಸ್‌ ಛಿದ್ರಗೊಂಡಿದ್ದರೆ, ಡಾ.ರಾಜ್‌ಕುಮಾರ್‌ ಫೋಟೋ ಭದ್ರವಾಗಿತ್ತು.

ಕೆಎಸ್‌ಆರ್‌ಟಿಸಿ ಬಸ್‌ ಹಿಂದಿನ ಚಕ್ರಕ್ಕೆ ಸಿಲುಕಿ ಮಹಿಳೆ ಸಾವು

ಬೆಂಗಳೂರಿನ ಮಹಿಳೆಯೊಬ್ಬರು ಮಂಡ್ಯ ಬಸ್‌ ನಿಲ್ದಾಣದಲ್ಲಿ (Mandya News) ಕೆಎಸ್‌ಆರ್‌ ಟಿಸಿ ಬಸ್‌ನಡಿಗೆ (KSRTC bus) ಸಿಲುಕಿ (Road accident) ಪ್ರಾಣ ಕಳೆದುಕೊಂಡಿದ್ದಾರೆ. ಪೂಜಾ ಭಾರತಿ(40) ಎಂಬವರೇ ಪ್ರಾಣ ಕಳೆದುಕೊಂಡ ಮಹಿಳೆ (Woman dead in accident).

ಬೆಂಗಳೂರಿನ ಅಡವಾಡಿಯ ಪೂಜಾ ಭಾರತಿ ಅವರು ಮಂಡ್ಯ ಬಸ್‌ ನಿಲ್ದಾಣಕ್ಕೆ ಪ್ರವೇಶ ಮಾಡುವಾಗ ಒಮ್ಮಿಂದೊಮ್ಮೆಗೆ ಬಸ್‌ ನುಗ್ಗಿ ಬಂದಿದೆ. ಬಸ್‌ ಏಕಾಏಕಿ ತಿರುಗಿದಾಗ ಅದರ ಹಿಂಬದಿಯ ಚಕ್ರಕ್ಕೆ ಸಿಲುಕಿ ಪೂಜಾ ಪ್ರಾಣ ಕಳೆದುಕೊಂಡಿದ್ದಾರೆ. ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊದಲು ಈ ಘಟನೆಯಲ್ಲಿ ಮೃತಪಟ್ಟವರು ಒಬ್ಬ ವಿದ್ಯಾರ್ಥಿನಿ ಎಂದು ಹೇಳಲಾಗಿತ್ತು.

ಪೂಜಾ ಭಾರತಿ ಅವರು ಮಂಡ್ಯದ ಸಂಬಂಧಿಕರ ಮನೆಗೆ ಬಂದವರಾಗಿದ್ದು, ಅಲ್ಲಿಂದ ಮರಳಿ ಬೆಂಗಳೂರಿಗೆ ತೆರಳಲು ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಆದರೆ, ಬಸ್‌ ಅವರ ಜೀವವನ್ನೇ ತೆಗೆದಿದೆ.

ಬಸ್‌ ನಿಲ್ದಾಣಗಳಲ್ಲಿ ಬಸ್‌ಗಳ ಚಾಲಕರು ಅತ್ಯಂತ ನಿರ್ಲಕ್ಷ್ಯದಿಂದ ವರ್ತಿಸುತ್ತಿರುವ ಘಟನೆಗಳು ಅಲ್ಲಲ್ಲಿ ಕಂಡುಬರುತ್ತಿವೆ. ಏಕಾಏಕಿ ನುಗ್ಗಿಸುವುದು, ಬೇಕಾಬಿಟ್ಟಿ ಟರ್ನ್‌ ಮಾಡುವುದು ಹೀಗೆ ಜನರ ಜೀವವನ್ನು ಅಪಾಯಕ್ಕೆ ಸಿಲುಕಿಸುವ ರೀತಿಯಲ್ಲಿ ಚಲಾಯಿಸುತ್ತಾರೆ ಎಂಬ ಆರೋಪವಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version