ಬಾಗಲಕೋಟೆ: ಸೋಮವಾರ ರಾತ್ರಿಯವರೆಗೂ ಬ್ಯುಸಿಯಾಗಿ ಓಡಾಡುತ್ತಿದ್ದ ಸರ್ಕಾರಿ ಕಾಲೇಜ್ ಪ್ರಿನ್ಸಿಪಾಲ್ (College principal suicide) ಒಬ್ಬರು ಬೆಳಗ್ಗೆ ಹೆಣವಾಗಿ ಪತ್ತೆಯಾಗಿದ್ದಾರೆ, ಅದೂ ಕಾಲೇಜಿನಲ್ಲೇ.
ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿರುವ ಸರ್ಕಾರಿ ಕಾಲೇಜಿನಲ್ಲಿ (Hunagunda Government College) ಪ್ರಿನ್ಸಿಪಾಲ್ ಅಗಿರುವ ನಾಗರಾಜ್ ಮುದ್ಗಲ್ (50) ಎಂಬವರೇ ಕಾಲೇಜಿನ ಸ್ಟೇರ್‌ಕೇಸ್‌ನ ಗ್ರಿಲ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು.
ಈ ಕಾಲೇಜಿನಲ್ಲಿ ಮಂಗಳವಾರ ಜನಪದ ಸಂಸ್ಕೃತಿ ಕಾರ್ಯಕ್ರಮ ಆಯೋಜನೆಯಾಗಿದೆ. ತಮ್ಮ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಬೇಕು ಎಂಬ ಕಾರಣಕ್ಕಾಗಿ ಅವರು ಸೋಮವಾರ ದಿನವಿಡೀ ಓಡಾಡಿದ್ದರು. ರಾತ್ರಿಯವರೆಗೂ ವ್ಯವಸ್ಥೆಯ ಮೇಲ್ವಿಚಾರಣೆ ನೋಡಿಕೊಂಡಿದ್ದ ಅವರು ಬಳಿಕ ಮನೆಗೆ ಹೋಗಿದ್ದರು.
ರಾತ್ರಿ ಒಂದು ಗಂಟೆ ಸುಮಾರಿಗೆ ಮತ್ತೆ ಕಾಲೇಜಿನಲ್ಲಿ ಕೆಲಸವಿದೆ ಎಂದು ಹೇಳಿ ಬೈಕ್‌ನಲ್ಲಿ ಕಾಲೇಜಿಗೆ ಬಂದಿದ್ದರು. ಬೆಳಗ್ಗೆ ಆರು ಗಂಟೆಗೆ ಮನೆಗೆ ಬಂದಿದ್ದ ಅವರು ಶೌಚ ಮುಗಿಸಿ ಮತ್ತೆ ಕಾಲೇಜಿಗೆ ಬಂದಿದ್ದರು. ಬೆಳಗ್ಗೆ ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಹೊತ್ತಿಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕಾಲೇಜಿಗೆ ಬಂದಿರುವ ನಾಗರಾಜ್ ಪತ್ನಿ ಮತ್ತು ಪುತ್ರನ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಹುನಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಲೇಜಿನಲ್ಲಿ ಕೆಲಸದ ಒತ್ತಡ ಇದೆ ಎಂದು ಕೆಲವೊಮ್ಮೆ ಹೇಳಿದ್ದು ಬಿಟ್ಟರೆ ಬೇರೆ ಯಾವ ವಿಷಯವನ್ನು ಹೇಳುತ್ತಿರಲಿಲ್ಲ. ಏನೇ ಸಮಸ್ಯೆ ಇದ್ದರೂ ಬಗೆಹರಿಸಬಹುದಿತ್ತು. ಪ್ರಾಣ ಕಳೆದುಕೊಳ್ಳುವ ಅವಶ್ಯಕತೆ ಇರಲಿಲ್ಲ ಎಂದು ಪತ್ನಿ ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ : Self Harming: ತಂದೆಯ ಸಾವಿನಿಂದ ನೊಂದು ಮಗಳು ನೇಣು ಬಿಗಿದುಕೊಂಡು ಸಾವಿಗೆ ಶರಣು
ಭ್ರಷ್ಟಾಚಾರ ನಿಗ್ರಹ ತಂಡದ ಕಚೇರಿಯಲ್ಲಿ ಯುವಕ ನೇಣಿಗೆ ಶರಣು!
ಚಿಕ್ಕಬಳ್ಳಾಪುರ : ಇಲ್ಲಿನ ಬಾಗೇಪಲ್ಲಿ ಪಟ್ಟಣದಲ್ಲಿರುವ ಮಾನವ ಹಕ್ಕುಗಳ ರಕ್ಷಣಾ ಮತ್ತು ಭ್ರಷ್ಟಾಚಾರ ನಿಗ್ರಹ ತಂಡ ಕಚೇರಿಯಲ್ಲಿ ಶ್ರೀನಿವಾಸ್ ಎಂಬ ಯುವಕ ನೇಣು ಬಿಗಿದುಕೊಂಡು (Self Harming) ಇತ್ತೀಚೆಗೆ ಮೃತಪಟ್ಟಿದ್ದಾನೆ.
ಶ್ರೀನಿವಾಸ್ ಬಾಗೇಪಲ್ಲಿ ಪಟ್ಟಣದ ವಾರ್ಡ್ ಒಂದರ ನಿವಾಸಿ ಆಗಿದ್ದಾರೆ. ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಖಾಸಗಿ ಕಛೇರಿಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಅನುಮಾನ ಸೃಷ್ಟಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದಾರೆ. ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಗಾಗಿ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣವನ್ನು ದಾಖಲು ಮಾಡಲಾಗಿದೆ.