Site icon Vistara News

ʼಬೊಮ್ಮಾಯಿ ಸಿಎಂ ಆಗಿದ್ದಾರೆ ಎಂದರೆ ನಾನು ಆಗೋದ್ರಲ್ಲಿ ತಪ್ಪೇನಿದೆ?’; ಎಸ್.ಎಸ್ ಮಲ್ಲಿಕಾರ್ಜುನ್ ಹೇಳಿಕೆ

SS MALLIKARJUN

ದಾವಣಗೆರೆ: ಕಾಂಗ್ರೆಸ್‌ ಪಕ್ಷದ ಮಾಜಿ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ರಾಜ್ಯ ರಾಜಕಾರಣದ ಬಗ್ಗೆ ದಾವಣಗೆರೆಯಲ್ಲಿ ಮಾತನಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ಯಾರು ಈ ಬಾರಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಎಸ್‌ ಎಸ್‌ ಮಲ್ಲಿಕಾರ್ಜುನ್‌ ʼನನಗೂ ಕೂಡ ಸಿಎಂ ಕುರ್ಚಿಯ ಮೇಲೆ ಕೂರುವ ಆಕಾಂಕ್ಷೆ ಇದೆ. ಬಸವರಾಜ್‌ ಬೊಮ್ಮಾಯಿ ಸಿಎಂ ಆಗಿದ್ದಾರೆ ಎಂದರೆ ನಾನೂ ಆಗೊದ್ರಲ್ಲಿ ತಪ್ಪೇನಿದೆ?ʼ ಎಂದು ಪ್ರಶ್ನೆ ಮಾಡಿದ್ದಾರೆ.

ಸಿಎಂ ಪಟ್ಟದ ಆಸೆ ಹೊಂದಿರುವುದನ್ನು ವ್ಯಕ್ತ ಪಡಿಸಿದ ಎಸ್‌ ಎಸ್‌ ಮಲ್ಲಿಕಾರ್ಜುವ್‌ ʼನಮ್ಮ ತಂದೆಗೂ ಸಿಎಂ ಆಗುವ ಆಸೆ ಇದೆʼ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಎಸ್‌ ಎಸ್‌ ಮಲ್ಲಿಕಾರ್ಜುನ್ ʼಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲವೂ ಹೈಕ್ಲಾಸ್‌ ಇದೆ. ಪಕ್ಷದ ಮುಖಂಡರಾದ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್‌ ಇಬ್ಬರೂ ಹೊಂದಾಣಿಕಯಲ್ಲಿದ್ದಾರೆ. ಹಾಗಾಗಿ ಪಕ್ಷದಲ್ಲಿ ಯಾವುದೇ ಚಿಂತೆಯಿಲ್ಲ. ಸಿದ್ದರಾಮಯ್ಯ ಪಕ್ಷದ ಹಿರಿಯರು ಆದ್ದರಿಂದ ಅವರನ್ನೇ ಸಿಎಂ ಮಾಡ್ತೀವಿ. ಅವರು ಮತ್ತೆ ಸಿಎಂ ಆಗೊದ್ರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಹೈಕಮಾಂಡ್‌ ನೀಡುವ ನಿರ್ಧಾರ ಅಂತಿಮ. ಅದನ್ನು ನಾವು ಪಾಲಿಸುತ್ತೇವೆʼ ಎಂದು ತಿಳಿಸಿದರು.

ಈಶ್ವರಪ್ಪ ರಾಜೀನಾಮೆ ವಿಚಾರ:

ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣದ ಹಿನ್ನಲೆಯಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆ ನೀಡುವಂತೆ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಆಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ಸಚಿವ ಈಶ್ವರಪ್ಪ ರಾಜಿನಾಮೆ ಘೋಷಿದಿದ್ದಾರೆ.

ಬಿಜೆಪಿ ಗ್ರಾಮೀಣ ಅಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಬಾಕಿ ಉಳಿದ ಫೈಲ್‌ಗಳಿಗೆ ಸಹಿ ಮಾಡಿ ತಮ್ಮ ಸ್ಥಾನಕ್ಕೆ ರಾಜಿನಾಮೆ ‌ಕೊಡುವುದು ಖಾತ್ರಿಯಾಗಿದೆ. ಈ ಬಗ್ಗೆ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಪ್ರತಿಕ್ರಿಯಿಸಿ ʼಈಶ್ವರಪ್ಪ ಅನ್ಯಾಯವಾಗಿ ಒಂದು ಜೀವ ಬಲಿ ಕೊಟ್ಟಿದ್ದಾರೆ. ಯಾವುದೇ ಸೂಕ್ತ ನಿರ್ದೇಶನ ಇಲ್ಲದೇ ಕಾಮಗಾರಿ ಮಾಡಲು ಹೇಗೆ ಸಾಧ್ಯ? ಕಾಮಗಾರಿ ಮಾಡಿಸಿ ಹಣ ಪಾವತಿ ಮಾಡಲು 40% ಕಮಿಷನ್ ಕೇಳಿದ್ರೆ ಗುತ್ತಿಗೆದಾರ ಎಲ್ಲಿ ಹೋಗಬೇಕು ಹೇಳಿ?ʼ ಎಂದು ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.

Exit mobile version