Site icon Vistara News

Day Care: ಡೇ ಕೇರ್‌ನಲ್ಲಿ ಪುಟಾಣಿ ಮೇಲೆ ಮತ್ತೊಂದು ಪುಟಾಣಿಯ ಭೀಕರ ಹಲ್ಲೆ! ಮಕ್ಕಳಲ್ಲಿ ಹೆಚ್ಚಿತೇ ಕ್ರೌರ್ಯ?

day care childerns fight

ಬೆಂಗಳೂರು: ಅಂಬೆಗಾಲಿಡುವ ಮಕ್ಕಳಲ್ಲಿ ಹಿಂಸಾತ್ಮಕ, ಕ್ರೌರ್ಯದ ಮನೋಭಾವ ಹೆಚ್ಚಾಗುತ್ತಿದೆಯಾ? ಇಂತಹದೊಂದು ಪ್ರಶ್ನೆ ಕಾಡುವಂತಹ ಘಟನೆ ಬೆಂಗಳೂರಿನ ಮಾಂಟೆಸ್ಸರಿ ಶಾಲೆಯಲ್ಲಿ (Day Care) ನಡೆದಿದೆ. ಪುಟ್ಟ ಹುಡುಗನೊಬ್ಬ ಮತ್ತೊಬ್ಬನಿಗೆ ಮನಸೋ ಇಚ್ಛೆ ಹೊಡೆಯುವುದು, ಕಚ್ಚುವುದು (Assault Case) ಮಾಡಿದ್ದಾನೆ. ಒಂದು ಬಾರಿಯಲ್ಲ ಐದಾರು ಸಲ ಹೀಗೆ ಹಲ್ಲೆ ನಡೆಸಿದ್ದಾನೆ. ಇಷ್ಟೆಲ್ಲ ನಡೆಯುತ್ತಿದ್ದರೂ, ಮಗು ಚಿರಾಡುತ್ತಿದ್ದರೂ ಯಾವ ಒಬ್ಬ ಸಿಬ್ಬಂದಿ ಕೂಡ ಬಂದು ನೋಡಿಲ್ಲ. ಇದು ಸಾರ್ವಜನಿಕವಾಗಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಇಲ್ಲಿನ ಚಿಕ್ಕಲಸಂದ್ರದಲ್ಲಿರುವ ಟೆಂಡರ್‌ಫುಟ್‌ನಲ್ಲಿ ಡೇ ಕೇರ್‌ನಲ್ಲಿ (tenderfoot montessori school) ಜೂ.21 ರಂದು ಬೆಳಗ್ಗೆ 11.50ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಎಲ್ಲ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಟೆಂಡರ್‌ಫುಟ್‌ ಪ್ರಿಸ್ಕೂಲ್‌ನ ಒಂದು ರೂಮಿನಲ್ಲಿ ಅಂಬೆಗಾಲಿಡುವ ಮಕ್ಕಳನ್ನು ಒಂದೆಡೆ ಇರಿಸಲಾಗಿತ್ತು. ಅಲ್ಲಿಂದ ಆಯಾ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೊರಗೆ ಹೋಗಿದ್ದಾರೆ. ಈ ವೇಳೆ ಪುಟ್ಟ ಬಾಲಕನೊಬ್ಬ ಮಗುವಿಗೆ ಮನಬಂದಂತೆ ಹೊಡೆದು ಥಳಿಸಿದ್ದಾನೆ. ಪದೇ ಪದೆ ಹೊಡೆಯುತ್ತಾ ಕೆಳಗೆ ದೂಡುವುದು ಮಾಡಿದ್ದಾನೆ. ಮಾತ್ರವಲ್ಲ, ತಲೆಗೆ ಹೊಡೆದು, ಕಿವಿಗೆ ಕಚ್ಚಿದ್ದಾನೆ. ರೂಮಿನಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಕೇರ್‌ ಮಾಡುವ ಯಾವ ಸಿಬ್ಬಂದಿಯು ಬಂದಿಲ್ಲ.

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ವಿಡಿಯೋ

ಡೇ ಕೇರ್‌ನ Careless

ಡೇ ಕೇರ್‌ನಲ್ಲಿ ನಿಮ್ಮ‌ ಮಕ್ಕಳು ಎಷ್ಟು ಸೇಫ್‌? ಇಂತಹದೊಂದು ಪ್ರಶ್ನೆ ಕಾಡದೆ ಇರಲಾರದು. ನೋಡಲು ಹೈ ಫೈ ಆಗಿರುವ ಡೇ ಕೇರ್‌ನಲ್ಲಿ ನಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಿಬ್ಬಂದಿ ಇರುತ್ತಾರೆ. ಸುರಕ್ಷಿತವಾಗಿ ನೋಡಿಕೊಳ್ಳುತ್ತಾರೆ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಸದ್ಯ, ಟೆಂಡರ್‌ಫುಟ್‌ ಪ್ರಿಸ್ಕೂಲ್‌ನಲ್ಲಿ ನಡೆದಿರುವ ಘಟನೆಗೆ ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಮಕ್ಕಳನ್ನು ನೋಡಿಕೊಳ್ಳಬೇಕಾದ ಶಿಕ್ಷಕರು, ಯಾವುದೇ ಮುತುರ್ವಜಿ ವಹಿಸುತ್ತಿಲ್ಲ. ಕೇವಲ ಹಣ ಸಂಪಾದನೆಗೆ ಇಳಿದಿದ್ದಾರೆ ಎಂದು ಕಿಡಿಕಾರಿದ್ದಾರೆ. ಕೆಲವರಂತೂ ಡೇ ಕೇರ್‌ಗೆ ಸೇರಿಸುವ ಬದಲು ಅಂಗನವಾಡಿ ಅಥವಾ ನೇರವಾಗಿ ಎಲ್‌ಕೆಜಿಗೆ ಸೇರಿಸಿಬಿಡಿ ಎಂದಿದ್ದಾರೆ. ಶಾಲೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Viral Video: ಇದು ಬರೀ ಪುಶ್‌ಅಪ್‌ ಅಲ್ಲ, ಸೈನ್‌ ಬೋರ್ಡ್‌ ಪುಶ್‌ಅಪ್‌! ಇಂತಹ ಸಾಹಸವನ್ನು ಮಾಡಲೇ ಬೇಡಿ

ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡೇ ಕೇರ್ ಸೆಂಟರ್ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಮಗುವೊಂದು ಇನ್ನೊಂದು ಮಗುವಿನ ಮೇಲೆ ಹಲ್ಲೆ ನಡೆಸುತ್ತಿದ್ದರೂ ಯಾವ ಸಿಬ್ಬಂದಿ ಗಮನಿಸದೇ ಇರುವುದಕ್ಕೆ ಕಿಡಿಕಾರಿದ್ದಾರೆ.

Exit mobile version