Site icon Vistara News

Dead body Found : ನಂಜನಗೂಡು ನಂಜುಂಡೇಶ್ವರ ದೇಗುಲದ ಮುಡಿಕಟ್ಟೆಯಲ್ಲಿ ತೇಲಿ ಬಂದ ಮಹಿಳೆ ಶವ!

Dead Body Found in Kapila River

ಮೈಸೂರು: ಕಪಿಲಾ ನದಿಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವವೊಂದು (Dead body Found) ಪತ್ತೆಯಾಗಿದೆ. ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ (Nanjundeshwara temple) ಮುಡಿಕಟ್ಟೆ ಬಳಿಯೇ ಶವವು ತೇಲಿ ಬಂದಿದೆ.

ಸೋಮವಾರ ಬೆಳಗ್ಗೆ ಮುಡಿಕಟ್ಟೆ ಬಳಿ ಶವ ತೇಲಿ ಬರುವುದನ್ನು ದೇವಾಲಯದ ಸೆಕ್ಯೂರಿಟಿ ಗಾರ್ಡ್ ಗಮನಿಸಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ನಂಜನಗೂಡಿನ ಪಟ್ಟಣ ಪೊಲೀಸರು ದೋಣಿ ನಡೆಸುವ ಅಂಬಿಗರಿಂದ ಶವವನ್ನು ಮೇಲಕ್ಕೆ ಎತ್ತಿದ್ದಾರೆ.

ಮೃತದೇಹವು ಸುಮಾರು 35 ವರ್ಷದ ಮಹಿಳೆಯದ್ದು ಎಂದು ತಿಳಿದು ಬಂದಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ತಿಳಿದು ಬಂದಿಲ್ಲ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಲಾಗಿದೆ. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Drowned in Canal : ಕಬಿನಿ ನಾಲೆಗೆ ಇಳಿದ ವೈದ್ಯಕೀಯ ವಿದ್ಯಾರ್ಥಿ ಮೃತ್ಯು!

ಹೇಮಾವತಿ ಹಿನ್ನೀರಿನಲ್ಲಿ ಶವ ಪತ್ತೆ!

ಹಾಸನ ತಾಲೂಕಿನ‌ ಶೆಟ್ಟಿಹಳ್ಳಿ ಗ್ರಾಮದ ಸಮೀಪದ ಹೇಮಾವತಿ ಹಿನ್ನೀರಿನಲ್ಲಿ ಶವ ಪತ್ತೆಯಾಗಿದೆ. ಕೊಲೆ‌‌ ಮಾಡಿ ಜಲಾಶಯಕ್ಕೆ ಮೃತದೇಹವನ್ನು ಬಿಸಾಡಿದ್ದಾರೆ. ಮೃತದೇಹಕ್ಕೆ ಕಲ್ಲುಕಟ್ಟಿ ಡ್ಯಾಂಗೆ ಎಸೆದಿದ್ದಾರೆ.

ಮೀನುಗಾರರಿಗೆ ಸೋಮವಾರ ಬೆಳಗ್ಗೆ ನೀರಲ್ಲಿ ಮೃತದೇಹವು ತೇಲುತ್ತಿರುವುದು ಕಂಡಿದೆ. ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೀರಿನಲ್ಲಿ ಕೊಳೆಯುತ್ತಿದ್ದ ಮೃತದೇಹವನ್ನು ಅಗ್ನಿಶಾಮಕ ದಳ ಮೇಲಕ್ಕೆ ಎತ್ತಿದ್ದಾರೆ. ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಜಾತಿ ಕಲಹ; ಕಾಂಗ್ರೆಸ್‌ ಮುಖಂಡನ ಕಗ್ಗೊಲೆ!

ರಾಯಚೂರು: ಜಾತಿ ಕಲಹಕ್ಕೆ ಕಾಂಗ್ರೆಸ್ ಮುಖಂಡನೊಬ್ಬನ ಕಗ್ಗೊಲೆ (Murder Case) ಆಗಿದೆ. ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಕಾಂಗ್ರೆಸ್ ಮುಖಂಡ ಪ್ರಸಾದ್ (40) ಕೊಲೆಯಾದವರು.

ಪ್ರಸಾದ್‌ ಸೋಮವಾರ ಬೆಳಗ್ಗೆ ಬೈಕ್‌ನಲ್ಲಿ ತಮ್ಮ ಗದ್ದೆಗೆ ಹೋಗುವಾಗ ಕೆಲವರು ಅಡ್ಡಗಟ್ಟಿದ್ದಾರೆ. ನೋಡ ನೋಡುತ್ತಿದ್ದಂತೆ ಮಾರಾಕಾಸ್ತ್ರದಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಎಸ್‌ಪಿ ನಿಖಿಲ್.ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಾನ್ವಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಕೊಲೆಯಾದ ಕಾಂಗ್ರೆಸ್‌ ಮುಖಂಡ ಪ್ರಸಾದ್‌

ಆಸ್ಪತ್ರೆ ಬಳಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸದ್ಯ ಪ್ರಕರಣ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version