ಶಿವಮೊಗ್ಗ: ಇಲ್ಲಿನ ಬೀರನಕೆರೆ ಗ್ರಾಮದಲ್ಲಿ ಎಮ್ಮೆ ಮೈತೊಳೆಯಲು ಹೋದಾಗ ಕಾಲು ಜಾರಿ ಹಳ್ಳಕ್ಕೆ ಬಿದ್ದು ವಿದ್ಯಾರ್ಥಿಯೊಬ್ಬ (Death News) ಮೃತಪಟ್ಟಿದ್ದಾನೆ. ಪಿಯುಸಿ ವಿದ್ಯಾರ್ಥಿ ರವಿ ನಾಯ್ಕ್ ಮೃತ ದುರ್ದೈವಿ.
ಕಾಲೇಜಿಗೆ ರಜೆ ಇದ್ದ ಕಾರಣ ಭಾನುವಾರ ಎಂದಿನಂತೆ ರವಿ ಎಮ್ಮೆಗಳನ್ನು ಮೇಯಿಸಲು ಹೋಗಿದ್ದ. ಸಂಜೆ ಹೊತ್ತಿಗೆ ಹಳ್ಳದಲ್ಲಿ ಮೈ ತೊಳೆದುಕೊಳ್ಳುತ್ತಿದ್ದಾಗ ಕಾಲು ಜಾರಿ ಹಳ್ಳಕ್ಕೆ ಬಿದ್ದಿದ್ದಾನೆ ಎಂದು ಹೇಳಲಾಗಿದೆ.
ಬಿದಿರು ಪ್ಲಾಂಟೇಶನ್ ಬಳಿಯ ಹಳ್ಳದಲ್ಲಿ ಬಿದ್ದ ರಭಸಕ್ಕೆ ರವಿ ತಲೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದ್ದು, ಸೋಮವಾರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ರವಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಇದನ್ನೂ ಓದಿ | ಶಿವಮೊಗ್ಗದ ಶಂಕಿತ ಉಗ್ರರ ಜತೆ ಸಂಪರ್ಕ, ಕೊಪ್ಪಳದ ವ್ಯಕ್ತಿ ಬಂಧನ