Site icon Vistara News

Death News | ಮಕ್ಕಳ ದಿನಾಚರಣೆಯಂದು ಅಡುಗೆ ಮಾಡಲು ಹೋಗಿದ್ದ ಅಡುಗೆ ಸಹಾಯಕಿ ಸಾವು

ಚಿಕ್ಕಬಳ್ಳಾಪುರ: ಮಕ್ಕಳ ದಿನಾಚರಣೆ ಪ್ರಯುಕ್ತ ಅಂಗನವಾಡಿಗೆ ಅಡುಗೆ ಮಾಡಲು ಹೋಗಿದ್ದ ಅಡುಗೆ ಸಹಾಯಕಿಯೊಬ್ಬರು ಅಡುಗೆ ಮನೆಯಲ್ಲಿ ಮೃತಪಟ್ಟ (Death News) ಘಟನೆ ಬಂಡಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ. ಬೈರಮ್ಮ (54) ಮೃತ ಅಡುಗೆ ಸಹಾಯಕಿಯಾಗಿದ್ದಾರೆ.

ಇವರು ಅಡುಗೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲೇ ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದಿದ್ದಾರೆ. ಆಗ ತಕ್ಷಣವೇ ಅಂಗನವಾಡಿ ಶಿಕ್ಷಕಿ ನೆರವಿಗೆ ದಾವಿಸಿದ್ದಾರೆ. ಅಲ್ಲದೆ, ಅಲ್ಲಿಯೇ ಇದ್ದ ಸ್ಥಳೀಯರು ಸಹ ರಕ್ಷಣೆಗೆ ದಾವಿಸಿದ್ದಾರೆ. ಎಷ್ಟೇ ಪ್ರಯತ್ನಪಟ್ಟರೂ ಏಳಲಿಲ್ಲ.

ಉಸಿರಾಟವೂ ಇರಲಿಲ್ಲವಾದ್ದರಿಂದ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರ ಗಮನಕ್ಕೆ ತರಲಾಗಿದೆ.

ಇದನ್ನೂ ಓದಿ | Suicide | ಸ್ಕೂಲ್‌ನಲ್ಲಿ ಎಲ್ಲರೆದರು ಟೀಚರ್‌ ಬೈದರೆಂದು ನೇಣಿಗೆ ಶರಣಾದ ವಿದ್ಯಾರ್ಥಿನಿ!

Exit mobile version