Site icon Vistara News

Deepawali 2022 | ಪಟಾಕಿ ಹೊಡೆಯಲು ‌ದಿನಕ್ಕೆ 2 ಗಂಟೆ ಟೈಂ ಫಿಕ್ಸ್‌; ಗ್ರೀನ್‌ ಪಟಾಕಿಗಷ್ಟೇ ಗ್ರೀನ್‌ ಸಿಗ್ನಲ್!

crackers

ಬೆಂಗಳೂರು: ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯುವ ದೀಪಾವಳಿ (Deepawali 2022) ಹಬ್ಬದಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಎಂದರೆ ಅದುವೇ ಪಟಾಕಿ. ದೀಪಾವಳಿಯಲ್ಲಿ ಪಟಾಕಿ ಹಾವಳಿ ತುಸು ಹೆಚ್ಚೇ. ಆದರೆ, ಈ ಬಾರಿ ದಿನವಿಡಿ ಪಟಾಕಿ ಹೊಡೆಯುವ ಪ್ಲ್ಯಾನ್‌ ಹಾಕಿಕೊಂಡವರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬ್ರೇಕ್‌ ಹಾಕಿದೆ.

ಅಕ್ಟೋಬರ್‌ ೨೪ರಿಂದ ೨೬ರ ವರೆಗೆ ದೀಪಾವಳಿ ಹಬ್ಬವಿದ್ದು, ಈ ನಿಟ್ಟಿನಲ್ಲಿ ನಗರದಲ್ಲಿ ಪಟಾಕಿಯಿಂದಾಗುವ ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಹೆಚ್ಚಾಗದಂತೆ ಗಮನಹರಿಸಲು ಮಂಡಳಿ ಅಗತ್ಯ ಕ್ರಮಕ್ಕೆ ಮುಂದಾಗಿದೆ. ಅನುಮತಿಸಿರುವ ಹಸಿರು ಪಟಾಕಿಯನ್ನು ಹೊರತುಪಡಿಸಿ ಬೇರೆ ಪಟಾಕಿಯ ಮಾರಾಟ ಅಥವ ಬಳಕೆಯನ್ನು ನಿಷೇಧಿಸಿದೆ. ಒಂದು ವೇಳೆ ಮಾರಾಟ ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳು ಪಟಾಕಿಯನ್ನು ಸೀಜ್‌ ಮಾಡುವಂತೆ ಮಂಡಳಿ ಸೂಚನೆ ನೀಡಿದೆ.

ಸೂಚನೆಗಳು ಹೀಗಿವೆ
ಸುಪ್ರೀಂ ಕೋರ್ಟ್‌ ನಿರ್ದೇಶನಗಳ ಕುರಿತಂತೆ ಸಾರ್ವಜನಿಕರಿಗೆ ಮತ್ತು ಮಕ್ಕಳಲ್ಲಿ ಅರಿವು ಮೂಡಿಸಲು ಪರಿಣಾಮಕಾರಿಯಾಗಿ ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲಾಡಳಿತದ ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳುವುದು.

ಪರಿಸರ ಸ್ನೇಹಿ ದೀಪಾವಳಿ ಹಬ್ಬದ ಕುರಿತು ಸಾರ್ವಜನಿಕ ಸ್ಥಳಗಳಾದ ಮೆಟ್ರೋ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಾಲ್‌ಗಳಲ್ಲಿ ಕರಪತ್ರ ಭಿತ್ತಿಪತ್ರಗಳನ್ನು ಹಂಚುವ ಮೂಲಕ, ವಿಡಿಯೊ ಮತ್ತು ಆಡಿಯೊ ಮುಖಾಂತರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೂಚಿಸಲಾಗಿದೆ.

ಸ್ಥಳೀಯ ಟಿವಿ ಹಾಗೂ ರೇಡಿಯೊ ಮುಖಾಂತರ ಸಾರ್ವಜನಿಕರಿಗೆ ಪರಿಸರ ಸ್ನೇಹಿ ದೀಪಾವಳಿ ಹಬ್ಬ ಆಚರಿಸುವ ಬಗ್ಗೆ ಜಾಗೃತಿ ಮೂಡಿಸುವುದು. ಘನ ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ ಜರುಗಿಸಲು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸುವಂತೆ ಸುತ್ತೋಲೆ ಹೊರಡಿಸಿದೆ. ವಾಯು ಹಾಗೂ ಶಬ್ದ ಮಾಲಿನ್ಯ ಮಾಪನ ವರದಿಯನ್ನು ದೀಪಾವಳಿ ಹಬ್ಬದ ನಂತರ ನವೆಂಬರ್‌ 5ರೊಳಗೆ ಮಂಡಳಿಗೆ ಸಲ್ಲಿಸಲು ತಿಳಿಸಿದೆ.

ಇದನ್ನೂ ಓದಿ | Smartphone| ದೀಪಾವಳಿ ಬಳಿಕ ಸ್ಮಾರ್ಟ್‌ಫೋನ್‌ ದರದಲ್ಲಿ ಏರಿಕೆ ನಿರೀಕ್ಷೆ

Exit mobile version