Site icon Vistara News

Deepawali Gift | ಹಾಲು ಉತ್ಪಾದಕರಿಗೆ ಚಾಮುಲ್‌ ದೀಪಾವಳಿ ಕೊಡುಗೆ; ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳ

chamul ಚಾಮುಲ್‌

ಚಾಮರಾಜನಗರ: ಚಾಮರಾಜ‌ಗರ ಜಿಲ್ಲಾ ಹಾಲು ಉತ್ಪಾದಕರಿಗೆ ಚಾಮುಲ್ ದೀಪಾವಳಿ ಕೊಡುಗೆ (Deepawali Gift) ನೀಡಿದ್ದು, ಶುಕ್ರವಾರದಿಂದ (ಅ.೨೦) ಪ್ರತಿ ಲೀಟರ್‌ಗೆ ೨ ರೂಪಾಯಿ ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಚಾಮರಾಜನಗರ ಹಾಲು ಒಕ್ಕೂಟದಲ್ಲಿ ಹಾಲಿನ ಇಳುವರಿ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಿದೆ.

ಇತ್ತೀಚೆಗೆ ರಾಸುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದರಿಂದ ಹಾಲಿನ ಇಳುವರಿಯು ಸಹಾ ಕುಂಠಿತವಾಗಿದೆ. ಪರಿಣಾಮ ಒಕ್ಕೂಟದ ಹಾಲಿನ ಶೇಖರಣೆ ಗಣನೀಯವಾಗಿ ಕಡಿಮೆಯಾಗಿರುವುದನ್ನು ಮನಗಂಡು ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ದೃಷ್ಟಿಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಮೂಲಕ ರೈತರಿಗೆ ದೀಪಾವಳಿ ಉಡುಗೊರೆಯಾಗಿ ನೀಡಲಾಗುತ್ತಿದೆ ಎಂದು ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಲು ಉತ್ಪದಾಕರಿಗೆ ಶುಕ್ರವಾರ ಪ್ರತಿ ಲೀಟರ್ ಹಾಲಿಗೆ ಎರಡು ರೂಪಾಯಿ ಹೆಚ್ಚಳ ಮಾಡಲಾಗುತ್ತಿದೆ. ಪ್ರಸ್ತುತ ರೈತರಿಗೆ ಪ್ರತಿ ಲೀಟರ್‌ ಹಾಲಿಗೆ 26.85 ರೂಪಾಯಿ ನೀಡಲಾಗುತ್ತಿತ್ತು. ಶುಕ್ರವಾರದಿಂದ ಲೀಟರ್ ಹಾಲಿಗೆ 28.85 ರೂಪಾಯಿ ನೀಡಿ ರೈತರಿಂದ ಖರೀದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ರಾಸುಗಳಿಗೆ ಚರ್ಮಗಂಟು ರೋಗದಿಂದ ಹಾಲಿನ ಇಳುವರಿ ಕುಂಠಿತವಾಗಿದೆ. ಇದರಿಂದ ರೈತರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ದರ ಹೆಚ್ಚಳ ಮಾಡುತ್ತಿರುವುದಾಗಿ ನಾಗೇಂದ್ರ ತಿಳಿಸಿದ್ದಾರೆ.

ಇದನ್ನೂ ಓದಿ | KMF | ಐಡಿಎಫ್‌ ವರ್ಲ್ಡ್‌ ಡೈರಿ ಶೃಂಗಸಭೆಯಲ್ಲಿ ಕೆಎಂಎಫ್‌ಗೆ ಅತ್ಯುತ್ತಮ ಪ್ರದರ್ಶಕ ಪ್ರಶಸ್ತಿ

Exit mobile version