Site icon Vistara News

ತೀರ್ಥಹಳ್ಳಿಯಲ್ಲಿ ಜಿಂಕೆ ಶಿಕಾರಿ ಮಾಡಿದ ಇಬ್ಬರ ಬಂಧನ, ಮತ್ತೊಬ್ಬ ಪರಾರಿ

Sale of deer meat in shivmogga

ಶಿವಮೊಗ್ಗ: ಶಿವಮೊಗ್ಗದ (Shivamogga News) ತೀರ್ಥಹಳ್ಳಿಯಲ್ಲಿ ಜಿಂಕೆ ಶಿಕಾರಿ ಮಾಡಿದ (Sale of deer meat) ಇಬ್ಬರ ಬಂಧನವಾಗಿದೆ. ಮಂಡಗದ್ದೆ ವಲಯದ ಕುಳ್ಳುಂಡೆ ಗ್ರಾಮದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪರಾರಿ ಆಗಿದ್ದಾನೆ.

ಶೆಡ್‌ವೊಂದರಲ್ಲಿ ಮಾಂಸಕ್ಕಾಗಿ ಜಿಂಕೆ ಕಡಿಯುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಮಂಡಗದ್ದೆ ವಲಯ ಅರಣ್ಯಾಧಿಕಾರಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಬಂಧಿತರಿಂದ ಜಿಂಕೆ ಮಾಂಸ ಹಾಗೂ ಎರಡು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಎಟಿಎಂ ಯಂತ್ರ ದೋಚಲು ಯತ್ನ ಜೆಸಿಬಿ ತಂದ ಕಳ್ಳರು

ಶಿವಮೊಗ್ಗದಲ್ಲಿ ಜೆಸಿಬಿ ಬಳಸಿ ಎಟಿಎಂ ಯಂತ್ರ ದೋಚಲು ಯತ್ನಿಸಿರುವ ಘಟನೆ ನಡೆದಿದೆ. ವಿನೋಬನಗರ ಶಿವಾಲಯದ ಮುಂಭಾಗವಿರುವ ಆಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಹಣ ದೋಚಲು ಕಳ್ಳ ಮುಂದಾಗಿದ್ದಾನೆ. ಸಮೀಪದ ಪೆಟ್ರೋಲ್ ಪಂಪ್ ಬಳಿಯಿದ್ದ ಜೆಸಿಬಿಯ ಕೀ ಅನ್ಲಾಕ್ ಮಾಡಿದ್ದಾನೆ. ಬಳಿಕ ಜೆಸಿಬಿಯಲ್ಲಿ ಬಂದು ಎಟಿಎಂ ಯಂತ್ರ ಕಳವು ಮಾಡಿ ಹಣ ದೋಚಲು ಮುಂದಾಗಿದ್ದಾನೆ.

ಶಿವಮೊಗ್ಗದಲ್ಲಿ ಎಟಿಎಂ ಕಳ್ಳನ ಕರಾಮತ್ತು

ಇದನ್ನೂ ಓದಿ: Rain News : ಮಳೆ ಅನಾಹುತಕ್ಕೆ ಪ್ರತ್ಯೇಕ ಕಡೆ ಮೂವರು ವೃದ್ಧೆಯರು ಸಾವು

ಆದರೆ ಶಟರ್ ಮುರಿಯುತ್ತಿದ್ದಂತೆ ಬ್ಯಾಂಕ್ ಕಂಟ್ರೋಲ್ ರೂಂಗೆ ಅಲಾರಾಂ ಹೋಗಿದೆ. ಕೂಡಲೇ ಬ್ಯಾಂಕ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿ ಜೆಸಿಬಿಯನ್ನು ಬಿಟ್ಟು ಪರಾರಿ ಆಗಿದ್ದಾನೆ. ನಾಪತ್ತೆ ಆಗಿರುವ ಆರೋಪಿಗಾಗಿ ಹುಡುಕಾಟ ಮುಂದುವರಿದಿದ್ದು, ಜೆಸಿಬಿ ವಶಕ್ಕೆ ಪಡೆಯಲಾಗಿದೆ.

ಮಂಡ್ಯದಲ್ಲಿ ಕಾಡಾನೆಗಳ ಹಿಂಡು

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಾದರಹಳ್ಳಿ ಗ್ರಾಮದಲ್ಲಿ ಆನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಮಾದರಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಸತತ ಒಂದು ವಾರದಿಂದ ವಿವಿಧ ಗ್ರಾಮಗಳಲ್ಲಿ ಬೀಡುಬಿಟ್ಟಿವೆ. ಮದ್ದೂರು ಹಾಗೂ ಮಳವಳ್ಳಿ ತಾಲೂಕಿನ ವಿವಿಧ ಗ್ರಾಮದಲ್ಲಿ ಎಕರೆ ಪ್ರದೇಶದಲ್ಲಿದ್ದ ಕಬ್ಬು ತುಳಿದು ನಾಶ ಮಾಡಿವೆ.

ಮರಿಯಾನೆ, ಸಲಗ ಸೇರಿ 9 ಆನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಅಜ್ಜಹಳ್ಳಿ, ಯಲಾದಹಳ್ಳಿ, ಗುಳಘಟ್ಟ, ಮುಟ್ಟನಹಳ್ಳಿ ಹಾಗೂ ಮಾದರಹಳ್ಳಿ ಗ್ರಾಮದಲ್ಲಿ ಬೆಳೆ ನಾಶವಾಗಿದೆ. ಕಟಾವಿಗೆ ಬಂದಿದ್ದ ಕಬ್ಬು ಹಾಗೂ ತೆಂಗಿನ ಮರಗಳು ಆನೆ ದಾಳಿಯಿಂದ ನಾಶವಾಗಿದೆ. ವಾರದಿಂದ ಆನೆಗಳನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಮಂಡ್ಯದಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷ

ಇತ್ತ ಆನೆಗಳ ನೋಡಲು ವಿವಿಧ ಹಳ್ಳಿಗಳಿಂದ ಜನರು ಆಗಮಿಸುತ್ತಿದ್ದಾರೆ. ಮರಿ ಆನೆ ಇರುವುದರಿಂದ ಹೆಚ್ಚು ಜನರ ಸೇರುತ್ತಿದ್ದು,ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಕಾಡಿಗೆ ಆನೆಗಳನ್ನು ಓಡಿಸಲು ಕಷ್ಟವಾಗುತ್ತಿದೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಇನ್ನು ಸರ್ಕಾರವು ತಕ್ಷಣವೇ ರೈತರ ಬೆಳೆ ಹಾನಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version