Site icon Vistara News

Supreme Court: ಡಿ ರೂಪಾಗೆ ಹಿನ್ನಡೆ; 24 ಗಂಟೆಯಲ್ಲಿ ರೋಹಿಣಿ ವಿರುದ್ಧ ಪೋಸ್ಟ್‌ಗಳ ಡಿಲಿಟ್‌ಗೆ ಸುಪ್ರೀಂ ಸೂಚನೆ

Roopa Moudgil and Rohini Sindhuri

#image_title

ನವದೆಹಲಿ: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ(Rohini Sindhuri) ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾದ ಪೋಸ್ಟ್‌ಗಳನ್ನು ತಕ್ಷಣವೇ ಡಿಲಿಟ್ (Delete all Post) ಮಾಡಬೇಕು ಐಪಿಎಸ್ ಅಧಿಕಾರಿ ಡಿ ರೂಪಾ (D Roopa) ಅವರಿಗೆ ಸೂಚಿಸಿರುವ ಸುಪ್ರೀಂ ಕೋರ್ಟ್(Supreme Court), ಇದಕ್ಕಾಗಿ 24 ಗಂಟೆಗಳ ಗಡುವು ವಿಧಿಸಿದೆ. ಫೆಬ್ರವರಿ ತಿಂಗಳಲ್ಲಿ ಇಬ್ಬರು ಹಿರಿಯ ಅಧಿಕಾರಿಗಳ ಪರಸ್ಪರ ವೈಯಕ್ತಿಕ ಜಗಳವನ್ನು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗ ಮಾಡಿದ್ದರು. ಈ ವೇಳೆ, ರೋಹಿಣಿ ಸಿಂಧೂರಿಗೆ ಸಂಬಂಧಿಸಿದಂತೆ ಡಿ ರೂಪಾ ಅವರು ಅನೇಕ ಪೋಸ್ಟ್‌ಗಳನ್ನು ಹಾಕಿದ್ದರು(Sindhuri Vs Roopa).

ಒಂದು ವೇಳೆ, ಪೋಸ್ಟ್‌ಗಳನ್ನು ಡಿಲಿಟ್ ಮಾಡಲು ಆಗದಿದ್ದರೆ, ಮಾಡಿರುವ ಎಲ್ಲ ಟೀಕೆ ಟಿಪ್ಪಣಿಗಳನ್ನು ವಾಪಸ್ ಪಡೆದಿರುವುದಾಗಿ ಅದೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವಂತೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿಥಾಲ್ ಅವರಿದ್ದ ಪೀಠವು ಡಿ ರೂಪಾ ಅವರಿಗೆ ಸೂಚಿಸಿದೆ.

ತಮ್ಮ ವಿರುದ್ಧ ರೋಹಿಣಿ ಸಿಂಧೂರಿ ಅವರು ದಾಖಲಿಸಿರುವ ಕ್ರಿಮಿನಲ್ ಕೇಸ್ ರದ್ದುಕೋರಿ ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಪೀಠವು 24 ಗಂಟೆಯೊಳಗೇ ರೋಹಿಣಿ ಸಿಂಧೂರಿ ವಿರುದ್ಧ ಮಾಡಿರುವ ಎಲ್ಲ ಪೋಸ್ಟ್‌ಗಳನ್ನು ಡಿಲಿಟ್ ಮಾಡುವಂತೆ ಮೌಖಿಕವಾಗಿ ಡಿ ರೂಪಾ ಅವರಿಗೆ ಸೂಚಿಸಿತು.

ಇದಕ್ಕೂ ಮೊದಲು ಸುಪ್ರೀಂ ಕೋರ್ಟ್ ಪೀಠವು, ಹಿರಿಯ ಅಧಿಕಾರಿಗಳು ತಮ್ಮ ನಡುವಿನ ವಿವಾದಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚಿಸಿತ್ತು. ಆದರೆ, ಇಬ್ಬರೂ ಅಧಿಕಾರಿಗಳು ಮಧ್ಯಸ್ಥಿತಿಕೆ ವಿಫಲವಾಗಿದೆ ಎಂದು ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಆಗ, ಕೋರ್ಟ್ ಬೇಸರ ವ್ಯಕ್ತಪಡಿಸಿತು. ಅಲ್ಲದೇ, ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಹೀಗೆ ಜಗಳಾವಾಡಿದರೆ ಆಳಿಡತ ಪರಿಸ್ಥಿತಿ ಹೇಗೆ ಎಂದು ಪ್ರಶ್ನಿಸಿದ ಪೀಠವು, ಅರ್ಹತೆಯ ಮೇಲೆ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತು.

ಏನಿದು ರೂಪಾ-ರೋಹಿಣಿ ಜಗಳ?

ಕಳೆದ ಫೆಬ್ರವರಿಯಲ್ಲಿ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ನಡುವಿನ ಜಗಳ ತಾರಕ್ಕೇರಿತು. ರೋಹಿಣಿ ವಿರುದ್ಧ ವೈಯಕ್ತಿಕ ಆರೋಪಗಳನ್ನು ಮಾಡಿದ್ದ ಡಿ ರೂಪಾ ಅವರು ಸೋಷಿಯಲ್ ಮೀಡಿಯಾದಲ್ಲಿ ಅವರ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿರುವ ಪೋಸ್ಟ್ ಷೇರ್ ಮಾಡಿದ್ದರು. ಅಲ್ಲದೇ, ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಇದು ಇಬ್ಬರ ನಡುವಿನ ಜಗಳ ಬೀದಿಗೆ ಬರುವಂತೆ ಮಾಡಿತ್ತು. ಅಲ್ಲದೇ, ಸಾಕಷ್ಟು ವಾದ ವಿವಾದಕ್ಕೆ ಕಾರಣವಾಗಿತ್ತು. ಬಳಿಕ, ಐಎಎಸ್ ಅಧಿಕಾರಿ ರೋಹಿಣಿ ಅವರು, ಡಿ ರೂಪಾ ಅವರು ಸೋಷಿಯಲ್ ಮೀಡಿಯಾದಲ್ಲಿ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿದ್ದಾರೆ. ಮಾಧ್ಯಮಗಳಲ್ಲೂ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದರು. ರೂಪಾ ವಿರುದ್ದ 1 ಕೋಟಿ ರೂ. ಕ್ರಿಮಿನಲ್ ಮಾನಹಾನಿ ಕೇಸ್ ದಾಖಲಿಸಿದ್ದರು.

ಈ ಸುದ್ದಿಯನ್ನೂ ಓದಿ: Rohini Sindhuri : 6 ತಿಂಗಳ ಬಳಿಕ ರೋಹಿಣಿ ಸಿಂಧೂರಿಗೆ ಮತ್ತೆ ಸಿಕ್ತು ಹುದ್ದೆ ; ಅವರೀಗ Chief Editor! ರೂಪಾ IPSಗೆ ಇಲ್ವಾ?

Exit mobile version