Site icon Vistara News

BBMP Election: ಬಿಬಿಎಂಪಿ ವಾರ್ಡ್‌ ಸಂಖ್ಯೆ 225 ನಿಗದಿ ಮಾಡಿ ಅಧಿಸೂಚನೆ; ಸಲಹೆ, ಆಕ್ಷೇಪಣೆ ಸಲ್ಲಿಕೆಗೆ 15 ದಿನ ಕಾಲಾವಕಾಶ

BBMP Office

BBMP Prohibits Animal Slaughter, Meat Sale On Ganesh Chaturthi

ಬೆಂಗಳೂರು: ಬಿಬಿಎಂಪಿ ವಾರ್ಡ್ ಮರು ವಿಂಗಡಣೆಯ ಕರಡು ಪ್ರತಿ ಬಿಡುಗಡೆಯಾಗಿದ್ದು, ವಾರ್ಡ್‌ಗಳ ಸಂಖ್ಯೆ 243ರಿಂದ 225ಕ್ಕೆ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಜತೆಗೆ ಸಲಹೆ, ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದ್ದು, ಬಳಿಕ ಬಿಬಿಎಂಪಿ ವಾರ್ಡ್‌ಗಳ (BBMP Election) ಅಂತಿಮ ಪ್ರತಿಯನ್ನು ಸರ್ಕಾರ ಪ್ರಕಟ ಮಾಡಲಿದೆ.

2021ರ ಜನವರಿ 29ರಂದು ಬಿಜೆಪಿ ಸರ್ಕಾರ, ಬಿಬಿಎಂಪಿ ವಾರ್ಡ್‌ಗಳನ್ನು 198ರಿಂದ 243ಕ್ಕೆ ಏರಿಸಿ ಅಧಿಸೂಚನೆ ಹೊರಡಿಸಿತ್ತು. ಆದರೆ, ಹಿಂದಿನ ಸರ್ಕಾರದ ಆದೇಶವನ್ನು ಆಗಸ್ಟ್ 4ರಂದು ಕಾಂಗ್ರೆಸ್‌ ಸರ್ಕಾರ ಹಿಂಪಡೆದು ಹೊಸ ಅಧಿಸೂಚನೆ ಪ್ರಕಟಿಸಿತ್ತು. ಸರ್ಕಾರದ ಹೊಸ ಅಧಿಸೂಚನೆಯಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 225 ವಾರ್ಡ್‌ಗಳ ರಚನೆ ಮಾಡಲಾಗಿದ್ದು, ಕರಡು ಪ್ರತಿಯನ್ನು ಪ್ರಕಟಿಸಲಾಗಿದೆ.

ಇದನ್ನೂ ಓದಿ | BJP Politics : ಬಿಎಸ್‌ವೈ ಸಭೆಗೆ ಸೋಮಶೇಖರ್‌, ಬೈರತಿ ಗೈರು; ಯಡಿಯೂರಪ್ಪ ನೀಡಿದ ಮಹತ್ವದ ಸುಳಿವೇನು?

ಅಧಿಸೂಚನೆಯನ್ನು ಕರ್ನಾಟಕ ರಾಜ್ಯಪತ್ರದ ಅಧಿಕೃತ ಜಾಲತಾಣದಲ್ಲಿ ಸಾರ್ವಜನಿಕರು ವೀಕ್ಷಿಸಬಹುದಾಗಿದೆ. ವಾರ್ಡ್‌ ಮರು ವಿಂಗಡಣೆ ಬಗ್ಗೆ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಸಲಹೆ, ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿದೆ.

Exit mobile version