Site icon Vistara News

Viral News : ಹಿಂದು ದೇವತೆಗಳಿಗೆ ಸೂ.. ಮಗನ್‌ ಎಂದು ಪೋಸ್ಟ್ ಮಾಡಿದ ಸ್ವಾಭಿಮಾನಿ ಸ್ವಾಮಿ!‌

Hindu God in temple

ಹಾಸನ: ಮಧ್ಯಪ್ರದೇಶದಲ್ಲಿ ನಡೆದಿದ್ದ ದಲಿತ ದೌರ್ಜನ್ಯ ಪ್ರಕರಣವನ್ನು ಉಲ್ಲೇಖಿಸಿ ಕನ್ನಡದ ವ್ಯಕ್ತಿಯೊಬ್ಬ ಹಿಂದು ದೇವತೆಗಳ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಹಿಂದುಪರ ಸಂಘಟನೆಗಳು ಸೇರಿದಂತೆ ಹಿಂದು ಕಾರ್ಯಕರ್ತರು ತೀವ್ರ ಅಸಮಾಧಾನವನ್ನು ಹೊರಹಾಕಿದ್ದು, ಘಟನೆ ಬಗ್ಗೆ ಗೊತ್ತಾದರೂ ಆರೋಪಿ ಮೇಲೆ ಪೊಲೀಸರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್‌ ಈಗ ವೈರಲ್‌ (Viral News) ಆಗಿದೆ.

ಫೇಸ್‌ಬುಕ್‌ನಲ್ಲಿ ಸ್ವಾಭಿಮಾನಿ ಸ್ವಾಮಿ ಹೆಸರಿನ ಅಕೌಂಟ್‌ನಿಂದ ಈ ಪೋಸ್ಟ್ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ನಡೆದಿದ್ದ ಹೀನ ಕೃತ್ಯವನ್ನು ಖಂಡಿಸುವ ಭರದಲ್ಲಿ ಹಿಂದು ದೇವತೆಗಳ ಬಗ್ಗೆ ಸೂ.. ಮಗನ್‌ ಎಂದು ಉಲ್ಲೇಖಿಸಲಾಗಿದೆ. ಹಿಂದು ದೇವತೆಗಳ ಬಗ್ಗೆ ಅಶ್ಲೀಲ ಪದವನ್ನು ಬಳಕೆ ಮಾಡಲಾಗಿತ್ತು. ಈ ಪೋಸ್ಟ್‌ ಮಾಡುತ್ತಿದ್ದಂತೆ ಸ್ಕ್ರೀನ್‌ಶಾಟ್‌ಗಳು ಎಲ್ಲ ಕಡೆ ಹರಿದಾಡುತ್ತಿವೆ.

ಹಿಂದು ದೇವತೆಗಳಿಗೆ ಅವಮಾನಕಾರಿ ಪೋಸ್ಟ್‌ ಹಾಕಿರುವ ಸುಬ್ರಹ್ಮಣ್ಯ ಸ್ವಾಮಿ. ಅಸಲಿ ಸಂಗತಿ ಗೊತ್ತಾಗುತ್ತಿದ್ದಂತೆ ಹಳೇ ಪೋಸ್ಟ್‌ ಡಿಲೀಟ್‌ ಮಾಡಿ ಮುಸ್ಲಿಮರಿಗೆ ಬೈದು ಮತ್ತೊಂದು ಪೋಸ್ಟ್. ಜತೆಗೆ ಕ್ರಮ ವಹಿಸಲು ವಿನೋದ್‌ ಬಿ.ಎಂ. ಆಗ್ರಹ.

ಕಠಿಣ ಕ್ರಮಕ್ಕೆ ಆಗ್ರಹ

ಇಂತಹ ಪೋಸ್ಟ್ ಹಾಕಿದರೂ ಸಹ ಈತನ ವಿರುದ್ಧ ಇನ್ನೂ ಏಕೆ ಕ್ರಮವನ್ನು ಕೈಗೊಂಡಿಲ್ಲ? ಈ ರೀತಿಯ ಪೋಸ್ಟ್‌ನಿಂದ ಬಹುಸಂಖ್ಯಾತ ಹಿಂದುಗಳ ಭಾವನೆಗಳಿಗೆ ಧಕ್ಕೆಯುಂಟಾಗಿದೆ. ಇಂಥವರ ಬಗ್ಗೆ ಯಾಕೆ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಪ್ರಶ್ನೆ ಮಾಡಲಾಗಿದೆ.

ಟ್ವಿಟರ್‌ ಮೂಲಕ ವಿರೋಧ

ಇನ್ನು ಈ ಬಗ್ಗೆ ಸ್ವಾಭಿಮಾನಿ ಸ್ವಾಮಿ ಮಾಡಿರುವ ಪೋಸ್ಟ್‌ನ ಸ್ಕ್ರೀನ್‌ ಶಾಟ್‌ (Social Medea Post Screenshot) ತೆಗೆದು ಇನ್ನೊಂದು ಪೋಸ್ಟ್‌ ಅನ್ನು ಸಿದ್ಧಪಡಿಸಲಾಗಿದೆ. ಇದನ್ನು ವಿನೋದ್‌ ಬಿಎಂ (Vinod BM) ಎಂಬುವವರು ತಮ್ಮ ಟ್ವಿಟರ್‌ನಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಆ ಪೋಸ್ಟ್‌ನಲ್ಲಿ ಹೀಗೆ ಬರೆಯಲಾಗಿದೆ, “ದಾರಿ ತಪ್ಪಿದ ದಲಿತರು ಹಿಂದು ಧರ್ಮದ ವಿರುದ್ಧ ಎಷ್ಟೇ ಅವಹೇಳನ ಮಾಡಿದರೂ ಕಾನೂನು ಕ್ರಮ ಏಕೆ ಇಲ್ಲ!? ದಲಿತರಿಗೆ ಮಲ ತಿನ್ನಿಸಿದ ಹೀನ ಕೃತ್ಯವನ್ನು ಮಾಡಿದ್ದು ಮುಸ್ಲಿಮರು! ಆದರೆ, ಈ ಛೋಟಾ ಭೀಮ್‌ ಎನಿಸಿಕೊಳ್ಳುವ ವ್ಯಕ್ತಿ ಮಾಡಿದ್ದು ಹಿಂದು ದೇವತೆಗಳ ಅವಹೇಳನ. ಅದೇ ದಲಿತ ಹಿಂದು ಧರ್ಮದ ಪರ ಹೋರಾಡಿದರೆ ಕಾನೂನು ಕ್ರಮ!” ಎಂದು ಪ್ರಶ್ನೆ ಮಾಡಲಾಗಿದೆ.

ಹಿಂದು ಧರ್ಮದ ದೇವಾನುದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿರುವ ಈ ವ್ಯಕ್ತಿ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗಬೇಕು. ಜುಲೈ 6 ರಂದು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಈತ ಹಾಕಿಕೊಂಡಿದ್ದಾನೆ. ಹತ್ತು ದಿನ ಕಳೆದರೂ ಇಂತಹವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಹಿಂದುಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಪೋಸ್ಟ್‌ ಡಿಲೀಟ್!‌

ಸ್ವಾಭಿಮಾನಿ ಸ್ವಾಮಿಯು ಈ ಪೋಸ್ಟ್‌ ಅನ್ನು ಹಾಕಿದ ಕೂಡಲೇ ವೈರಲ್‌ ಆಗಿದೆ. ಬಳಿಕ ಇದು ಮುಸ್ಲಿಂ ವ್ಯಕ್ತಿಗಳು ಮಾಡಿದ್ದು ಎಂಬುದು ಗೊತ್ತಾಗುತ್ತಿದ್ದಂತೆ ತನ್ನ ಪೋಸ್ಟ್‌ ಅನ್ನು ಡಿಲೀಟ್‌ (Post Delete) ಮಾಡಿ, ಮತ್ತೊಂದು ಪೋಸ್ಟ್‌ ಅನ್ನು ಹಾಕಿದ್ದಾನೆ.

ಮತ್ತೊಂದು ಪೋಸ್ಟ್‌ನಲ್ಲೇನಿದೆ?

“ಮಧ್ಯಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ! ಪರಿಶಿಷ್ಟ ಜಾತಿಯ ಹುಡುಗನಿಗೆ ಮಲ ತಿನ್ನಿಸಿದ ಬೆ… ಗೆ ಹುಟ್ಟಿದ ಮುಸ್ಲಿಮರು” ಎಂದು ಬರೆದುಕೊಂಡಿದ್ದಾನೆ. ಆದರೆ, ತನ್ನ ಹಿಂದಿನ ಪೋಸ್ಟ್‌ನಲ್ಲಿ ಹಿಂದು ದೇವತೆಗಳ ಬಗ್ಗೆ ಅವಹೇಳನ ಮಾಡಿದ್ದರ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ಫೇಸ್‌ಬುಕ್‌ ಪೇಜ್‌ನಲ್ಲಿ (Facebook Page) ಹಾಕಲಾಗಿಲ್ಲ.

Exit mobile version