ವಿಜಯಪುರ: ಸಿದ್ದೇಶ್ವರ ಸ್ವಾಮಿಗಳು (Siddheshwar Swamiji) ನಮಗೆ ತಂದೆ ಇದ್ದ ಹಾಗೆ. ಈಗ ಅವರಿಲ್ಲದ ಬದುಕು ನಮ್ಮನ್ನು ದುಃಖಕ್ಕೆ ತಂದಿದೆ. ನಮ್ಮ ಅಪ್ಪನನ್ನು ಬಿಟ್ಟು ಬದುಕುವುದು ಹೇಗೆ? ಅವರ ಪ್ರವಚನ ಕೇಳಲೆಂದೇ ಒಂದು ತಿಂಗಳು ನಾನಿದ್ದೆ. ಅವರು ನಡೆದಾಡುವ ದೇವರು. ಕಾಣಿಸದ ದೇವರು ಬೇರೆ ಇದ್ದರೆ, ಇವರು ಮಾತ್ರ ನಮಗೆಲ್ಲರಿಗೂ ಕಾಣಿಸುವ ದೇವರಾಗಿದ್ದರು. ಈಗ ಅವರೂ ಕಾಣಿಸದಾದರು ಎಂದು ಭಕ್ತೆಯೊಬ್ಬರು ಕಣ್ಣೀರಿಟ್ಟಿದ್ದಾರೆ.
ನಡೆದಾಡುವ ದೇವರು ಎಂದೇ ಪ್ರಸಿದ್ಧಿಯಾಗಿರುವ, ತಮ್ಮ ಪ್ರವಚನ ಮೂಲಕ ಸರಳ ಜೀವನದ ಬಗ್ಗೆ ಜನರಿಗೆ ದಾರಿದೀಪವಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ದೇಹಾಂತ್ಯವು ಭಕ್ತ ಸಮೂಹವನ್ನು ಕಂಗೆಡಿಸಿದೆ. ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡುತ್ತಿದ್ದು, ಕಣ್ಣೀರಿಡುತ್ತಿದ್ದಾರೆ.
ಸಿದ್ದ.. ಇಷ್ಟು ನಾಡ ಸೇವೆ ಮಾಡಿದರೂ ನೀನು ಬದುಕಲಿಲ್ಲವೇ? ನನ್ನನ್ನು ಕರೆದುಕೋ ಸಿದ್ದ… ನಿನ್ನ ಬಿಟ್ಟು ನಾವು ಹೇಗೆ ಬದುಕುವುದು ಎಂದು ಭಕ್ತೆಯೊಬ್ಬರು ಗೋಳಿಟ್ಟಿದ್ದು, ಸರಳ ಜೀವನದ ಬಗ್ಗೆ ನೀವು ಹೇಳಿಕೊಡುತ್ತಿದ್ದವರು ಈಗ ನಮ್ಮನ್ನು ಬಿಟ್ಟು ಹೋದರೆ ಹೇಗೆ? ಎಂದು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ | Siddheshwar Swamiji | ಸಿದ್ದೇಶ್ವರ ಶ್ರೀಗಳ ಮಣ್ಣಿನ ಮೂರ್ತಿ; ಕಲಾವಿದನಿಂದ ವಿಶೇಷ ಗೌರವ