Site icon Vistara News

Dharma dangal : ಗುಬ್ಬಿ ದೇವಾಲಯಕ್ಕೂ ಹರಡಿದ ವ್ಯಾಪಾರ ದಂಗಲ್:‌ ಜಾತ್ರೆಯಲ್ಲಿ ಅನ್ಯ ಧರ್ಮೀಯರ ಅಂಗಡಿಗೆ ವಿರೋಧ

ಗುಬ್ಬಿ ದೇವಸ್ಥಾನ

#image_title

ತುಮಕೂರು: ಕರಾವಳಿ ಮತ್ತು ಮಲೆನಾಡಿನ ದೇವಾಲಯಗಳ ಜಾತ್ರೆಗಳ ವೇಳೆ ಸದ್ದು ಮಾಡುತ್ತಿರುವ ವ್ಯಾಪಾರ ದಂಗಲ್‌ (Dharma dangal)

ಈಗ ಕಲ್ಪತರು ನಾಡು ತುಮಕೂರಿಗೂ ಕಾಲಿಟ್ಟಿದೆ.

ಪೊಲೀಸರಿಗೆ ಸಲ್ಲಿಸಿದ ಮನವಿ

ಗುಬ್ಬಿ ಶ್ರೀ ಚನ್ನಬಸವೇಶ್ವರ ಸ್ವಾಮಿ ಜಾತ್ರೆ ಮಹೋತ್ಸವ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ಅನ್ಯಕೋಮಿನವರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಮನವಿ ಮಾಡಲಾಗಿದೆ. ಗುಬ್ಬಿ ದೇವಸ್ಥಾನ ಭಾರಿ ಕಾರಣಿಕ ಶಕ್ತಿ ಹೊಂದಿದ್ದು ಮತ್ತು ಎಲ್ಲರ ಶ್ರದ್ಧೆಯ ತಾಣವಾಗಿದೆ. ಇಲ್ಲಿನ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಮುಜರಾಯಿ ವ್ಯಾಪ್ತಿಗೆ ಒಳಪಟ್ಟ ದೇವಸ್ಥಾನದಲ್ಲಿ ಈಗ ಜಾತ್ರೆ ನಡೆಯುತ್ತಿದ್ದು, ದೇವಸ್ಥಾನದ ಆವರಣದಿಂದ ನೂರು ಮೀಟರ್‌ ವ್ಯಾಪ್ತಿಯೊಳಗೆ ಅನ್ಯ ಧರ್ಮೀಯರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಮನವಿ ಮಾಡಿವೆ.

ತುಮಕೂರು ಡಿಸಿ ವೈಎಸ್ ಪಾಟೀಲ್ ಗೆ ಮನವಿ ಪತ್ರ ಸಲ್ಲಿಸಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ‌ ದಳ ಕಾರ್ಯಕರ್ತರು ಅನ್ಯ ಕೋಮಿನವರೂ ವ್ಯಾಪಾರಕ್ಕೆ ಬರಬಾರದು ಎಂದು ಮನವಿ ಮಾಡಿದ್ದಾರೆ. ಮುಜರಾಯಿ ಕಾನೂನಿನಲ್ಲೇ ಆವರಣದಲ್ಲಿ ಅನ್ಯ ಕೋಮಿನವರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂಬ ಅಂಶ ಇದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.

ತುಮಕೂರು ಡಿಸಿಗೆ ಹಿಂದು ಸಂಘಟನೆಗಳ ಮನವಿ

ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಯಾರಿಗೂ ಅವಕಾಶ ನೀಡಬಾರದು. ಒಂದು ಪೊಲೀಸರು ಕ್ರಮ ಕೈಗೊಳ್ಳದೆ ಇದ್ದರೆ, ಯಾರಾದರೂ ಅನ್ಯ ಕೋಮಿನವರು ವ್ಯಾಪಾರ ಮಾಡುತ್ತಿದ್ದರೆ ತಾವೇ ಹೋಗಿ ಅದನ್ನು ತಡೆಯುವ ಪ್ರಯತ್ನ ಮಾಡುವುದಾಗಿ ಬಜರಂಗದಳ ಜಿಲ್ಲಾ ಮುಖಂಡ ಮಂಜು ಭಾರ್ಗವ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : Dharma Dangal | ಕದ್ರಿ ದೇವಸ್ಥಾನದ ಜಾತ್ರೆಯಲ್ಲೂ ಹಿಂದುಯೇತರ ವ್ಯಾಪಾರಿಗಳಿಗೆ ನಿಷೇಧ: ಕುಕ್ಕರ್‌ ಬ್ಲಾಸ್ಟ್‌ ಉಲ್ಲೇಖ

Exit mobile version