Site icon Vistara News

Dharma Dangal :‌ ಕೂದುವಳ್ಳಿ ದರ್ಗಾ ಹಿಂದೆ ಚಂದ್ರಮೌಳೀಶ್ವರ ದೇವಸ್ಥಾನವಾಗಿತ್ತೇ? ; ಹಿಂದು ಸಂಘಟನೆಗಳ ವಾದ

thooduvalli durgah

#image_title

ಚಿಕ್ಕಮಗಳೂರು: ರಾಜ್ಯದಲ್ಲಿ ಮತ್ತೊಂದು ದೊಡ್ಡ ಮಟ್ಟದ ಧರ್ಮ ದಂಗಲ್‌ಗೆ (Dharma Dangal) ವೇದಿಕೆ ಸಿದ್ಧವಾಗುತ್ತಿರುವಂತೆ ಕಾಣುತ್ತಿದೆ. ಮಂಗಳೂರಿನ ಮಳಲಿ ಮಸೀದಿಯ ನವೀಕರಣ ಸಂದರ್ಭದಲ್ಲಿ ಈ ಕಟ್ಟಡ ಹಿಂದೆ ದೇವಸ್ಥಾನವಾಗಿತ್ತು, ಹೀಗಾಗಿ ಇದರ ಬಗ್ಗೆ ಪುರಾತತ್ವ ಪರಿಶೀಲನೆ ಆಗಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಇದೀಗ ಅಂತಹುದೇ ಇನ್ನೊಂದು ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಕೂದುವಳ್ಳಿ ಬಳಿ ಇರುವ ಹಜರತ್ ಸೈಯದ್ ಬುದ್ ಷಾ ದರ್ಗಾ ಈ ಹಿಂದೆ ಚಂದ್ರಮೌಳೇಶ್ವರ ದೇವಾಲಯ ಆಗಿತ್ತು. ಅದನ್ನು ದರ್ಗಾ ಆಗಿ ಪರಿವರ್ತನೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಮುಖಂಡರು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಜಿಲ್ಲೆಯಾದ್ಯಂತ ಈ ಫೋಟೊಗಳು ಫುಲ್ ವೈರಲ್ ಆಗಿದ್ದು, ಹಜರತ್ ಸೈಯದ್ ಬುದ್ ಷಾ ದರ್ಗಾದಲ್ಲಿ ಹಿಂದೂ ಶೈಲಿಯನ್ನು ಹೋಲುವ ಹೂವಿನ ಕೆತ್ತನೆ ಸೇರಿದಂತೆ ಹಲವು ಸಂಸ್ಕೃತಿ ಸಾರುವ ಅಂಶಗಳು ಪತ್ತೆಯಾಗಿದೆ ಎಂದು ಹಿಂದೂ ಸಂಘಟನೆಗಳು ವಾದಿಸುತ್ತಿವೆ.

ಕೂದುವಳ್ಳಿಯ ದರ್ಗಾ

ನವೀಕರಣಕ್ಕೆ ವಿರೋಧ

ಈ ವಿಚಾರ ಪ್ರಮುಖವಾಗಿ ಎದ್ದುಬರಲು ಕಾರಣವಾಗಿದ್ದು, ಇತ್ತೀಚೆಗೆ ಈ ದರ್ಗಾದ ಗುಂಬಜ್‌ ನವೀಕರಣ ಕಾಮಗಾರಿ ನಡೆಸಲು ಮುಂದಾಗಿರುವುದು. ಈ ಕಾಮಗಾರಿಗೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು ಕಾಮಗಾರಿ ನಿಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ.

ದರ್ಗಾಕ್ಕೆ ಗುಂಬಜ್‌ ನಿರ್ಮಾಣ ಮಾಡುವಾಗ ವಿರೋಧ ಎದುರಾಗಿದೆ.

ವಕ್ ಬೋರ್ಡ್ ಅಧೀನದಲ್ಲಿರುವ ದರ್ಗಾ ನವೀಕರಣಕ್ಕೆ 8 ಲಕ್ಷ ರೂಪಾಯಿ ಮಂಜೂರು ಆಗಿದ್ದು ಯಾವುದೇ ಕಾರಣಕ್ಕೂ ಹಣ ಬಿಡುಗಡೆ ಮಾಡದಂತೆ ಒತ್ತಾಯಿಸಲಾಗಿದೆ. ಟಿಪ್ಪು ಸುಲ್ತಾನ್ ಕಾಲದಲ್ಲಿ ದೇವಾಲಯವನ್ನು ನಾಶ ಮಾಡಿ ದರ್ಗಾ ನಿರ್ಮಿಸಲಾಗಿದೆ ಎಂದು ಹಿಂದೂ ಮುಖಂಡರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ : Dharma Dangal‌ : ಕಾವೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವಕ್ಕೆ ಧರ್ಮ ದಂಗಲ್‌ ಬಿಸಿ

Exit mobile version