Site icon Vistara News

Dharma Dangal : ಕೆಸರುಮಡು ಜಾತ್ರೆಯಲ್ಲಿ ಕಿರಿಕಿರಿ; ಮಸೀದಿ ಪಕ್ಕದ ಕಲ್ಲಿಗೆ ಪೂಜೆ ಮಾಡಲು ಮುಸ್ಲಿಮರ ಆಕ್ಷೇಪ

Kesarumadu temple

ತುಮಕೂರು: ತುಮಕೂರು ಜಿಲ್ಲೆಯ ಕೆಸರುಮಡು ಗ್ರಾಮದಲ್ಲಿ ಧರ್ಮ ದಂಗಲ್‌ (Dharma Dangal) ಆರಂಭವಾಗಿದೆ. ಇಲ್ಲಿನ ಮಸೀದಿ ಪಕ್ಕದಲ್ಲೇ ಇರುವ ಕರಗಲಮ್ಮ ದೇವಾಲಯದ ಕಲ್ಲಿಗೆ ಪೂಜೆ (Pooja to Karagalamma devi statue) ಮಾಡಲು ಮುಸ್ಲಿಮರು ವಿರೋಧ (opposition by musilms) ವ್ಯಕ್ತಪಡಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಕೆಸರಮಡು ಗ್ರಾಮದಲ್ಲಿ ಗ್ರಾಮ ದೇವತೆ ಆಗಿರುವ ಮಾರಮ್ಮನ ಜಾತ್ರೆಗೆ (Maramma Festival) ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಲ್ಲಿನ ಮಾರಮ್ಮನ ಜಾತ್ರೆ ಎಂದರೆ ಇಡೀ ಊರಿಗೆ ಹಬ್ಬ. ಇದರ ಭಾಗವಾಗಿ ಜಾತ್ರೆಗೂ ಮುನ್ನ ಉಪ್ಪಾರ ಮಾಡುವುದು ಎನ್ನುವ ಸಂಪ್ರದಾಯವಿದೆ. ಉಪ್ಪಾರ ಮಾಡುವುದು ಎಂದರೆ ಪೂಜೆ ಮಾಡಿ ಮೊಸರನ್ನವನ್ನು ಎಡೆ ಹಾಕುವುದು. ಈ ಎಡೆ ಹಾಕುವ ಪ್ರಕ್ರಿಯೆ ನಡೆಯುವುದು ಕರಗಲಮ್ಮ ದೇವಾಲಯದ ಕಲ್ಲಿಗೆ ಪೂಜೆ ಮಾಡುವ ಮೂಲಕ. ಕಲ್ಲಿಗೆ ಪೂಜೆ ಮಾಡಿ ಎಡೆ ಇಡುವುದು ಪದ್ಧತಿ. ಈ ಕ್ರಮ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಈ ಪೂಜೆ ಮಾಡುವ ಕಲ್ಲು ಇರುವುದು ಇರುವುದು ಇಲ್ಲಿನ ಮಸೀದಿಯ ಆವರಣ ಗೋಡೆಗೆ ತಾಗಿಕೊಂಡಂತೆ. ನಿಜವೆಂದರೆ ಇಷ್ಟು ವರ್ಷಗಳ ಕಾಲ ಯಾವುದೇ ಸಮಸ್ಯೆ ಇಲ್ಲದೆ ಈ ಪೂಜೆ, ಎಡೆ ಇಡುವ ಪ್ರಕ್ರಿಯೆ ನಡೆದುಕೊಂಡು ಬಂದಿತ್ತು. ಆದರೆ, ಈ ಬಾರಿ ತಮ್ಮ ಆವರಣದ ಪಕ್ಕದಲ್ಲಿ ಎಡೆ ಇಡಬಾರದು ಎಂದು ಮುಸ್ಲಿಂ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ವಿವಾದ ಉಂಟಾಗಿದೆ.

ಕರಗಲಮ್ಮ ದೇವಸ್ಥಾನದಲ್ಲಿ ಸೇರಿದ ಜನ

ಊರಿನ ಜಾತ್ರೆಗೆ ಮುಸ್ಲಿಂ ಸಮುದಾಯ ಊರಿನ ಜಾತ್ರೆಗೆ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ನಡೆಯುತ್ತಿರುವ ಈ ಸಂಪ್ರದಾಯಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಪದ್ಧತಿಯಂತೆ ಪದ್ಧತಿಯಂತೆ ಮುಂದುವರಿಕೆ ಅವಕಾಶ ನೀಡಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಸಂಪ್ರದಾಯ ಪಾಲನೆಗೆ ಪಟ್ಟು ಹಿಡಿದಿರುವ ಗ್ರಾಮಸ್ಥರು ಮತ್ತು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಣ್ಣಮಟ್ಟಿಗಿನ ಅಶಾಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಎರಡೂ ಗುಂಪಿನ ಪ್ರಮುಖರನ್ನು ಕರೆಸಿಕೊಂಡು ಮಾತುಕತೆ ನಡೆಸುವ ಸಾಧ್ಯತೆಗಳಿವೆ. ಹಿಂದಿನ ಸಂಪ್ರದಾಯಗಳನ್ನು ಮುರಿಯದೆ ಪರಸ್ಪರ ಸಹಕಾರ ನೀಡುತ್ತಾ ಸಹಬಾಳ್ವೆಯಿಂದ ಇರಬೇಕು ಎಂದು ಇಲ್ಲಿನ ಹಿರಿಯರು ಹೇಳುತ್ತಿದ್ದಾರೆ. ದೇವರ ವಿಚಾರದಲ್ಲಿ ಧರ್ಮಗಳ ನಡುವೆ ದಂಗಲ್‌ ಮಾಡುವುದು ಬೇಡ ಎನ್ನುವುದು ಊರಿನ ಹೆಚ್ಚಿನವರ ಅಭಿಮತ.

ಕೆಸರುಮಡು ದರ್ಗಾ

ಕೆಸರುಮಡುವಿನ ದರ್ಗಾ ಕೂಡಾ ತುಂಬ ಜನಪ್ರಿಯವಾಗಿದ್ದು, ಇದಕ್ಕೆ ರಾಜ್ಯದ ಹಲವು ಭಾಗಗಳಿಂದ ಜನ ಹೋಗುತ್ತಾರೆ. ಜಾತ್ಯತೀತವಾಗಿ, ಧರ್ಮಾತೀತವಾಗಿ ಈ ದರ್ಗಾದ ಕಾರಣಿಕವನ್ನು ನಂಬುತ್ತಾರೆ. ಹೀಗಿರುವಾಗ ಸಣ್ಣ ಪುಟ್ಟ ವಿಷಯಗಳನ್ನು ಇಟ್ಟುಕೊಂಡು ವಿವಾದವನ್ನು ಹುಟ್ಟಿಸಬಾರದು ಎಂದು ಗ್ರಾಮಸ್ಥರು ಹೇಳುತ್ತಿದ್ದು, ಕಲ್ಲಿನ ಪೂಜೆಗೆ ಅವಕಾಶ ಕೊಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Dharma Dangal :‌ ಕೂದುವಳ್ಳಿ ದರ್ಗಾ ಹಿಂದೆ ಚಂದ್ರಮೌಳೀಶ್ವರ ದೇವಸ್ಥಾನವಾಗಿತ್ತೇ? ; ಹಿಂದು ಸಂಘಟನೆಗಳ ವಾದ

Exit mobile version