ಮಂಗಳೂರು: ರಾಜ್ಯದಲ್ಲಿ ವ್ಯಾಪಾರ ದಂಗಲ್ ಜೋರಾಗಿದೆ. ದೇವಸ್ಥಾನಗಳಲ್ಲಿ ನಡೆಯುವ ಜಾತ್ರೆ ಸಂದರ್ಭದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಒತ್ತಡ ಹೆಚ್ಚಾಗುತ್ತಿದೆ. ಸುಳ್ಯ ಜಾತ್ರೆಯಲ್ಲಿ ಒಂದು ಹಂತದಲ್ಲಿ ಎಲ್ಲ ಧರ್ಮೀಯರಿಗೆ ವ್ಯಾಪಾರಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿತ್ತಾದರೂ ಅಂತಿಮವಾಗಿ ಹಿಂದುಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಶ್ರೀಚನ್ನಕೇಶವ ದೇವಸ್ಥಾನದಲ್ಲಿ ಜ. ೯ರಿಂದ 12ರವರೆಗೆ ವರ್ಷಾವಧಿ ಜಾತ್ರೆ ನಡೆಯಲಿದೆ. ಜ.6ರಂದು ಜಾತ್ರೆಯ ಸಂತೆ ಮಳಿಗೆಗಳ ಏಲಂ ನಡೆಯಲಿದೆ. ಅಂಗಡಿಗಳ ಏಲಂಗೆ ಸಂಬಂಧಿಸಿ ಜ.3ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಎಲ್ಲಾ ಧರ್ಮದವರಿಗೂ ಮುಕ್ತ ಅವಕಾಶ ನೀಡಲು ತೀರ್ಮಾನಿಸಲಾಗಿತ್ತು.
ಆದರೆ, ಇದನ್ನು ಹಿಂದು ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದವು. ಹಿಂದು ಸಂಘಟನೆಗಳ ಒತ್ತಡದಿಂದ ಬುಧವಾರ ಸಂಜೆ ದಿಢೀರ್ ತುರ್ತು ಸಭೆ ನಡೆಸಲಾಗಿದ್ದು, ಅದರಲ್ಲಿ ಹಿಂದು ಧರ್ಮದವರಿಗೆ ಮಾತ್ರ ಅವಕಾಶ ಎಂದು ತೀರ್ಮಾನಿಸಲಾಗಿದೆ. ಜನವರಿ ೬ರಂದು ನಡೆಯಲಿರುವ ಏಲಂ ನಲ್ಲಿ ಹಿಂದು ಧರ್ಮದವರು ಮಾತ್ರ ಭಾಗವಹಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ.
ವ್ಯಾಪಾರಕ್ಕೆ ಮುಕ್ತ ಅವಕಾಶ ಎಂದು ತೀರ್ಮಾನಿಸಿ ಬಳಿಕ ದಿಢೀರ್ ಬದಲಾವಣೆ ಮಾಡಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ | Marikamba Fair | ಸಾಗರ ಮಾರಿಕಾಂಬಾ ಜಾತ್ರೆಯಲ್ಲಿ ಅನ್ಯ ಧರ್ಮೀಯರ ವ್ಯಾಪಾರಕ್ಕೆ ನಿಷೇಧ ಹೇರಲು ಮನವಿ